ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ 2018 : ಅಚ್ಚರಿಯ ಫಲಿತಾಂಶ ನೀಡಬಲ್ಲ ತಂಡಗಳಿವು

By ಮೈಖೇಲ್ ವರದಿಗಾರ
FIFA World Cup 2018: Three teams that could surprise us

ಬೆಂಗಳೂರು, ಜೂನ್ 15: ವಿಶ್ವದ ಅತಿ ದೊಡ್ಡ ಕ್ರೀಡಾಕೂಟ ಫೀಫಾ ವಿಶ್ವಕಪ್ ಪಂದ್ಯಾವಳಿ ಈಗಾಗಲೇ ಆರಂಭವಾಗಿದೆ. ಯಾರು ಗೆಲ್ಲಬಹುದು, ಯಾರು ಸೋಲಬಹುದು ಅಥವಾ ಯಾವ ಟೀಂ ಅಚ್ಚರಿಯ ಫಲಿತಾಂಶ ನೀಡಬಹುದು ಎಂಬ ಬಗ್ಗೆ ಫುಟ್‌ಬಾಲ್ ಅಭಿಮಾನಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಕಳೆದ ಬಾರಿಯ ಚಾಂಪಿಯನ್ ಜರ್ಮನಿ, ಈ ಸಲ ರಶಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ಫೇವರಿಟ್ ಆಗಿ ಹೊರಹೊಮ್ಮಿದೆ.

ಫೀಫಾ 2018: ಎಲ್ಲ 32 ತಂಡಗಳ ಅಂತಿಮ ಪಟ್ಟಿಫೀಫಾ 2018: ಎಲ್ಲ 32 ತಂಡಗಳ ಅಂತಿಮ ಪಟ್ಟಿ

ಆದರೆ ಎಲ್ಲ ತಂಡಗಳ ಆಟಗಾರರ ಬಲಾಬಲವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹಲವಾರು ತಂಡಗಳು ಬಲಿಷ್ಠವಾಗಿದ್ದು, ಸಮಬಲದ ಹೋರಾಟ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ.

ಸ್ಪೇನ್, ಜರ್ಮನಿ, ಬ್ರೆಜಿಲ್, ಫ್ರಾನ್ಸ್ ಹಾಗೂ ಅರ್ಜೆಂಟಿನಾ ತಂಡಗಳು ಅತಿ ಬಲಿಷ್ಠ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಎಲ್ಲರೂ ಇವುಗಳ ಮೇಲೆಯೇ ಬಾಜಿ ಕಟ್ಟಲು ಮುಂದಾಗುತ್ತಿರುವುದು ಸಹಜವಾಗಿದೆ. ಆದರೆ ಕಡಿಮೆ ಗಮನ ಸೆಳೆದ, ಸದ್ಯ ಅಷ್ಟೇನೂ ಬಲಿಷ್ಠ ಎಂದೆನಿಸದ ಕೆಲ ತಂಡಗಳು ಡಾರ್ಕ್ ಹಾರ್ಸ್ ಆಗಿ ಮುಂಚೂಣಿಗೆ ಬಂದರೆ ಆಶ್ಚರ್ಯವಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಟೀಂಗಳು ಡಾರ್ಕ್ ಹಾರ್ಸ್ ಆಗುವ ಎಲ್ಲ ಅರ್ಹತೆಗಳನ್ನು ಪಡೆದಿವೆ.

ಕ್ರೋಷಿಯಾ

ಕ್ರೋಷಿಯಾ

ಕಳೆದ ಹಲವಾರು ವರ್ಷಗಳ ಇತಿಹಾಸ ನೋಡಿದರೆ ಕ್ರೋಷಿಯಾ ತಂಡದಲ್ಲಿ ಯಾವಾಗಲೂ ಪ್ರತಿಭಾನ್ವಿತ ಆಟಗಾರರು ಇದ್ದೇ ಇರುತ್ತಾರೆ. ಆದರೆ, ಈ ಬಾರಿಯ ಕ್ರೋಷಿಯಾ ತಂಡ ಶ್ರೇಷ್ಠ ಆಟಗಾರರಿಂದ ಕೂಡಿದ್ದು, ನಿಸ್ಸಂಶಯವಾಗಿ ಅತ್ಯುತ್ತಮ ಹಾಗೂ ಅತಿ ಸಮತೋಲಿತ ತಂಡವಾಗಿದೆ.

ಮಿಡ್ ಫೀಲ್ಡ್ ಆಟಗಾರರಾದ ಲೂಕಾ ಮಾಡ್ರಿಕ್, ಇವಾನ್ ರ್‍ಯಾಕಿಟಿಕ್, ಮ್ಯಾಟ್ಟೆಯೊ ಕೊವಾಸಿಕ್, ಮಾರ್ಸೆಲೊ ಬ್ರೊಜೊವಿಕ್ ಹಾಗೂ ಮಿಲಾನ್ ಬಡೆಲ್ಜ್ ಅವರನ್ನೊಳಗೊಂಡ ಕ್ರೋಷಿಯಾದ ಮಿಡ್‌ಫೀಲ್ಡ್ ಈಗ ವಿಶ್ವದಲ್ಲಿಯೇ ಅತಿ ಬಲಿಷ್ಠವಾಗಿದೆ.

ಇನ್ನು ಮುಂಚೂಣಿ ಆಟಗಾರರಾದ ಮಾರಿಯೊ ಮಾಂಡಜುಕಿಕ್, ಅಂಡ್ರೆಜ್ ಕ್ರಮಾರಿಕ್, ನಿಕೊ ಕಾಲಿನಿಕ್ ಹಾಗೂ ಇಂಟರ್ ಮಿಲಾನ್ ಸ್ಟಾರ್ ಆಟಗಾರ ಇವಾನ್ ಪೆರಿಸಿಕ್ ಎಂಥದೇ ರಕ್ಷಣೆಯನ್ನು ಭೇದಿಸಿ ಚೆಂಡನ್ನು ಗೋಲ್ ಪೋಸ್ಟ್ ವರೆಗೆ ಒಯ್ಯುವ ಸಾಮರ್ಥ್ಯ ಪಡೆದಿದ್ದಾರೆ. ಈ ತಂಡದ ರಕ್ಷಣಾ ಸಾಮರ್ಥ್ಯ ದಾಳಿಗಿಂತ ಕಡಿಮೆ ಇದ್ದರೂ ಕಡೆಗಣಿಸುವಂತಿಲ್ಲ.

ಒಂದು ಕಾಲಕ್ಕೆ ದಾವೋರ್ ಸುಕರ್ ನಂಥ ವಿಶ್ವ ಶ್ರೇಷ್ಠ ಆಟಗಾರ ಕ್ರೋಷಿಯಾ ತಂಡದಲ್ಲಿ ಆಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಟ್ಟಾರೆಯಾಗಿ ನೋಡಿದರೆ ಛಲದಿಂದ ಆಟವಾಡಿದಲ್ಲಿ ಕ್ರೋಷಿಯಾ ಗೆಲುವಿನ ಸನಿಹ ಬರುವುದು ಅಸಾಧ್ಯವೇನಲ್ಲ.

ಸೆನೆಗಲ್

ಸೆನೆಗಲ್

2002 ರ ವಿಶ್ವಕಪ್ ಪಂದ್ಯಾವಳಿಯಲ್ಲಿ 1998 ರ ಚಾಂಪಿಯನ್, ಪ್ರಬಲ ಫ್ರಾನ್ಸ್ ತಂಡವನ್ನು ಸೆನೆಗಲ್ ಮಣಿಸಿ ಅಚ್ಚರಿ ಮೂಡಿಸಿತ್ತು. ಫ್ರಾನ್ಸ್ ಅನ್ನು ಸೋಲಿಸಿ ಸೆನೆಗಲ್ ಕ್ವಾರ್ಟರ್ ಫೈನಲ್ ತಲುಪಿತ್ತು. ಆಗ ತಂಡದ ಆಟಗಾರನಾಗಿದ್ದ ಅಲಿಯು ಸಿಸ್ಸೆ ಈಗ ಸೆನೆಗಲ್ ತಂಡದ ಕೋಚ್.

ಫೀಫಾ ವಿಶ್ವಕಪ್ 2018: ಸೆನೆಗಲ್ ಗೆಲ್ಲುವ ಸಾಧ್ಯತೆಗಳೆಷ್ಟು?

ಸೆಂಟ್ರಲ್ ಮಿಡ್ ಫೀಲ್ಡರ್ಗಳಾದ ಚೇಖೊ ಕೋಯಾಟೆ ಹಾಗೂ ಇದ್ರಿಸಾ ಗುಯೆಯ್ ಅವರನ್ನು ಸನೆಗಲ್ ಡಿಫೆನ್ಸಿವ್ ಮಿಡ್ ಫೀಲ್ಡರ್ ಗಳನ್ನಾಗಿಸುವ ಸಾಧ್ಯತೆಯಿದೆ. ಇದು ಮಾನೆ ಹಾಗೂ ಕೇಟಾ ಬಾಲ್ಡೆ ಅವರಿಗೆ ಫಾರ್ವರ್ಡ್‌ಗಳಾಗುವ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಸೆನೆಗಲ್ ಜಪಾನ್ ವಿರುದ್ಧ ಗೆಲ್ಲಬೇಕು. ಜೊತೆಗೆ ಗ್ರೂಪ್ ನಲ್ಲಿನ ಒಂದು ದೊಡ್ಡ ತಂಡದ ವಿರುದ್ಧ ಕನಿಷ್ಠ ಡ್ರಾ ಮಾಡಿಕೊಂಡರೆ ಮಂದಿನ ಹಂತಕ್ಕೆ ಸುಲಭವಾಗಿ ಪ್ರವೇಶ ಪಡೆಯಬಹುದು.

ಬೆಲ್ಜಿಯಂ

ಬೆಲ್ಜಿಯಂ

ಈ ಸಲದ ಬೆಲ್ಜಿಯಂ ತಂಡ ವಿಶ್ವದಲ್ಲೇ ಅತಿ ಬಲಿಷ್ಠ ತಂಡಗಳಲ್ಲೊಂದಾಗಿದೆ. ಆದರೆ ವಿಶ್ವಮಟ್ಟದಲ್ಲಿ ಈವರೆಗೆ ಅಂಥ ಯಾವ ಸಾಧನೆಯನ್ನು ಮಾಡಿರದ ಕಾರಣ ಬೆಲ್ಜಿಯಂ ಫೇವರಿಟ್ ಆಗಿ ಕಾಣುತ್ತಿಲ್ಲ. ಬೆಲ್ಜಿಯಂನ ಆಟಗಾರರು ತಮ್ಮ ಸಂಪೂರ್ಣ ಶಕ್ತಿ ಒರೆಗೆ ಹಚ್ಚಿದಲ್ಲಿ ವಿಶ್ವಕಪ್ ಗೆಲುವು ಅವರಿಗೆ ಅಸಾಧ್ಯವೇನಲ್ಲ.

ಆದರೆ, ಬ್ರೆಜಿಲ್ ಅಥವಾ ಜರ್ಮನಿಯ ಆಟಗಾರರು ಹೊಂದಿರುವ ಮಟ್ಟದ ಮಾನಸಿಕ ದೃಢತೆ ಬೆಲ್ಜಿಯಂ ಆಟಗಾರರಿಗೆ ಇಲ್ಲ ಎಂಬುದು ಒಂದು ಮೈನಸ್ ಪಾಯಿಂಟ್ ಆಗಿದೆ. ಇಷ್ಟಾದರೂ ಎಲ್ಲ ವಿಭಾಗಗಳಲ್ಲಿನ ಶ್ರೇಷ್ಠ ಪ್ರತಿಭಾವಂತ ಆಟಗಾರರು ಈ ವಿಶ್ವಕಪ್‌ನಲ್ಲಿ ಅಚ್ಚರಿಯ ಫಲಿತಾಂಶ ನೀಡಲು ಸಮರ್ಥರಾಗಿದ್ದಾರೆ.

ಇಂಗ್ಲೆಂಡ್ ತಂಡ

ಇಂಗ್ಲೆಂಡ್ ತಂಡ

ಸದ್ಯಕ್ಕೆ ಇಂಗ್ಲೆಂಡ್ ತಂಡ ಯಾರಿಗೂ ಗೆಲ್ಲುವ ಕುದುರೆ ಅಥವಾ ಫೇವರಿಟ್ ತಂಡ ಎನಿಸಿಲ್ಲ. ಒಂದು ಕಾಲದ ಗತವೈಭವವನ್ನು ಮರುಕಳಿಸುವಲ್ಲಿ ಇಂಗ್ಲೆಂಡ್ ವಿಫಲವಾಗಿದೆ ಎಂದೇ ಹೇಳಬಹುದು. ಏಕೆಂದರೆ 2006 ಹಾಗೂ 20010 ರಲ್ಲಿ ವಿಶ್ವಕಪ್ ನಲ್ಲಿ ಆಡಿದ ಇಂಗ್ಲೆಂಡ್ ತಂಡಗಳಿಗೆ ಹೋಲಿಸಿದರೆ ಈ ಬಾರಿಯ ತಂಡ ಅತ್ಯಂತ ಸಾಮಾನ್ಯವಾಗಿ ಕಂಡು ಬರುತ್ತದೆ.
ಆದರೂ ಮ್ಯಾನೇಜರ್ ಗರೆಥ್ ಸೌತ್‌ಗೇಟ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಬಲಿಷ್ಠವಾಗಿ ಸಂಘಟಿತವಾಗಿದೆ. ಸಾಮರ್ಥ್ಯ ಪ್ರದರ್ಶನಕ್ಕೆ ಈ ಬಾರಿ ಯಾವುದೇ ದೊಡ್ಡ ಒತ್ತಡ ಇರದೇ ಇರುವುದು ಇಂಗ್ಲೆಂಡ್ ಆಟಗಾರರಿಗೆ ಒಳ್ಳೆಯ ಆಟವಾಡಲು ಅನುಕೂಲವಾಗಬಹುದು.

Story first published: Friday, June 15, 2018, 17:18 [IST]
Other articles published on Jun 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X