ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018 ನಾಕೌಟ್ ಹಂತ: ಯಾರ ವಿರುದ್ಧ ಯಾರು?

By Mahesh
FIFA world cup 2018 : ನಾಕೌಟ್ ಹಂತದಲ್ಲಿ ಯಾರ ವಿರುದ್ಧ ಯಾರು?
Fifa World Cup 2018 Last 16 : The knockout stage fixture schedule

ಬೆಂಗಳೂರು, ಜೂನ್ 29: ಫೀಫಾ ವಿಶ್ವಕಪ್ 2018ರ ಲೀಗ್ ಹಂತದ ಕದನ ಮುಕ್ತಾಯವಾಗಿದ್ದು, 16ರ ಹಂತದ ವೇಳಾಪಟ್ಟಿ ಸಿದ್ಧವಾಗಿದೆ. ಹಾಲಿ ಚಾಂಪಿಯನ್ ಜರ್ಮನಿ ಲೀಗ್ ಹಂತದಿಂದಲೇ ನಿರ್ಗಮಿಸಿ, ಮುಖಭಂಗ ಅನುಭವಿಸಿದೆ.

ಜೂನ್ 28ಕ್ಕೆ ಗ್ರೂಪ್ ಹಂತದ ಕೊನೆ ಪಂದ್ಯಗಳು ಮುಕ್ತಾಯವಾಗಿದ್ದು, 32 ತಂಡಗಳಿಂದ ಆರಂಭವಾದ ವಿಶ್ವಕಪ್ ನಲ್ಲಿ ಈಗ 16 ತಂಡಗಳು ಉಳಿದಿವೆ. ಜೂನ್ 30ರಿಂದ 16 ಹಂತದ 8 ನಾಕೌಟ್ ಪಂದ್ಯಗಳು ನಡೆಯಲಿವೆ. ಜುಲೈ 1, 2 ಹಾಗೂ 3ರತನಕ ಪಂದ್ಯಗಳಿವೆ.

ಅಚ್ಚರಿ ಮೂಡಿಸಬಲ್ಲ ನಾಲ್ಕು ತಂಡಗಳುಅಚ್ಚರಿ ಮೂಡಿಸಬಲ್ಲ ನಾಲ್ಕು ತಂಡಗಳು

ಜೂನ್ 30: ಸಿ ಗುಂಪಿನ ವಿಜೇತ ತಂಡ ಹಾಗೂ ಡಿ ಗುಂಪಿನ ರನ್ನರ್ ಅಪ್ ನಡುವೆ ಮೊದಲ ನಾಕೌಟ್ ಪಂದ್ಯ ನಡೆದರೆ, ಎ ಗುಂಪಿನ ಅಗ್ರಸ್ಥಾನಿ ಹಾಗೂ ಬಿ ಗುಂಪಿನ ಎರಡನೇ ಸ್ಥಾನಿ ನಡುವೆ ಎರಡನೇ ಪಂದ್ಯ ನಡೆಯಲಿದೆ.

ಜುಲೈ 01: ಬಿ ಗುಂಪಿನ ಟಾಪರ್ ವಿರುದ್ಧ ಎ ಗುಂಪಿನ ರನ್ನರ್ ಅಪ್ ಪಂದ್ಯ. ದಿನದ ಮತ್ತೊಂದು ಪಂದ್ಯದಲ್ಲಿ ಡಿ ಗುಂಪಿನ ವಿಜೇತ ವಿರುದ್ಧ ಸಿ ಗುಂಪಿನ ರನ್ನರ್ ಅಪ್

ಜುಲೈ 02: ಇ ಗುಂಪಿನ ವಿನ್ನರ್ ವಿರುದ್ಧ ಎಫ್ ಗುಂಪಿನ ರನ್ನರ್ ಅಪ್ ಹಾಗೂ ಜಿ ಗುಂಪಿನ ಅಗ್ರಸ್ಥಾನಿ ವಿರುದ್ಧ ಎಚ್ ಗುಂಪಿನ ಎರಡನೇ ಸ್ಥಾನಿ.

ಜುಲೈ 03: ಎಫ್ ಗುಂಪಿನ ವಿನ್ನರ್ ವಿರುದ್ಧ ಇ ಗುಂಪಿನ ರನ್ನರ್ ಅಪ್ ಹಾಗೂ ಎಚ್ ಗುಂಪಿನ ಟಾಪರ್ ವಿರುದ್ಧ ಜಿ ಗುಂಪಿನ ಎರಡನೇ ತಂಡ ಆಡಲಿದೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ದಿನಾಂಕ- ಯಾವ ತಂಡದ ವಿರುದ್ಧ ಯಾವ ತಂಡ
ಜೂನ್ 30: ಶನಿವಾರ
* ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ (7:30 PM)
* ಉರುಗ್ವೆ ವಿರುದ್ಧ ಪೋರ್ಚುಗಲ್ (11:30 PM)


ಜುಲೈ 01 : ಭಾನುವಾರ
* ಸ್ಪೇನ್ ವಿರುದ್ಧ ರಷ್ಯಾ (7:30 PM)
* ಕ್ರೋವೇಷಿಯಾ ವಿರುದ್ಧ ಡೆನ್ಮಾರ್ಕ್ (11:30 PM)


ಜುಲೈ 02 : ಸೋಮವಾರ
* ಬ್ರೆಜಿಲ್ ವಿರುದ್ಧ ಮೆಕ್ಸಿಕೋ (7:30 PM)
* ಬೆಲ್ಜಿಯಂ ವಿರುದ್ಧ ಜಪಾನ್ (11:30 PM)


ಜುಲೈ 03 : ಮಂಗಳವಾರ
* ಸ್ವೀಡನ್ ವಿರುದ್ಧ ಸ್ವಿಟ್ಜರ್ಲೆಂಡ್
* ಕೊಲಂಬಿಯಾ ವಿರುದ್ಧ ಇಂಗ್ಲೆಂಡ್

ಜುಲೈ 6 ಹಾಗೂ ಜುಲೈ 07ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಜುಲೈ 10 ಹಾಗೂ ಜುಲೈ 11ರಂದು ಸೆಮಿಫೈನಲ್ ಹಾಗೂ ಮೂರನೆ ಸ್ಥಾನಕ್ಕೆ ಜುಲೈ 14ರಂದು ಪಂದ್ಯಗಳು ನಡೆಯಲಿವೆ. ಜುಲೈ 15ರಂದು ಅಂತಿಮ ಹಣಾಹಣಿ ನಿಗದಿಯಾಗಿದೆ.

Story first published: Friday, June 29, 2018, 2:15 [IST]
Other articles published on Jun 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X