ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೇರಳ: ನಾಪತ್ತೆಯಾಗಿದ್ದ ಮೆಸ್ಸಿ ಅಭಿಮಾನಿ, ಶವವಾಗಿ ಪತ್ತೆ

By Mahesh
 Kerala football fan, who went missing after Argentina’s defeat, found dead

ಕೊಟ್ಟಾಯಂ, ಜೂನ್ 24: ಫೀಫಾ ವಿಶ್ವಕಪ್ 2018ರ ನೆಚ್ಚಿನ ತಂಡ ಆರ್ಜೆಂಟೀನಾಕ್ಕೆ ಹೀನಾಯ ಸೋಲುಂಟಾಗಿದ್ದು ಹಾಗೂ ಲಿಯೊನೆಲ್ ಮೆಸ್ಸಿ ಗೋಲು ಗಳಿಸದಿರುವುದನ್ನು ಸಹಿಸಿಕೊಳ್ಳಲು ಆಗದೆ ನಾಪತ್ತೆಯಾಗಿದ್ದ ಇಲ್ಲಿನ ನಿವಾಸಿ ಡಿನು ಅವರ ಶವ, ಭಾನುವಾರದಂದು ನದಿ ತೀರದಲ್ಲಿ ಸಿಕ್ಕಿದೆ.

ಕೇರಳದ ಅಭಿಮಾನಿ 30 ವರ್ಷ ವಯಸ್ಸಿನ ಡಿನು ಜೋಸೆಫ್ ಅವರು ಸೂಸೈಡ್ ನೋಟ್ ಬರೆದಿಟ್ಟು ಶುಕ್ರವಾರದಂದು ಮನೆ ಬಿಟ್ಟು ನಾಪತ್ತೆಯಾಗಿದ್ದರು.

ವಿಶ್ವಕಪ್ 2018: ಅರ್ಜೆಂಟೀನಾ ಸೋಲಿಗೆ ಕಾರಣವಾದ 5 ಅಂಶಗಳುವಿಶ್ವಕಪ್ 2018: ಅರ್ಜೆಂಟೀನಾ ಸೋಲಿಗೆ ಕಾರಣವಾದ 5 ಅಂಶಗಳು

ಗುರುವಾರದಂದು ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾ ತಂಡ 3-0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತ್ತು.

ಕೇರಳದಲ್ಲಿ ಅರ್ಜೆಂಟೀನಾ ತಂಡಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಬ್ರೆಜಿಲ್ ಹಾಗೂ ಆರ್ಜೆಂಟೀನಾ ತಂಡಕ್ಕೆ ಭಾರತದಲ್ಲಿ ಅಪಾರ ಫ್ಯಾನ್ಸ್ ಇದ್ದಾರೆ.

ಪೊಲೀಸರ ಮಾಹಿತಿಯಂತೆ, ಡಿನು ಅವರು ಸಮೀಪದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಅದರಂತೆ, ಶೋಧ ಕಾರ್ಯ ನಡೆಸಿದಾಗ ಕೋಟ್ಟಾಯಂನ ಇಲ್ಲಿಕ್ಕಲ್ ಸೇತುವೆ ಬಳಿ ಡಿನು ಶವ ಪತ್ತೆಯಾಗಿದೆ.

ಮಲೆಯಾಳಂನಲ್ಲಿ ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ 'ನಾನು ನೋಡಬೇಕಾದ್ದೆಲ್ಲ ನೋಡಿದ್ದೇನೆ. ಬೇರೆ ಏನಾದರೂ ನೋಡಲು ಬಾಕಿ ಇದೆಯೆ? ನಾನು ಆಳಕ್ಕೆ ಧುಮುಕುತ್ತಿದ್ದೇನೆ ಎಂದು ಬರೆಯಲಾಗಿತ್ತು.

ಅರ್ಜೆಂಟೀನಾದ ಬಹುದೊಡ್ಡ ಫ್ಯಾನ್ ಆಗಿದ್ದ ಡಿನು, ಅರ್ಜೆಂಟೀನಾ ತಂಡದ ಸೋಲಿನಿಂದ ಕಂಗೆಟ್ಟಿದ್ದ. ಸ್ನೇಹಿತರು ಈ ವಿಷಯವಾಗಿ ಗೇಲಿ ಮಾಡಬಹುದು ಎಂಬ ಭಯದಿಂದ ಈ ರೀತಿ ಮಾಡಿರುವ ಶಂಕೆ ಇದೆ. ಆತನ ಮೊಬೈಲ್ ತುಂಬಾ ಮೆಸ್ಸಿಯ ಫೋಟೋಗಳಿವೆ. ಅಂದಹಾಗೆ ಭಾನುವಾರಂದು ಮೆಸ್ಸಿಗೆ 31ನೇ ಹುಟ್ಟುಹಬ್ಬದ ಸಂಭ್ರಮ.

Story first published: Sunday, June 24, 2018, 20:54 [IST]
Other articles published on Jun 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X