ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜಲಚರ ಹೇಳಿದ ಭವಿಷ್ಯ : ಈಜಿಪ್ಟ್ ವಿರುದ್ಧ ರಷ್ಯಾಕ್ಕೆ ಗೆಲುವು

By Mahesh
FIFA World Cup 2018 : Sochi oracle otter picks Russia as win over Egypt

ಸೈಂಟ್ ಪೀಟರ್ಸ್ ಬರ್ಗ್, ಜೂನ್ 19: ಫೀಫಾ ವಿಶ್ವಕಪ್ 2018 ಜಾಗತಿಕ ಸಮರದ ಉದ್ಘಾಟನಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಅತಿಥೇಯ ರಷ್ಯಾ ಇಂದು ಈಜಿಪ್ಟ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲೂ ರಷ್ಯಾ ಗೆಲ್ಲಲಿದೆ ಎಂದು ಪ್ರಾಣಿಯೊಂದು ಭವಿಷ್ಯ ನುಡಿದಿದೆ.

ರಷ್ಯಾ ಹಾಗೂ ಈಜಿಪ್ಟ್ ಪಂದ್ಯ ಲೈವ್ ಸ್ಕೋರ್, ತಂಡ

ಮೊದಲ ಪಂದ್ಯದ ಫಲಿತಾಂಶವನ್ನು ಬಿಳಿ ಬೆಕ್ಕು ಅಚಿಲ್ಸ್ ತೋರಿಸಿದ್ದು, ರಷ್ಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಈ ಬಾರಿ ಸೋಚಿ ನಗರದ ಹ್ಯಾರಿ ಎಂಬ ಹೆಸರಿನ ಕಡಲ ಇಲಿ (Otter) ಭವಿಷ್ಯ ನುಡಿದಿದೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಎ ಗುಂಪಿನ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ ರಷ್ಯಾ ಗೆಲ್ಲಲಿದೆ ಎಂದು ಓಟರ್ ತೋರಿಸಿದೆ ಎಂದು ಅಕ್ವೇರಿಯಂನ ನಿರ್ದೇಶಕರಾದ ಝನ್ನಾ ಝಜಿನಾ ಹೇಳಿದ್ದಾರೆ. ಸೌದಿ ಅರೇಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಕೂಡಾ ರಷ್ಯಾದ ಬಾವುಟ ವಿರುವ ಚೆಂಡನ್ನು ಆಯ್ಕೆ ಮಾಡಿತ್ತು.

FIFA World Cup 2018 : Sochi oracle otter picks Russia as win over Egypt

ಪ್ರತಿ ವಿಶ್ವಕಪ್ ಟೂರ್ನಮೆಂಟ್ ನಲ್ಲೂ ಅಧಿಕೃತ ಭವಿಷ್ಯ ನುಡಿಯುವ ಪ್ರಾಣಿಗೆ ವಿಶೇಷ ಸ್ಥಾನಮಾನ ಸಿಗುತ್ತದೆ. ಕರಾರುವಾಕ್ ಭವಿಷ್ಯ ತೋರಿಸುತ್ತಿದ್ದ ಆಕ್ಟೋಪಸ್ ಪಾಲ್ ಇನ್ನು ನೆನಪು ಮಾತ್ರ. ಈ ಬಾರಿ ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನ ಹರ್ಮಿಟೇಜ್ ಮ್ಯೂಸಿಯಂನಲ್ಲಿರುವ ಬಿಳಿ ಬಣ್ಣದ ಬೆಕ್ಕು ಸೇರಿದಂತೆ ಅನೇಕ ಪ್ರಾಣಿಗಳು ಭವಿಷ್ಯಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯ

2010ರ ಫೀಫಾ ವಿಶ್ವಕಪ್‌ ಸಂದರ್ಭದಲ್ಲಿ ಜರ್ಮನಿ ತಂಡ ಆಡಿದ 13 ಪಂದ್ಯಗಳಲ್ಲಿ 11 ಫಲಿತಾಂಶಗಳು ಪೌಲ್ ಅಕ್ಟೋಪಸ್ ಹೇಳಿದ ರೀತಿಯೇ ಫಲಿತಾಂಶಗಳು ಬಂದಿದ್ದವು. ಇದಲ್ಲದೆ ಫೈನಲ್ ನಲ್ಲಿ ಸ್ಪೇನ್ ಗೆಲ್ಲಲಿದೆ ಎಂದಿದ್ದ ಪೌಲ್ ಭವಿಷ್ಯವೂ ನಿಜವಾಗಿತ್ತು.

Story first published: Tuesday, June 19, 2018, 13:25 [IST]
Other articles published on Jun 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X