ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup: ಸ್ವಿಟ್ಜರ್ಲೆಂಡ್ ವಿರುದ್ಧ ಗೆದ್ದು ನಾಕೌಟ್ ಹಂತ ಸ್ಥಾನ ಖಚಿತಪಡಿಸಿಕೊಂಡ ಬ್ರೆಜಿಲ್

Fifa World Cup 2022: 5 Times Champion Brazil Beat Switzerland And Secured Last 16 Spot

5 ಬಾರಿ ಚಾಂಪಿಯನ್‌ಗಳಾದ ಬ್ರೆಜಿಲ್ ಫಿಫಾ ವಿಶ್ವಕಪ್‌ 2022ರಲ್ಲಿ ಗೆಲುವಿನ ಓಟವನ್ನು ಮುಂದುವರೆಸಿದೆ. ಸೋಮವಾರ ದೋಹಾದ ಸ್ಟೇಡಿಯಂ 974 ರಲ್ಲಿ ನಡೆದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 1-0 ಗೆಲುವಿನೊಂದಿಗೆ 16 ರ ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಬ್ರೆಜಿಲ್‌ನ ಕ್ಯಾಸೆಮಿರೊ ಏಕೈಕ ಗೋಲು ಗಳಿಸುವ ಮೂಲಕ ತಂಡಕ್ಕೆ 3 ಅಂಕಗಳನ್ನು ತಂದುಕೊಟ್ಟರು. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಬ್ರೆಜಿಲ್ 16ರ ಸುತ್ತಿಗೆ ಪ್ರವೇಶಿಸಲು ಅರ್ಹತೆ ಗಿಟ್ಟಿಸಿಕೊಂಡಿತು. ಫ್ರಾನ್ಸ್‌ ಬಳಿಕ ಎರಡನೇ ತಂಡವಾಗಿ ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆದಿದೆ.

ಆರಂಭದಿಂದಲೂ ಎರಡು ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಪಂದ್ಯದ ಮೊದಲಾರ್ಧ ಮುಕ್ತಾಯವಾದರೂ ಎರಡೂ ತಂಡಗಳು ಯಾವುದೇ ಗೋಲು ಗಳಿಸರಿಲ್ಲ. ಪಂದ್ಯದ ದ್ವಿತಿಯಾರ್ಧದಲ್ಲೂ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು.

PKL 2022: ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಯುಪಿ ಯೋಧಾಸ್PKL 2022: ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಯುಪಿ ಯೋಧಾಸ್

ಆದರೆ, ಪಂದ್ಯದ 83ನೇ ನಿಮಿಷದಲ್ಲಿ ಬ್ರೆಜಿಲ್‌ನ ಕ್ಯಾಸೆಮಿರೊ ಗೋಲು ಬಾರಿಸುವ ಮೂಲಕ ಮೈದಾನದಲ್ಲಿ ಮಿಂಚು ಹರಿಸಿದರು. ಬ್ರೆಜಿಲ್ ಗೋಲು ಬಾರಿಸುತ್ತಿದ್ದಂತೆ, ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಕೊನೆಯವರೆಗೂ ಉತ್ತಮ ಹೋರಾಟ ನೀಡಿದ ಸ್ವಿಟ್ಜರ್ಲೆಂಡ್ ಪಂದ್ಯದ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟು ನಿರಾಸೆ ಅನುಭವಿಸಿತು. ಬ್ರೆಜಿಲ್ 1950 ಮತ್ತು 2018ರಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು.

Fifa World Cup 2022: 5 Times Champion Brazil Beat Switzerland And Secured Last 16 Spot

ಬದಲೀ ಆಟಗಾರನಿಂದ ಬಂತು ಗೋಲು

ಬ್ರೆಜಿಲ್ ಸ್ವಿಟ್ಜರ್ಲೆಂಡ್ ವಿರುದ್ಧ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಲ್ಕು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇನ್ನು ಎರಡು ಪಂದ್ಯಗಳಲ್ಲಿ ಬ್ರೆಜಿಲ್ ಸೋಲನುಭವಿಸಿದೆ. ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ಬ್ರೆಜಿಲ್ ಯಶಸ್ವಿಯಾಗಿದೆ.

ಮೊದಲಾರ್ಧದಲ್ಲಿ ಗೋಲು ಬಾರದ ಕಾರಣನ ಬದಲಿ ಆಟಗಾರನಾಗಿ ರೋಡ್ರಿಗೋ ಕ್ಯಾಸೆಮಿರೊ ಕಣಕ್ಕಿಳಿದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಂಡ ಕ್ಯಾಸೆಮಿರೊ, ತಂಡಕ್ಕೆ ಗೆಲುವಿನ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಬ್ರೆಜಿಲ್ ಮುಂದಿನ ಪಂದ್ಯದಲ್ಲಿ ಸರ್ಬಿಯಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸುಲಭವಾಗಿ ಜಯ ಗಳಿಸುವ ವಿಶ್ವಾಸದಲ್ಲಿದ್ದು, ಜಿ ಗುಂಪಿನ ಅಗ್ರಸ್ಥಾನಿಯಾಗಿ ನಾಕ್‌ಔಟ್ ಹಂತಕ್ಕೆ ಪ್ರವೇಶಿಸುವ ವಿಶ್ವಾಸದಲ್ಲಿದೆ.

ಸ್ವಿಟ್ಜರ್ಲೆಂಡ್ ಮುಂದಿನ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಸೆಣೆಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಜಿ ಗುಂಪಿನಿಂದ ಎರಡನೇ ತಂಡವಾಗಿ ನಾಕ್‌ಔಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.

Story first published: Tuesday, November 29, 2022, 2:30 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X