ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ನಾಕೌಟ್ ಹಂತಕ್ಕೆ ಪಾಕಿಸ್ತಾನದಲ್ಲಿ ತಯಾರಿಸಿದ ಚೆಂಡು!

By Mahesh
FIFA World Cup 2018: Adidas Telstar Mechta for Knockout Phase

ಮಾಸ್ಕೋ, ಜೂನ್ 27: ಪಾಕಿಸ್ತಾನದಲ್ಲಿ ವಿನ್ಯಾಸಗೊಂಡಿರುವ ಹೊಸ ಫುಟ್ಬಾಲ್ ಗಳನ್ನು ವಿಶ್ವಕಪ್​ 2018ರ ನಾಕೌಟ್ ಹಂತದಲ್ಲಿ ಬಳಸಲಾಗುತ್ತದೆ ಎಂದು ಫೀಫಾ ಮಂಗಳವಾರದಂದು ಪ್ರಕಟಿಸಲಾಗಿದೆ.

ಈ ಬಾರಿ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಅಡಿಡಾಸ್ ಸಂಸ್ಥೆಯ ಅಧಿಕೃತ ಚೆಂಡು 'ಟೆಲ್​ಸ್ಟಾರ್ 18' ಲೀಗ್ ಹಂತದಲ್ಲಿ ಬಳಸಲಾಗುತ್ತಿತ್ತು. ಆದರೆ, 16ರ ಹಂತದಲ್ಲಿ ಅಡಿಡಾಸ್ ಟೆಲ್ ಸ್ಟಾರ್ ಮೆಚ್ಟಾ(Mechta) ಚೆಂಡು ಬಳಸಲಾಗುತ್ತದೆ.

ವಿಶ್ವಕಪ್​ನಲ್ಲಿ ಬಳಸುವ ಅಧಿಕೃತ ಚೆಂಡು 'ಟೆಲ್​ಸ್ಟಾರ್ 18' ಗಳನ್ನು ಪಾಕಿಸ್ತಾನದ ಸಿಯೋಲ್ ಕೋಟ್ ನ ಅಡಿಡಾಸ್ ಘಟಕದಲ್ಲಿ ತಯಾರಿಸಲಾಗುತ್ತದೆ. ಹೊಸ ವಿನ್ಯಾಸದ ಟೆಲ್ ಸ್ಟಾರ್ ಚೆಂಡುಗಳಲ್ಲಿ near-field communication ಚಿಪ್ ಅಳವಡಿಸಲಾಗಿರುತ್ತದೆ.

2013ರವರೆಗೆ ಚೆಂಡುಗಳನ್ನು ಕೈಯಿಂದ ಹೊಲಿಯಲಾಗುತ್ತಿತ್ತು. ನಂತರ ಯಂತ್ರೋಪಕರಣಗಳ ಮೂಲಕ ಚೆಂಡಿನ ಹೊಲಿಗೆಗಳಿಗೆ ಬದಲಾಗಿ ಶಾಖದ ಮೂಲಕ ಜೋಡಿಸಲಾಗುತ್ತಿದೆ.

ವಿಶ್ವದ ಇತರ ಪ್ರಮುಖ ಫುಟ್​ಬಾಲ್ ಟೂರ್ನಿಗಳಾದ ಜರ್ಮನಿಯ ಬುಂಡೆಸ್​ಲಿಗಾ, ಫ್ರಾನ್ಸ್ ಲೀಗ್-1 ಮತ್ತು ಚಾಂಪಿಯನ್ಸ್ ಲೀಗ್​, ಲಾ ಲೀಗಾಗಳಿಗೂ ಇಲ್ಲಿಂದ ಚೆಂಡು ರಫ್ತಾಗುತ್ತದೆ.

2014ರ ಬ್ರೆಜಿಲ್ ವಿಶ್ವಕಪ್​ನಲ್ಲಿ ಬಳಸಲಾದ 'ಬ್ರಜುಕಾ' ಚೆಂಡು ಕೂಡ ಪಾಕಿಸ್ತಾನದಲ್ಲೇ ತಯಾರಾಗಿತ್ತು. ಪ್ರತಿ ಚೆಂಡಿನ ಬೆಲೆ ಭಾರತೀಯ ಕರೆನ್ಸಿಯಲ್ಲಿ 9 ರಿಂದ 10 ಸಾವಿರ ರು ಗಳಾಗಿವೆ.

Story first published: Wednesday, June 27, 2018, 18:03 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X