ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊನೇ ಕ್ಷಣದಲ್ಲಿ ಗೋಲ್ ಸಿಡಿಸಿ ಜರ್ಮನಿಗೆ ಆಘಾತವಿತ್ತ ಕೊರಿಯಾ

FIFA World Cup 2018: South Korea beat Germany 2-0

ಮಾಸ್ಕೋ, ಜೂ. 27: ರಷ್ಯಾದ ಕಝಾನ್ ಅರೇನಾದಲ್ಲಿ ನಡೆದ ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಸೌತ್ ಕೊರಿಯಾ-ಜರ್ಮನಿ ಪಂದ್ಯದಲ್ಲಿ ಸೌತ್ ಕೊರಿಯಾ 2-0ರ ಗೆಲುವು ಸಾಧಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ 6 ಹೆಚ್ಚುವರಿ ನಿಮಿಷಗಳನ್ನು ಸೇರಿಸಿದಾಗ ಕೊರಿಯಾ ಗೋಲ್ ದಾಖಲಿಸಿ ಬಲಿಷ್ಟ ಜರ್ಮನಿಗೆ ಆಘಾತವನ್ನು ನೀಡಿತು. ಈ ಪಂದ್ಯದ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಜರ್ಮನಿ ಪಂದ್ಯಾಟದಿಂದ ಹೊರಬಿದ್ದಿದೆ.

ಪಂದ್ಯದ ಸ್ಕೋರ್ ಕಾರ್ಡ್

90+2ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಕಿಮ್ ಯಂಗ್ ಗ್ವಾನ್ ಅವರು ಮೊದಲ ಗೋಲ್ ದಾಖಲಿಸಿ ಕೊರಿಯಾ ಗೆಲುವಿನ ಮುನ್ಸೂಚನೆ ನೀಡಿದರು. ಎದುರಾಳಿಯಿಂದ ಅಂತಿಮ ಕ್ಷಣದಲ್ಲಿ ಗೋಲ್ ದಾಖಲಾಗಿದ್ದು ಜರ್ಮನಿಗೆ ಒತ್ತಡವನ್ನು ನೀಡಿತು. ಅದಾಗಿ ಕೊನೇಕ್ಷಣ ಅಂದರೆ 90+6ನೇ ನಿಮಿಷದಲ್ಲಿ ಕೊರಿಯಾ ಮತ್ತೊಂದು ಗೋಲ್ ಬಾರಿಸಿತು.

ಪಂದ್ಯಾರಂಭವಾಗಿ 19ನೇ ನಿಮಿಷದಲ್ಲೇ ಕೊರಿಯಾ ಮೊದಲ ಗೋಲ್ ಬಾರಿಸುವುದರಲ್ಲಿತ್ತು. ಆದರೆ ಜರ್ಮನಿಯ ಗೋಲ್ ಕೀಪರ್ ಮ್ಯಾನುಯೆಲ್ ನ್ಯೂಯರ್ ಎದುರಾಳಿಪರ ಗೋಲ್ ದಾಖಲಾಗದಂತೆ ನೋಡಿಕೊಂಡರು.

ಇದಾಗಿ ದ್ವಿತೀಯಾರ್ಧದ 51ನೇ ನಿಮಿಷಲದಲ್ಲಿ ಜರ್ಮನಿಯ ಟಿಮೊ ವರ್ನರ್ ಅವರು ಗೋಲ್ ಬಾರಿಸಿ ಜರ್ಮನಿಗೆ ಮುನ್ನಡೆ ಕೊಡುವುದರಲ್ಲಿದ್ದರು. ಆದರೆ ಅವರ ಪ್ರಯತ್ನ ವಿಫಲವಾಯಿತು. ಒದ್ದ ಚೆಂಡು ಕೊರಿಯಾ ಗೋಲ್ ಪೋಸ್ಟ್ ನ ಹೊರಗಿಂದಾಗಿ ಹಾದುಹೋಯಿತು. ಅಂತಿಮವಾಗಿ ಹಾಲಿ ಚಾಂಪಿಯನ್ ಜರ್ಮನಿಗೆ ಮುಖಭಂಗ ಅನುಭವಿಸುವಂತಾಯ್ತು.

Story first published: Wednesday, June 27, 2018, 22:37 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X