ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup: ದಕ್ಷಿಣ ಕೊರಿಯಾ ವಿರುದ್ಧ ಸಾಂಬಾ ಪಡೆಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್‌ಗೆ ಪ್ರವೇಶ

Fifa World Cup 2022: Brazil Beat South Korea By 4-1 Goals Entered Quarter Final

ಫಿಫಾ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಬ್ರೆಜಿಲ್‌ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಅದು ಕ್ರೊಯೇಷಿಯಾ ವಿರುದ್ಧ ಸೆಣೆಸಲಿದೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಕ್ರೊಯೇಷಿಯಾ ಜಪಾನ್ ವಿರುದ್ಧ 1-0 ಗೋಲಿನ ರೋಚಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಸ್ಟೇಡಿಯಂ 974 ನಲ್ಲಿ ನಡೆದ ಪಂದ್ಯದಲ್ಲಿ ಸಾಂಬಾ ಹುಡುಗರು ದಕ್ಷಿಣ ಕೊರಿಯಾವನ್ನು ಮೊದಲಾರ್ಧದಲ್ಲೇ ಸೋಲಿಸಿಬಿಟ್ಟರು. ಮೊದಲಾರ್ಧದ ಅಂತ್ಯಕ್ಕೆ ಮುನ್ನವೇ ಬ್ರೆಜಿಲ್ 4-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.

ಪಂದ್ಯ ಆರಂಭವಾದ 7ನೇ ನಿಮಿಷದಲ್ಲೇ ಸ್ಟಾರ್ ಆಟಗಾರ ವಿನಿಶಿಯಸ್ ಜ್ಯೂನಿಯರ್ ಮೊದಲ ಗೋಲು ಗಳಿಸುವ ಮೂಲಕ ಮೈದಾನದಲ್ಲಿ ಮಿಂಚು ಹರಿಸಿದರು. ಮೊದಲನೇ ಗೋಲು ದಾಖಲಾದ ನಂತರ 6 ನಿಮಿಷಗಳಲ್ಲೇ ನೇಮರ್ ಜೂನಿಯರ್ ಪೆನಾಲ್ಟಿಯಿಂದ ಪಂದ್ಯದ ಎರಡನೇ ಗೋಲು ಬಾರಿಸುವ ಮೂಲಕ 2-0 ಗೋಲುಗಳ ಮುನ್ನಡೆ ಸಾಧಿಸಿದರು.

29ನೇ ನಿಮಿಷದಲ್ಲಿ ರಿಚರ್ಲಿಸನ್ ಪಂದ್ಯದ ಮೂರನೇ ಗೋಲು ಗಳಿಸಿದರು. 36ನೇ ನಿಮಿಷದಲ್ಲಿ ಲೂಕಾಸ್ ಪಕೆಟಾ 4ನೇ ಗೋಲು ಗಳಿಸುವ ಮೂಲಕ ಮೊದಲಾರ್ಧದಲ್ಲೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿಯಾಗಿತ್ತು.

IND Vs BAN: 2ನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾದ ಭಾರತIND Vs BAN: 2ನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾದ ಭಾರತ

ಮೊದಲಾರ್ಧದ ಮುಕ್ತಾಯದ ನಂತರ ದಕ್ಷಿಣ ಕೊರಿಯಾ ಉತ್ತಮವಾಗಿ ಹೋರಾಡಿದರು ಬ್ರೆಜಿಲ್ ಯಾವುದೇ ತಪ್ಪಿಗೆ ಅವಕಾಶ ನೀಡಲಿಲ್ಲ. ಆದರೂ, ಪಂದ್ಯದ 76ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾ ಪರ ಪೈಕ್ ಸೆಯುಂಘೋ ಅದ್ಭುತ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು.

Fifa World Cup 2022: Brazil Beat South Korea By 4-1 Goals Entered Quarter Final

ಚಾಂಪಿಯನ್ ಆಗುತ್ತೇವೆ ಎಂದ ನೇಮರ್

ಅಂತಿಮವಾಗಿ ಬ್ರೆಜಿಲ್ 4-1 ಗೋಲುಗಳ ಭರ್ಜರಿ ಜಯದ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಡಿಸೆಂಬರ್ 9ರಂದು ಬ್ರೆಜಿಲ್ ಕ್ರೊಯೇಷಿಯಾ ವಿರುದ್ಧ ಆಡಲಿದೆ. ನಾವು ಈ ಬಾರಿ ಚಾಂಪಿಯನ್ ಆಗುತ್ತೇವೆ ಎಂದು ಬ್ರೆಜಿಲ್ ಸ್ಟಾರ್ ಆಟಟಗಾರ ನೇಮರ್ ಜೂನಿಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಂದ್ಯದ ನಂತರ ಮಾತನಾಡಿದ ನೇಮರ್, "ನಾವು ಈ ಬಾರಿ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದೇವೆ. ಇನ್ನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ, ಆ ಪಂದ್ಯಗಳನ್ನು ಗೆಲ್ಲುವತ್ತ ನಾವು ಹೆಚ್ಚು ಗಮನ ಹರಿಸಿದ್ದೇವೆ" ಎಂದು ಹೇಳಿದರು.

ಈ ಬಾರಿಯ ವಿಶ್ವಕಪ್‌ ಪಂದ್ಯಗಳಲ್ಲಿ ಮೊದಲಾರ್ಧದಲ್ಲಿ ಗೋಲು ಗಳಿಸಲು ವಿಫಲವಾಗಿದ್ದ ಬ್ರೆಜಿಲ್, ದಕ್ಷಿಣ ಕೊರಿಯಾ ವಿರುದ್ಧ ಮೊದಲಾರ್ಧಕ್ಕೆ ಮುನ್ನವೇ 4 ಗೋಲುಗಳನ್ನು ಗಳಿಸುವ ಮೂಲಕ ಆತ್ಮವಿಶ್ವಾಸದಿಂದಲೇ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದೆ.

Story first published: Tuesday, December 6, 2022, 8:00 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X