ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ

FIFA WC 2018: Women scribes complain of growing sexual harassment

ಮಾಸ್ಕೋ, ಜೂ. 26: ಫೀಫಾ ವಿಶ್ವಕಪ್ ಪಂದ್ಯದ ವರದಿಗಾಗಿ ತೆರಳಿದ ಮಹಿಳಾ ಪತ್ರಕರ್ತೆಯರಿಗೆ ಕಾಮುಕರ ಕಾಟ ಎದುರಾಗಿದೆ. ಬ್ರೆಜಿಲ್ ನ ಸುದ್ದಿ ವಾಹಿನಿಯ ಪತ್ರಕರ್ತೆಯೊಬ್ಬರು ವರದಿ ಮಾಡುತ್ತಿದ್ದ ವೇಳೆ ಆನ್ ಸ್ಕ್ರೀನ್ ನಲ್ಲೇ ಅಭಿಮಾನಿಯೊಬ್ಬ ಮುತ್ತಿಕ್ಕಿದ ಘಟನೆ ಭಾನುವಾರ (ಜೂ.24) ನಡೆದ ಬಳಿಕ ಈಗ ದೂರುಗಳು ಬರಲಾರಂಭಿಸಿವೆ.

ಮಯಂಕ್ ಅಗರ್ವಾಲ್ ಶತಕಕ್ಕೆ ತಲೆಬಾಗಿದ ವೆಸ್ಟ್ ಇಂಡೀಸ್ 'ಎ'ಮಯಂಕ್ ಅಗರ್ವಾಲ್ ಶತಕಕ್ಕೆ ತಲೆಬಾಗಿದ ವೆಸ್ಟ್ ಇಂಡೀಸ್ 'ಎ'

ಒಬ್ಬರಿಗಷ್ಟೇ ಅಲ್ಲ, ಪಂದ್ಯಾಟದ ವರದಿಗಾಗಿ ತೆರಳಿದ್ದ ಇಬ್ಬರು ಪತ್ರಕರ್ತೆಯರಿಗೆ ಅಭಿಮಾನಿಗಳು ಲೈಂಗಿಕ ದೌರ್ಜನ್ಯದ ಬಿಸಿ ಮುಟ್ಟಿಸಿದ ಘಟನೆ ಬಳಿಕ ಪ್ರಕರಣ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ನೇರ ಪ್ರಸಾರದ ವೇಳೆ ಕೊಂಬಿಯಾ ಪತ್ರಕರ್ತೆ ಕೂಡ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾರೆ.

ಬ್ರೆಜಿಲ್ ನ ಟಿವಿ ಗ್ಲೋಬೊ ಮತ್ತು ಸ್ಪೋರ್ಟ್ಸ್ ಟಿವಿ ವರದಿಗಾಗಿ ತೆರಳಿದ್ದ ಜೂಲಿಯಾ ಗಿಮಾರಾಸ್ ಅವರು ಸೆನೆಗಲ್-ಜಪಾನ್ ಪಂದ್ಯದ ವೇಳೆ ರಷ್ಯಾದ ಯೆಕಟೇನ್ಬರ್ಗ್ ಕ್ರೀಡಾಂಗಣದ ಮುಂದೆ ವರದಿ ನೀಡುತ್ತಿದ್ದರು. ಈ ವೇಳೆ ಮಧ್ಯೆ ನುಗ್ಗಿದ ಅಭಿಮಾನಿ ವರ್ದಿಗಾರ್ತಿಗೆ ಮುತ್ತಿಕ್ಕಲು ಯತ್ನಿಸಿದ್ದ. ಆ ಬಳಿಕ ಲೈವ್ ಪ್ರಸಾರದ 22 ಸೆಕೆಂಡ್ ಗಳ ಈ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿತ್ತು.

ವೀಡಿಯೋ ಬಗ್ಗೆ ಟ್ವೀಟ್ ಮಾಡಿ ದೂರಿತ್ತಿರುವ ಗ್ಲೋಬೊ ಟವಿ, ಅಭಿಮಾನಿ ಹುಚ್ಚಾಟಿಕೆಯ ವೀಡಿಯೋ ಟ್ವಿಟರ್ ನಲ್ಲಿ ಸುಮಾರು 1.9 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಿಸಲ್ಪಟ್ಟಿದೆ ಎಂದಿತ್ತು. (ಮೇಲಿನ ವಿಡಿಯೋದಲ್ಲಿ ಮಹಿಳಾ ಪತ್ರಕರ್ತೆಯೊಂದಿಗೆ ಅಭಿಮಾನಿ ಅನುಚಿತವಾಗಿ ವರ್ತಿಸುತ್ತಿರುವುದನ್ನು ನೀವು ಗಮನಿಸಬಹುದು).

ಅಭಿಮಾನಿ ಅನುಚಿತವಾಗಿ ವರ್ತಿಸಿದ್ದನ್ನು ಕಂಡು ಸಿಟ್ಟುಗೊಂಡ ವರದಿಗಾರ್ತಿ ಗಿಮಾರಾಸ್ ಆ ಕೂಡಲೇ ಆತನಿಗೆ ಗದರಿದ್ದರು. 'ಹೀಗೆಲ್ಲ ಮಾಡಬೇಡ. ಹೀಗೆಲ್ಲ ಯಾವತ್ತೂ ಮಾಡೋಕೆ ಹೋಗ್ಬೇಡ. ನಾನಿದಕ್ಕೆ ಅವಕಾಶ ನೀಡುವುದಿಲ್ಲ. ಇದು ಒಳ್ಳೆಯ ಕ್ರೀಡಾಭಿಮಾನಿಯ ಲಕ್ಷಣವಲ್ಲ' ಎಂದು ತುಸು ಖಾರವಾಗೇ ಗಿಮಾರಾಸ್ ತಿಳಿ ಹೇಳಿದ್ದರು.

Story first published: Tuesday, June 26, 2018, 15:11 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X