ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೈನಲ್ ತಲುಪಿದ ಖುಷಿ, ಥಾಯ್ ಮಕ್ಕಳಿಗೆ ಅರ್ಪಣೆ : ಪೋಗ್ಬಾ

By Mahesh
FIFA World Cup 2018: Pogba dedicates France win to freed Thai players

ಮಾಸ್ಕೋ, ಜುಲೈ 11: ಥಾಯ್ಲೆಂಡ್ ನ ಫುಟ್ಬಾಲ್ ತಂಡದ ಮಕ್ಕಳು ಸಾವು ಗೆದ್ದು ಬಂದ ಕಥೆ ಇಡೀ ವಿಶ್ವದ ಗಮನ ಸೆಳೆದಿದೆ. ಗುಹೆಯೊಂದರಲ್ಲಿ ಸಿಲುಕಿದ್ದ ಮಕ್ಕಳು ಜೀವಂತವಾಗಿ ಹೊರ ಬಂದ ಘಟನೆ ಎಲ್ಲರಿಗೂ ಸಂತಸ ತಂದಿದೆ.

ಇತ್ತ ಫೀಫಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಜಯ ದಾಖಲಿಸಿದ ಫ್ರಾನ್ಸ್, ಫೈನಲ್ ಪ್ರವೇಶಿಸಿದೆ. ಈ ಗೆಲುವನ್ನು ಥಾಯ್ ಫುಟ್ಬಾಲ್ ತಂಡ ಮಕ್ಕಳಿಗೆ ಅರ್ಪಿಸುತ್ತಿರುವುದಾಗಿ ಸ್ಟಾರ್ ಆಟಗಾರ ಪಾಲ್ ಪೋಗ್ಬಾ ಹೇಳಿದ್ದಾರೆ.

ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2018ರ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಈ ಬಾರಿಯ 'ಡಾರ್ಕ್ ಹಾರ್ಸ್' ಬೆಲ್ಜಿಯಂ ತಂಡದ ವಿರುದ್ಧ ಫ್ರಾನ್ಸ್ ಏಕೈಕ ಗೋಲಿನಿಂದ ಗೆಲುವು ಸಾಧಿಸಿದೆ.

ಸತತ 18 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದವನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಂಡಿದ್ದ ಎಲೈಟ್‌ ಫಾರಿನ್‌ ಡೈವರ್ಸ್‌ ಮತ್ತು ಥಾಯ್‌ನ ನೌಕಾಪಡೆ ಸಿಬ್ಬಂದಿ , 25 ವರ್ಷದ ಕೋಚ್‌ ಹಾಗೂ ಮಕ್ಕಳೆಲ್ಲರನ್ನು ಅಭಿನಂದಿಸಿ, ನೀವೇ ನಿಜವಾದ ಹೀರೋಗಳು ಎಂದು ಪೋಗ್ಬಾ ಕರೆದಿದ್ದಾರೆ.

ಅಬ್ಬಾ ಪೋಗ್ಬಾ! ಕ್ಲಬ್ಬಿನಿಂದ ಕ್ಲಬ್ಬಿಗೆ ಜಿಗಿಯಲು 813 ಕೋಟಿ ರು ಅಬ್ಬಾ ಪೋಗ್ಬಾ! ಕ್ಲಬ್ಬಿನಿಂದ ಕ್ಲಬ್ಬಿಗೆ ಜಿಗಿಯಲು 813 ಕೋಟಿ ರು

ಫ್ರಾನ್ಸ್ ಹಾಗೂ ಮ್ಯಾಂಚೆಸ್ಟರ್‌ ಯುನೈಟೆಡ್‌ ಮಿಡ್‌ಫೀಲ್ಡರ್‌ ಪೋಗ್ಬಾ ಟ್ವೀಟ್‌ ಮಾಡಿ, ಈ ವಿಜಯವು ಈ ದಿನದ ಹೀರೋಗಳಿಗೆ ಸಲ್ಲುತ್ತದೆ. ಒಳ್ಳೆಯದಾಗಲಿ ಹುಡುಗರೇ. ನೀವೆಲ್ಲ ತುಂಬ ಪ್ರಬಲರಾಗಿದ್ದೀರ ಎಂದಿದ್ದಾರೆ.

ಫಿಫಾ ಬಾಸ್ ಗಿಯಾನಿ ಇನ್ಫಾಂಟಿನೊ ಬಾಲಕಿಯರ ವೈಲ್ಡ್ ಬೋರ್ಸ್ ಫುಟ್ಬಾಲ್ ತಂಡವನ್ನು ಭಾನುವಾರ ನಡೆಯಲಿರುವ ವಿಶ್ವಕಪ್ ಅಂತಿಮ ಹಣಾಹಣಿ ವೀಕ್ಷಿಸಲು ಆಹ್ವಾನಿಸಿದ್ದಾರೆ. ಆದರೆ, ಅಪಾಯದಿಂದ ಪಾರಾಗಿ ಬಂದರೂ ಮಕ್ಕಳು ಇನ್ನೂ ಆಘಾತದಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ. ಆರೋಗ್ಯದ ದೃಷ್ಟಿಯಿಂದ ದೂರ ಪ್ರಯಾಣವನ್ನು ಸದ್ಯಕ್ಕೆ ನಿರ್ಬಂಧಿಸಲಾಗಿದೆ.

Story first published: Wednesday, July 11, 2018, 19:17 [IST]
Other articles published on Jul 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X