ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮರಡೋನಾ ದಾಖಲೆ ಸಮಕ್ಕೆ ನಿಂತ ಬೆಲ್ಜಿಯಂ ಹೀರೋ ಲುಕಾಕು!

By Mahesh
Fifa World Cup 2018: Romelu Lukaku equals Diego Maradonas record

ಮಾಸ್ಕೋ, ಜೂನ್ 24: ಬೆಲ್ಜಿಯಂ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಮುಂಪಡೆ ಆಟಗಾರ ರುಮೆಲು ಲುಕಾಕು ಅವರು ಅರ್ಜೆಂಟೀನಾದ ದಿಗ್ಗಜ ಡಿಯಾಗೋ ಮರಡೋನಾ ಅವರ ದಾಖಲೆ ಸಮಕ್ಕೆ ನಿಂತಿದ್ದಾರೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಟುನಿಷಿಯಾ ವಿರುದ್ಧದ ಜಿ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ತಂಡ 5-2 ಅಂತರದಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ 2 ಗೋಲು ಬಾರಿಸಿದ ಲುಕಾಕು ಅವರು ಪನಾಮಾ ವಿರುದ್ಧವೂ ಎರಡು ಗೋಲು ಬಾರಿಸಿದ್ದರು. ಬೆಲ್ಜಿಯಂ ವಿರುದ್ಧ 70 ಪಂದ್ಯಗಳಲ್ಲಿ 38 ಅಂತಾರಾಷ್ಟ್ರೀಯ ಗೋಲು ಗಳಿಸಿದ್ದಾರೆ.
25 ವರ್ಷ ವಯಸ್ಸಿಗೆ ರೊನಾಲ್ಡೋ ಅವರು 69 ಪಂದ್ಯಗಳಿಂದ 22 ಗೋಲು ಮಾತ್ರಗಳಿಸಿದ್ದರು.

 ಐ ಹ್ಯಾವ್ ಗಾಟ್ ಸಂಥಿಂಗ್ ಟು ಸೇ : ಲುಕಾಕುವಿನ ಹೃದಯ ಬಿರಿಯುವ ಕಥೆ ಐ ಹ್ಯಾವ್ ಗಾಟ್ ಸಂಥಿಂಗ್ ಟು ಸೇ : ಲುಕಾಕುವಿನ ಹೃದಯ ಬಿರಿಯುವ ಕಥೆ

ಮರಡೋನಾ ದಾಖಲೆ: 1986ರ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಹ್ಯಾಂಡ್ ಆಫ್ ಗಾಡ್ ಗೋಲು ಸೇರಿದಂತೆ 2 ಗೋಲು ಬಾರಿಸಿದ್ದ ಮರಡೋನಾ ಅವರು ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ನಲ್ಲಿ 2-1 ಅಂತರದಲ್ಲಿ ಅರ್ಜೆಂಟೀನಾ ಗೆಲ್ಲಲು ನೆರವಾಗಿದ್ದರು. ನಂತರ ಸೆಮಿಫೈನಲ್ ನಲ್ಲಿ ಬೆಲ್ಜಿಯಂ ವಿರುದ್ಧ 2-0 ಗೋಲು ದಾಖಲಿಸಿದ್ದರು.

 ಫೀಫಾ ವಿಶ್ವಕಪ್: ಟ್ಯುನೀಷಿಯಾ ವಿರುದ್ಧ ಬೆಲ್ಜಿಯಂಗೆ ಭರ್ಜರಿ ಜಯ ಫೀಫಾ ವಿಶ್ವಕಪ್: ಟ್ಯುನೀಷಿಯಾ ವಿರುದ್ಧ ಬೆಲ್ಜಿಯಂಗೆ ಭರ್ಜರಿ ಜಯ

ಈಗ ಈ ದಾಖಲೆಯನ್ನು ಲುಕಾಕು ಸಮಗೊಳಿಸಿದ್ದಾರೆ. ನಾಲ್ಕು ಗೋಲು ಗಳಿಸಿ, ರೊನಾಲ್ಡೋ ಜತೆಗೆ ವಿಶ್ವಕಪ್ 2018ರ ಅತಿ ಹೆಚ್ಚು ಗೋಲು ಗಳಿಕೆ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸದ್ಯಕ್ಕೆ ಬೆಲ್ಜಿಯಂ ಆಟಗಾರರ ಪೈಕಿ ಲುಕಾಕು ಎಲ್ಲರಿಗಿಂತ ಮುಂದಿದ್ದಾರೆ. ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ಜಾನ್ ಸಿಯುಲೆಮನ್ಸ್ 6 ಗೋಲು ಗಳಿಸಿದ್ದು ಬೆಲ್ಜಿಯಂ ಆಟಗಾರರೊಬ್ಬರ ದಾಖಲೆಯಾಗಿದೆ.

Story first published: Sunday, June 24, 2018, 17:16 [IST]
Other articles published on Jun 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X