ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಪೆರುವಿನೆದುರು ಡೆನ್ಮಾರ್ಕ್ ಗೆ 1-0ರ ಗೆಲುವು

FIFA World Cup 2018: Denmark beat Peru 1-0

ಮಾಸ್ಕೋ, ಜೂ. 16: ಫೀಫಾ ವಿಶ್ವಕಪ್ 2018ರ ಸಿ ಗ್ರೂಪ್ ನ ಪೆರು ಮತ್ತು ಡೆನ್ಮಾರ್ಕ್ ಮುಖಾಮುಖಿಯಲ್ಲಿ ಡೆನ್ಮಾರ್ಕ್ 1-0 ಅಂತರದ ಗೆಲುವು ಸಾಧಿಸಿದೆ. 59ನೇ ನಿಮಿಷದಲ್ಲಿ ಯೂಸುಫ್ ಪೌಲ್ಸೆನ್ ಸಿಡಿಸಿದ ಗೋಲ್ ನೆರವಿನಿಂದ ಡೆನ್ಮಾರ್ಕ್ ಗೆಲುವನ್ನು ಸಂಭ್ರಮಿಸಿತು.

ಪಂದ್ಯದ ಗೋಲ್ ವಿವರ, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ

ಮೊರ್ಡೋವಿಯಾ ಅರೇನಾದಲ್ಲಿ ನಡೆದ ಈ ಪಂದ್ಯದಲ್ಲಿ 13ನೇ ನಿಮಿಷದ ಮುಕ್ತಾಯಕ್ಕೆ ತಂಡಗಳ ಪಾಯಿಂಟ್ 0-0 ಇದ್ದು ಪಂದ್ಯ ಕುತೂಹಲ ಮೂಡಿಸಿತ್ತು. ಈ ಸಂದರ್ಭ ಪೆರು ಗೋಲ್ ಗಾಗಿ ಪ್ರಯತ್ನಿಸಿತಾದರೂ ಡೆನ್ಮಾರ್ಕ್ ಗೋಲ್ ಕೀಪರ್ ಷ್ಮೆಚೆಲ್ ತಡೆದರು.

46ನೇ ನಿಮಿಷದಲ್ಲಿ ಪೆರುವಿನ ಕ್ರಿಶ್ಚಿಯನ್ ಕ್ಯೂವಾ ಅವರು ಗೋಲ್ ಬಾರಿಸುವುದರಲ್ಲಿದ್ದರು. ಆದರೆ ಇದು ಸ್ವಲ್ಪದರಲ್ಲೇ ತಪ್ಪಿಹೋಯಿತು. ಆದರೆ 59ನೇ ನಿಮಿಷದಲ್ಲಿ ಡೆನ್ಮಾರ್ಕ್ ನ ಯೂಸುಫ್ ಗೋಲ್ ಸಿಡಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು.

62ನೇ ನಿಮಿಷದಲ್ಲಿ ಪೆರು, 67ನೇ ನಿಮಿಷದಲ್ಲಿ ಡೆನ್ಮಾರ್ಕ್ ತನ್ನ ಆಟಗಾರರನ್ನು ಬದಲಿಸಿಕೊಂಡಿತು. ನಂತರ ಇತ್ತಂಡಗಳ ನಡುವೆ ಗೋಲ್ ಗಾಗಿ ಭರ್ಜರಿ ಕಾದಾಟ ನಡೆಯಿತು. 87ನೇ ನಿಮಿಷದಲ್ಲಿ ಡೆನ್ಮಾರ್ಕ್ ನ ಥೋಮಸ್ ಡೆಲಾನೆ ಅವರಿಗೆ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು.

ಗೋಲ್ ಗಾಗಿ ಪೆರು ಎಷ್ಟು ಸೆಣಸಾಡಿದರೂ ಗೋಲ್ ದಾಖಲಿಸಲಾಗಲಿಲ್ಲ. ಕಾಲಾವಧಿ ಮುಗಿಯುತ್ತಾ ಬಂದಿದ್ದರಿಂದ ಕೊನೆಗೆ ಪೆರು ಗೋಲ್ ಇಲ್ಲದೆ ಡೆನ್ಮಾರ್ಕ್ ಎದುರು ಶರಣಾಯಿತು.

ಶನಿವಾರದ ಮೊದಲ ಪಂದ್ಯದಲ್ಲಿ ಸಿ ಗ್ರೂಪ್ ನ ಆಸ್ಟ್ರೇಲಿಯಾ-ಫ್ರಾನ್ಸ ತಂಡಗಳು ಕಾದಾಡಿದ್ದವು. ಇದರಲ್ಲಿ ಫ್ರಾನ್ಸ್ 2-1 ಅಂತರದಿಂದ ಗೆದ್ದಿತ್ತು. ಅರ್ಜೆಂಟೀನಾ ಮತ್ತು ಐಸ್ ಲ್ಯಾಂಡ್ ತಂಡಗಳ ಎರಡನೇ ಪಂದ್ಯ 1-1ರ ಡ್ರಾದೊಂದಿಗೆ ಅಂತ್ಯಗೊಂಡಿತ್ತು.

Story first published: Saturday, June 16, 2018, 23:46 [IST]
Other articles published on Jun 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X