ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಬ್ರೆಜಿಲ್ vs ಸ್ವಿಟ್ಜರ್ ಲ್ಯಾಂಡ್ ಪಂದ್ಯ 1-1ರಿಂದ ಡ್ರಾ

FIFA World Cup 2018: Switzerland hold Brazil to 1-1 draw

ಮಾಸ್ಕೋ, ಜೂ. 17: ಫೀಫಾ ವಿಶ್ವಕಪ್ ಭಾನುವಾರದ ಬ್ರೆಜಿಲ್ ಮತ್ತು ಸ್ವಿಟ್ಜರ್ ಲ್ಯಾಂಡ್ ಮುಖಾಮುಖಿಯಲ್ಲಿ ಎರಡೂ ತಂಡಗಳು 1-1ರ ಸಮಬಲ ಸಾಧಿಸಿವೆ. ಮೊದಲು ಬ್ರೆಸಿಲ್ ನಂತರ ಸ್ವಿಟ್ಜರ್ ಲ್ಯಾಂಡ್ ತಲಾ ಒಂದೊಂದು ಗೋಲ್ ಬಾರಿಸಿ ಪಂದ್ಯವನ್ನು ಡ್ರಾಗೊಳಿಸಿತು.

ಕಾಮೆಂಟರಿ, ಸ್ಕೋರ್ ಕಾರ್ಡ್ ಗಾಗಿ ಲಿಂಕ್ ಕ್ಲಿಕ್ ಮಾಡಿ

ಪಂದ್ಯದಲ್ಲಿ ಬ್ರೆಜಿಲ್ ನ ಫಿಲಿಪ್ ಕೌಟಿನ್ಹೊ ಅವರು ಮೊದಲು ಗೋಲ್ ಖಾತೆ ತೆರೆದರು. 20ನೇ ನಿಮಿಷದಲ್ಲಿ ಬ್ರಿಜಿಲ್ ಪರ ಮೊದಲ ಗೋಲ್ ದಾಖಲಾಯಿತು. ನೇಮರ್ ಅವರೊಡನೆ ಗುದ್ದಾಡಿದ್ದಕ್ಕಾಗಿ 31ನೇ ನಿಮಿಷದಲ್ಲಿ ಸ್ವಿಟ್ಜರ್ ಲ್ಯಾಂಡ್ ನ ನಾಯಕ ಸ್ಟೀಫನ್ ಲಿಚ್ಸ್ಟೇನ್ನರ್ ಅವರ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು.

ಪಂದ್ಯದ ಮೊದಲಾರ್ಧ ಇತ್ತಂಡಗಳು ಗೋಲ್ ಗಾಗಿ ಕಾದಾಡಿದರೂ ಗೋಲ್ ದಾಖಲಾಗಲಿಲ್ಲ. ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೂ ಮುನ್ನ 2 ನಿಮಿಷಗಳನ್ನು ಸೇರಿಸಲಾಯಿತು. ಮೊದಲಾರ್ಧ ಪಂದ್ಯ ಮುಕ್ತಾಯಕ್ಕೆ ಬ್ರೆಜಿಲ್ 1-0 ಮುನ್ನಡೆಯಲ್ಲಿತ್ತು.

ಪಂದ್ಯದ ದ್ವಿತೀಯಾರ್ಧದಲ್ಲೂ ಇತ್ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯಿತು. 47ನೇ ನಿಮಿಷದಲ್ಲಿ ಬ್ರೆಜಿಲ್ ನ ಕ್ಯಾಸೆಮಿಯೊ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು. ಇದಾಗಿ 50ನೇ ನಿಮಿಷದಲ್ಲಿ ಸ್ಟೀವನ್ ಜುಬರ್ ಅವರು ಸ್ವಿಟ್ಜರ್ ಲ್ಯಾಂಡ್ ಪರ ಗೋಲ್ ಸಿಡಿಸಿ ಬ್ರೆಜಿಲ್ ಮುನ್ನಡೆಯನ್ನು ಸರಿದೂಗಿಸಿದರು.

ರೊಸ್ತೊವ್-ಆನ್-ಡಾನ್ ಸ್ಟೇಡಿಯಂ ನಲ್ಲಿ ನಡೆದ ಗ್ರೂಪ್ ಇಯ ಈ ಪಂದ್ಯದಲ್ಲಿ 50ರಿಂದ 89 ನಿಮಿಷಗಳ ಕಾಲಾವಧಿಯಲ್ಲಿ ಎರಡೂ ತಂಡಗಳಿಂದ ಒಟ್ಟು ಆರು ಆಟಗಾರರ ಬದಲಾವಣೆ ನಡೆಯಿತು. 90ನೇ ನಿಮಿಷದಲ್ಲಿ ಬ್ರೆಜಿಲ್ ಪರ ಗೋಲ್ ದಾಖಲಾಗುವುದರಲ್ಲಿತ್ತು. ಆದರೆ ಸ್ವಿಸ್ ಗೋಲ್ ಕೀಪರ್ ಅದನ್ನು ತಡೆದರು.

Story first published: Monday, June 18, 2018, 1:43 [IST]
Other articles published on Jun 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X