ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಿರಾಶ್ರಿತನಾಗಿದ್ದ ಮೊಡ್ರಿಚ್ ಇಂದು ಕ್ರೋವೇಷಿಯಾದ ಹೀರೋ!

By Mahesh
Fifa WC : How refugee Modric rose to rule Russia 2018

ಯುದ್ಧದಲ್ಲಿ ಬದುಕುಳಿದು ನಿರಾಶ್ರಿತರಾಗಿದ್ದ ಕುಟುಂಬದ ಕೂಸು ಲುಕಾ ಮೊಡ್ರಿಚ್ ಇಂದು ಫೀಫಾ ವಿಶ್ವಕಪ್ ನ ಹೀರೋ. ಸಮರ್ಥವಾಗಿ ಕ್ರೋವೇಷಿಯಾ ತಂಡವನ್ನು ಮುನ್ನಡೆಸಿ, ಫೈನಲ್ ಹಂತಕ್ಕೇರಿಸಿದ್ದಾರೆ.

ವಿಶ್ವಕಪ್ ಫೈನಲ್‌ನಲ್ಲಿ ಫುಟ್ಬಾಲ್ ತಂಡದ ನಾಯಕ ಮೊಡ್ರಿಚ್ ಹಾಗೂ ಅವರ ಪೂರ್ವಿಕರು ತಮ್ಮ ಜೀವನದುದ್ದಕ್ಕೂ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ.

ಫೀಫಾ ವಿಶ್ವಕಪ್ 2018 ಫೈನಲ್ ಯಾರು ಗೆಲ್ಲಲಿದ್ದಾರೆ? ಇಲ್ಲಿದೆ ಉತ್ತರ

ರಿಯಲ್ ಮ್ಯಾಡ್ರಿಡ್ ಪರ ಕೂಡಾ ಆಡುವ ಮಿಡ್‌ಫೀಲ್ಡರ್ ಮೊಡ್ರಿಚ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಮೊದಲ ಬಾರಿಗೆ ಕ್ರೋವೇಷಿಯಾ ತಂಡವು ಫೈನಲ್ ತಲುಪಲು ನೆರವಾಗಿದ್ದಾರೆ.

ಎರಡು ದಶಕದ ಬಳಿಕ ಕ್ರೋಷಿಯಾಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶಎರಡು ದಶಕದ ಬಳಿಕ ಕ್ರೋಷಿಯಾಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ

ಸೆರ್ಬಿಯಾ ದೇಶದ ಆಕ್ರಮಣಕಾರರಿಂದ ತಪ್ಪಿಸಿಕೊಂಡು ಕ್ರೊವೇಷಿಯಾಕ್ಕೆ ಬಂದು ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದ ಕುಟುಂಬದಲ್ಲಿ ಮೊಡ್ರಿಚ್ ಜನಿಸಿದರು. ಅವರ ತಾಯಿ ಜವಳಿ ಕಾರ್ಮಿಕರಾಗಿದ್ದರು.

ಅವರ ತಂದೆ ಯುದ್ಧದ ವೇಳೆ ಕ್ರೊವೇಷಿಯಾದ ಸೈನಿಕರ ಕಾರುಗಳ ರಿಪೇರಿ ಮಾಡುವ ಮೆಕಾನಿಕ್ ಆಗಿದ್ದರು. ಸೆರ್ಬಿಯ ಸೇನೆಯಿಂದ ಮೃತರಾದ ಅಜ್ಜ ಲುಕಾ ಸ್ಮರಣೆಗಾಗಿ ಮೊಡ್ರಿಚ್ ಗೆ ಲೂಕಾ ಮೊಡ್ರಿಚ್ ಎಂದು ಹೆಸರಿಡಲಾಗಿತ್ತು. ಇನ್ನಷ್ಟು ವಿವರ ಮುಂದೆ ಓದಿ...

ನಿರಾಶ್ರಿತರಾದಾಗ ಮೊಡ್ರಿಚ್ ಆರು ವರ್ಷದ ಬಾಲಕ

ನಿರಾಶ್ರಿತರಾದಾಗ ಮೊಡ್ರಿಚ್ ಆರು ವರ್ಷದ ಬಾಲಕ

ಮೊಡ್ರಿಚ್ ಕುಟುಂಬವು ಸೆರ್ಬಿಯಾದಿಂದ ಕ್ರೊವೇಷಿಯಾಕ್ಕೆ ನಿರಾಶ್ರಿತರಾಗಿ ಬಂದಾಗ ಆರು ವರ್ಷ ಬಾಲಕನಾಗಿದ್ದರು. ಯುದ್ದದ ಸಮಯದಲ್ಲಿ ಮೊಡ್ರಿಚ್ ಹಾಗೂ ಅವರ ಕುಟುಂಬ ಸದಸ್ಯರು ಝಾದರ್ ಪಟ್ಟಣದ ಹೊಟೇಲ್ ವೊಂದರಲ್ಲಿ ವಾಸವಾಗಿದ್ದರು. ಬಾಲ್ಕನ್ ಯುದ್ಧ ಮುಂದುವರಿದ ಕಾರಣ ಮೊಡ್ರಿಚ್ ಚಿಕ್ಕಂದಿನಲ್ಲೇ ಗ್ರೆನೇಡ್ ಹಾಗೂ ಬುಲೆಟ್‌ಗಳ ಸದ್ದುಗಳ ನಡುವೆ ಬೆಳೆದಿದ್ದರು.

ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದೆವು

ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದೆವು

ಮೊಡ್ರಿಚ್ ವಾಸಿಸುತ್ತಿದ್ದ ಹೊಟೇಲ್‌ನಲ್ಲಿ ನೀರು ಹಾಗೂ ವಿದ್ಯುತ್ ಬೆಳಕಿರಲಿಲ್ಲ. ಮೊಡ್ರಿಚ್ ತಂದೆ ಮೆಕಾನಿಕ್ ಕೆಲಸವನ್ನು ಮುಂದುವರಿಸುತ್ತಾ ಮಗನಿಗೆ ಫುಟ್ಬಾಲ್ ಆಟಗಾರನಾಗಲು ಬೇಕಾದ ಸೌಲಭ್ಯ ಒದಗಿಸಿಕೊಟ್ಟಿದ್ದರು. 'ಯುದ್ದ ಆರಂಭವಾದಾಗ ನಾವು ನಿರಾಶ್ರಿತರಾಗಿದ್ದೆವು. ಅದು ನಿಜವಾಗಿಯೂ ಕಠಿಣ ಸಮಯವಾಗಿತ್ತು. ಆಗ ನನಗೆ ಆರು ವರ್ಷವಾಗಿತ್ತು. ನನಗೆ ಯುದ್ಧದ ನೆನಪು ಸ್ಪಷ್ಟವಾಗಿದೆ. ನಾವು ಹೊಟೇಲ್‌ನಲ್ಲಿ ಬಹಳಷ್ಟು ಕಾಲ ನೆಲೆಸಿದ್ದೆವು. ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೆವು ಎಂದು ಮೊಡ್ರಿಚ್ ಹೇಳಿಕೊಂಡಿದ್ದಾರೆ.

ನಾನು ಫುಟ್ಬಾಲ್‌ನ್ನು ತುಂಬಾ ಇಷ್ಟಪಡುತ್ತಿದ್ದೆ

ನಾನು ಫುಟ್ಬಾಲ್‌ನ್ನು ತುಂಬಾ ಇಷ್ಟಪಡುತ್ತಿದ್ದೆ

'ಕಷ್ಟದ ನಡುವೆಯೂ ನಾನು ಫುಟ್ಬಾಲ್‌ನ್ನು ತುಂಬಾ ಇಷ್ಟಪಡುತ್ತಿದ್ದೆ. ನಾನು ಧರಿಸಿದ್ದ ಮೊದಲ ಪ್ಯಾಡ್‌ನಲ್ಲಿ ಬ್ರೆಝಿಲ್‌ನ ರೊನಾಲ್ಡಿನೊ ಚಿತ್ರವಿತ್ತು. ನಾನು ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಯುದ್ದ ನನ್ನನ್ನು ಬಲಿಷ್ಠವಾಗಿಸಿತು. ಅದು ನನ್ನ ಹಾಗೂ ಕುಟುಂಬದವರಿಗೆ ತುಂಬಾ ನೋವು ನೀಡಿದೆ. ಅದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ ಎಂದು ಮೊಡ್ರಿಚ್ ಹೇಳಿದ್ದಾರೆ.

ವಿಶ್ವದ ಶ್ರೇಷ್ಠ ಮಿಡ್ ಫೀಲ್ಡರ್

ವಿಶ್ವದ ಶ್ರೇಷ್ಠ ಮಿಡ್ ಫೀಲ್ಡರ್

2006ರ ಮಾರ್ಚ್ ನಲ್ಲಿ ಅರ್ಜೆಂಟೀನಾ ವಿರುದ್ಧ ಮೊದಲ ಪಂದ್ಯವಾಡಿದ ಮೊಡ್ರಿಚ್, ಇಟಲಿ ವಿರುದ್ಧದ ಫ್ರೆಂಡ್ಲಿ ಪಂದ್ಯದಲ್ಲಿ ಮೊದಲ ಅಂತಾರಾಷ್ಟ್ರೀಯ ಗೋಲು ಬಾರಿಸಿದರು.

ಮಿಡ್ ಫೀಲ್ಡರ್ ಆದರೂ ಮುಂಪಡೆಯ ಆಟಗಾರರಿಗೆ ಗೋಲು ಬಾರಿಸಲು ನೆರವಾಗುವುದರಲ್ಲಿ ಮೊಡ್ರಿಚ್ ಪರಿಣಿತಿ ಹೊಂದಿದ್ದಾರೆ. ಕ್ರೋವೇಷಿಯಾ ಅಲ್ಲದೆ, ವಿಶ್ವದ ಶ್ರೇಷ್ಠ ಮಿಡ್ ಫೀಲ್ಡರ್ ಗಳ ಸಾಲಿನಲ್ಲಿ ಮೊಡ್ರಿಚ್ ನಿಲ್ಲುತ್ತಾರೆ.

Story first published: Sunday, July 15, 2018, 15:32 [IST]
Other articles published on Jul 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X