ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕತಾರ್ ಫುಟ್ಬಾಲ್ ವಿಶ್ವಕಪ್ 2022: ಅದ್ಧೂರಿಯಾಗಿ ಅನಾವರಣಗೊಂಡ ಅಹ್ಮದ್ ಬಿನ್ ಅಲಿ ಸ್ಟೇಡಿಯಮ್

Fifa world cup 2022: Ahmad bin Ali Stadium unveiled to the world in spectacular launch

ಕತಾರ್‌ನ ಅಲ್ ರಯ್ಯಾನ್‌ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಅಹ್ಮದ್ ಬಿನ್ ಅಲಿ ಫುಟ್ಬಾಲ್ ಸ್ಟೇಡಿಯಮ್ ಅತ್ಯಂತ ಅದ್ಧೂರಿಯಾಗಿ ಅನಾವರಣಗೊಂಡಿದೆ. ಕತಾರ್ ರಾಷ್ಟ್ರೀಯ ದಿನದಂದು 48ನೇ ಅಮೀರ್ ಕಪ್‌ಗೆ ಆತಿಥ್ಯ ವಹಿಸಲಿರುವ ಈ ಸುಸಜ್ಜಿತ ಕ್ರೀಡಾಂಗಣ 2022ರಲ್ಲಿ ಕತಾರ್‌ನಲ್ಲಿ ನಡೆಯುವ ಫುಟ್ಬಾಲ್ ವಿಶ್ವಕಪ್‌ನ ನಾಲ್ಕನೇ ಕ್ರೀಡಾಂಗಣವಾಗಿದೆ.

ಭಾರತದ ಬೃಹತ್ ನಿರ್ಮಾಣ ಸಂಸ್ಥೆಯಾಗಿರುವ ಲರ್ಸನ್ & ಟರ್ಬೋ ಲಿಮಿಟೆಡ್ ಕತಾರಿ ಕಾಂಟ್ರಾಕ್ಟರ್ ಹಾಗೂ ಅಲ್ ಬಲಗ್ ಟ್ರೇಡಿಂಗ್ & ಕಾಂಟ್ರಾಕ್ಟಿಂಗ್ ಕಂಪನಿಗಳ ಜೊತೆ ಸೇರಿಕೊಂಡು ಈ ಬೃಹತ್ ಸುಜಜ್ಜಿತ ಸ್ಟೇಡಿಯಮ್ ನಿರ್ಮಾಣ ಮಾಡಿದೆ.

ಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯ

ಅಹ್ಮದ್ ಬಿನ್ ಅಲಿ ಸ್ಟೇಡಿಯಮ್‌ 40,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು 2022ರ ಕತಾರ್ ವಿಶ್ವಕಪ್‌ನಲ್ಲಿ 7 ಪಂದ್ಯಗಳಿಗೆ ಆತಿಥ್ಯವನ್ನು ವಹಿಸಲಿದೆ. ಈ ಮೂಲಕ ಮಧ್ಯ ಪ್ರಾಛ್ಯ ಹಾಗೂ ಅರಬ್ ದೇಶ ಮೊಟ್ಟ ಮೊದಲ ಫುಟ್ಬಾಲ್ ವಿಶ್ವಕಪ್ ಆಯೋಜನೆಗೆ ಸಜ್ಜಾಗಿದೆ.

ಈ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ ಭಾರೀ ಅದ್ಧೂರಿಯಾಗಿ ನಡೆದಿದೆ. ಸಂಗೀತ, ಸಾಂಪ್ರದಾಯಿಕ ನೃತ್ಯಗಳ ಜೊತೆಗೆ ಮಂತ್ರಮುಗ್ಧಗೊಳಿಸುವ ದೃಶ್ಯ ವೈಭವ ನಿಬ್ಬೆರಗಾಗುವಂತೆ ಮಾಡಿತು. ಕ್ರೀಡಾಂಗಣ ಉದ್ಘಾಟನೆ ಜೊತೆ ನಡೆದ ಆಮಿರ್ ಕಪ್ ಪಂದ್ಯಕ್ಕೆ 50ಶೇಕಡಾದಷ್ಟು ಜನರಿಗೆ ಕ್ರೀಡಾಂಗಣಕ್ಕೆ ಅವಕಾಶವನ್ನು ನೀಡಲಾಗಿತ್ತು.

Story first published: Sunday, December 20, 2020, 16:49 [IST]
Other articles published on Dec 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X