ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನೇಮಾರ್ ಹೊರಗಟ್ಟಿದ ಕೊಲಂಬಿಯನ್ ಗೆ ಜೀವ ಭಯ

By Mahesh

ರಿಯೊ ಡಿ ಜನೈರೊ, ಜು.7: ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಗಂಭೀರವಾಗಿ ಫೌಲ್ ಮಾಡಿ ತನ್ನನ್ನು ಕೆಳಗುರುಳಿಸಿ ಬೆನ್ನುನೋವಿಗೆ ಕಾರಣರಾದ ಕೊಲಂಬಿಯಾದ ಡಿಫೆಂಡರ್ ಯುಯಾನ್ ಝುನಗ ವಿಶ್ವಕಪ್‌ನ ಫೈನಲ್ ಆಡಬೇಕೆಂಬ ನನ್ನ ಕನಸನ್ನು ಭಗ್ನಗೊಳಿಸಿದರು' ಎಂದು ಬ್ರೆಜಿಲ್ ಫುಟ್ಬಾಲ್ ಸ್ಟಾರ್ ನೇಮಾರ್ ಆರೋಪಿಸಿದ ಬೆನ್ನಲ್ಲೇ ಝನಗ ವಿರುದ್ಧ ನೇಮಾರ್ ಅಭಿಮಾನಿಗಳು ಮುಗಿ ಬಿದ್ದಿದ್ದು ಜೀವ ಬೆದರಿಕೆ ಒಡ್ಡಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಝನಗ ವಿರುದ್ಧ ನೇಮಾರ್ ಅಭಿಮಾನಿಗಳು ಹರಿಹಾಯ್ದಿದ್ದು ಬೇಕಂತಲೆ ಈ ರೀತಿ ಮಾಡಿದ್ದಾನೆ ಅವನನ್ನು ಬಿಡುವುದು ಬೇಡ ಎಂದು ಕಿಡಿಕಾರಿದ್ದಾರೆ.[ರೋಚಕ ಪಂದ್ಯಗಳ ವೇಳಾಪಟ್ಟಿ]

'ಕೊಲಂಬಿಯಾ ಆಟಗಾರ ವಿಶ್ವಕಪ್ ಫೈನಲ್ ಆಡುವ ನನ್ನ ಕನಸನ್ನು ಭಗ್ನಗೊಳಿಸಿದ್ದರೂ ಬ್ರೆಝಿಲ್ ವಿಶ್ವ ಚಾಂಪಿಯನ್ ಆಗುವ ಕನಸು ಮಾತ್ರ ಜೀವಂತವಾಗಿದೆ. ಇನ್ನು ಎರಡು ಪಂದ್ಯಗಳು ಬಾಕಿಯಿವೆ. ನಮ್ಮ ದೇಶ ದಾಖಲೆ ಆರನೆ ಬಾರಿ ವಿಶ್ವಕಪ್ ಎತ್ತುವಲ್ಲಿ ನನ್ನ ಸಹ ಆಟಗಾರರು ಉತ್ತಮ ಪ್ರದರ್ಶನ ನೀಡುವ ಸಂಪೂರ್ಣ ವಿಶ್ವಾಸ ನನಗಿದೆ. ಸಾಧ್ಯವಾದರೆ ಫೈನಲ್ ನಲ್ಲಿ ಒಂದು ನಿಮಿಷವಾದರೂ ನಾನು ಮೈದಾನಕ್ಕೆ ಇಳಿಯಲು ಯತ್ನಿಸುತ್ತೇನೆ'ಎಂದು ನೇಮಾರ್ ಹೇಳಿದ್ದಾರೆ.[ಉಪಾಂತ್ಯಕ್ಕೆ ಜರ್ಮನ್ನರು ಎಂಟ್ರಿ]

ತಂಡದ ತರಬೇತಿ ಶಿಬಿರದಿಂದ ನೇಮಾರ್‌ರನ್ನು ಹೆಲಿಕಾಪ್ಟರ್‌ನ ಮೂಲಕ ರಿಯೊ ಡಿ ಜನೈರೊದ ಆಸ್ಪತ್ರೆಗೆ ಕೊಂಡೊಯ್ಯುವಾಗ ಬ್ರೆಜಿಲ್ ನ ಸಹ ಆಟಗಾರರು ಬೇಗನೆ ಚೇತರಿಸಿಕೊಳ್ಳುವಂತೆ ಹಾರೈಸಿದರು. ಅಗತ್ಯವಿದ್ದರೆ ಘಟನೆಯ ಕುರಿತು ಶಿಸ್ತು ಸಮಿತಿಯಿಂದ ವಿಚಾರಣೆ ನಡೆಸಲಾಗುವುದು ಎಂದು ಫೀಫಾ ಹೇಳಿದೆ. ಆದರೆ, ರೆಫ್ರಿ ಪ್ರಕಾರ ಇದು ಸಾಮಾನ್ಯವಾಗಿ ನಡೆದ ಘಟನೆ ಪೂರ್ವ ನಿಯೋಜಿತವಲ್ಲ ಎಂದಿದ್ದಾರೆ.

ನೇಮಾರ್‌, ಸಿಲ್ವ ಇಲ್ಲದ ಬ್ರೆಜಿಲ್

ನೇಮಾರ್‌, ಸಿಲ್ವ ಇಲ್ಲದ ಬ್ರೆಜಿಲ್

ಕೊಲಂಬಿಯಾ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಗಂಭೀರ ಬೆನ್ನುನೋವಿನಿಂದಾಗಿ ಸ್ಟಾರ್ ಆಟಗಾರ ನೇಮಾರ್ ಟೂರ್ನಿಯಿಂದಲೇ ಹೊರ ನಡೆಬೇಕಾಯಿತು. ಸೆಮಿಸ್ ಗೆ ತಂಡವನ್ನು ಕರೆದೊಯ್ದ ನಾಯಕ ಥಿಯಾಗೋ ಸಿಲ್ವ ಎರಡು ಬಾರಿ ಹಳದಿ ಕಾರ್ಡ್ ಪಡೆದಿರುವುದರಿಂದ ಸೆಮಿಸ್ ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಬಾರ್ಸಿಲೋನದ ಸ್ಟಾರ್ ಆಟಗಾರ ನೇಮಾರ್

ಬಾರ್ಸಿಲೋನದ ಸ್ಟಾರ್ ಆಟಗಾರ ನೇಮಾರ್

ಬಾರ್ಸಿಲೋನದ ಸ್ಟಾರ್ ಆಟಗಾರ ನೇಮಾರ್ 2010ರಲ್ಲಿ ಬ್ರೆಝಿಲ್ ತಂಡವನ್ನು ಸೇರ್ಪಡೆಯಾದ ನಂತರ 54 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 35 ಗೋಲುಗಳನ್ನು ದಾಖಲಿಸಿದ್ದಾರೆ. ಕೇವಲ 22ರ ಹರೆಯದ ನೇಮಾರ್ ಬ್ರೆಝಿಲ್‌ನ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿದ್ದಾರೆ. ಈಗಾಗಲೇ ರೊನಾಲ್ಡಿನೊ, ರಿವಾಲ್ಡೊ ಹಾಗೂ ಟೊಸ್ಟಾವೊ ಅವರ ಗರಿಷ್ಠ ಗೋಲು ದಾಖಲೆಯನ್ನು ನೇಮಾರ್ ಸರಿಗಟ್ಟಿದ್ದಾರೆ.

ನೇಮಾರ್ ಇಲ್ಲದೆ ಬ್ರೆಜಿಲ್ ಗತಿ

ನೇಮಾರ್ ಇಲ್ಲದೆ ಬ್ರೆಜಿಲ್ ಗತಿ

ವಿಂಗರ್ ಬೆರ್ನಾರ್ಡ್ ಅಥವಾ ವಿಲ್ಲಿಯನ್‌ ಅವರು ನೇಮಾರ್ ಸ್ಥಾನ ತುಂಬಲಿದ್ದು, ಜರ್ಮನಿ ವಿರುದ್ಧ ಸೆಮಿಫೈನಲ್ ಪಂದ್ಯ ಜು.8ಕ್ಕೆ ನಿಗದಿಯಾಗಿದೆ. ಫ್ರೆಡ್, ಹಲ್ಕ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.

ನೇಮಾರ್ ಗಾಯಗೊಂಡ ಕ್ಷಣ

ನೇಮಾರ್ ಗಾಯಗೊಂಡ ಕ್ಷಣ ಇಡೀ ಮೈದಾನವೇ ಮೌನಕ್ಕೆ ಶರಣಾಗಿತ್ತು

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X