ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್ 2022: ಪೋರ್ಚುಗಲ್‌ ಸೋಲಿನ ವೇಳೆ ದಕ್ಷಿಣ ಕೊರಿಯಾ ಆಟಗಾರನೊಂದಿಗೆ ರೊನಾಲ್ಡೊ ಜಗಳ

FIFA World Cup 2022: Cristiano Ronaldo Quarrel With South Korean Player During Portugal Defeat

ಶುಕ್ರವಾರ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ 2022ರ ಪಂದ್ಯದಲ್ಲಿ ಪೋರ್ಚುಗಲ್‌ ವಿರುದ್ಧ ದಕ್ಷಿಣ ಕೊರಿಯಾ ತಂಡ 2-1 ಅಂತರದಲ್ಲಿ ಗೆದ್ದು ಬೀಗಿತು. ಇದೇ ವೇಳೆ ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಕೋಪ ಮಾಡಿಕೊಂಡಿದ್ದು ಕಂಡುಬಂತು.

ಪೋರ್ಚುಗಲ್‌ ತಂಡದ ಸೋಲಿನ ಸಂದರ್ಭದಲ್ಲಿ ಬದಲಿ ಆಟಗಾರನಾಗಿ ಮೈದಾನವನ್ನು ತೊರೆಯಲು ವಿಳಂಬವಾದಾಗ ತಮ್ಮನ್ನು ನಿಂದಿಸಿದ ದಕ್ಷಿಣ ಕೊರಿಯಾದ ಆಟಗಾರನೊಂದಿಗೆ ತಾನು ಮಾತಿನ ಚಕಮಕಿಯಲ್ಲಿ ಭಾಗಿಯಾಗಬೇಕಾಯಿತು ಎಂದು ಕ್ರಿಸ್ಟಿಯಾನೋ ರೊನಾಲ್ಡೊ ತಿಳಿಸಿದ್ದಾರೆ.

ಸೋಲಿನ ಫಲಿತಾಂಶದ ಹೊರತಾಗಿಯೂ ಪೋರ್ಚುಗಲ್ ಇನ್ನೂ ಎಚ್ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇನ್ನು ದಕ್ಷಿಣ ಕೊರಿಯಾದ ಗೆಲುವು ಅಂತಿಮ 16ರ ಘಟ್ಟಕ್ಕೆ ತಲುಪಿತು. ಆದರೆ 65ನೇ ನಿಮಿಷದಲ್ಲಿ ಸಮಯ ಮೀರುತ್ತಿದ್ದರೂ ಕ್ರಿಸ್ಟಿಯಾನೋ ರೊನಾಲ್ಡೊ ಅವರು ನಿಧಾನವಾಗಿ ನಿರ್ಗಮಿಸುತ್ತಿರುವುದು ದಕ್ಷಿಣ ಕೊರಿಯಾ ಆಟಗಾರನಿಗೆ ಸಿಟ್ಟು ತರಿಸಿತು.

"ನಾನು ಬದಲಿ ಆಟಗಾರನಾಗಿದ್ದಾಗ ಆ ಘಟನೆ ಸಂಭವಿಸಿತು. ದಕ್ಷಿಣ ಕೊರಿಯಾದ ಆಟಗಾರನು ನನಗೆ ಬೇಗನೆ ಹೊರಡಲು ಹೇಳುತ್ತಿದ್ದನು. ನನಗೆ ಹೇಳಲು ಅವನಿಗೆ ಯಾವುದೇ ಅಧಿಕಾರವಿಲ್ಲದ ಕಾರಣ ನಾನು ಅವನನ್ನು ಸುಮ್ಮನಿರಲು ಹೇಳಿದೆ," ಎಂದು ಕ್ರಿಸ್ಟಿಯಾನೋ ರೊನಾಲ್ಡೊ ಸುದ್ದಿಗಾರರಿಗೆ ತಿಳಿಸಿದರು.

"ನಾನು ಮೈದಾನದಿಂದ ಬೇಗನೆ ಹೋಗದಿದ್ದರೆ, ಅದನ್ನು ರೆಫರಿ ಹೇಳಬೇಕು. ಯಾವುದೇ ವಿವಾದ ಇರಬಾರದು, ಅದು ಆ ಕ್ಷಣದ ಬಿಸಿ ವಾತಾವರಣವಾಗಿತ್ತು." ಎಂದರು.

ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಮಾತನಾಡಿ, "ಕ್ರಿಸ್ಟಿಯಾನೋ ರೊನಾಲ್ಡೊ ಅವರು ದಕ್ಷಿಣ ಕೊರಿಯಾದ ಆಟಗಾರನ ಮೇಲೆ ಕೋಪಗೊಂಡಿದ್ದರು ಮತ್ತು ಎಲ್ಲರೂ ಅದನ್ನು ನೋಡಿದರು," ಎಂದು ಹೇಳಿದರು.

"ದಕ್ಷಿಣ ಕೊರಿಯಾ ಆಟಗಾರನು ರೊನಾಲ್ಡೊ ಅವರನ್ನು ಅವಮಾನಿಸುತ್ತಿದ್ದನು. ಅವನನ್ನು ಬೇಗ ಪಿಚ್‌ನಿಂದ ಹೊರಹೋಗು ಎಂದು ಹೇಳುತ್ತಿದ್ದನು. ಆದ್ದರಿಂದ ಕ್ರಿಸ್ಟಿಯಾನೋ ರೊನಾಲ್ಡೊ ಕೋಪಗೊಳ್ಳಬೇಕಾಯಿತು," ಎಂದು ಫೆರ್ನಾಂಡೊ ಸ್ಯಾಂಟೋಸ್ ತಿಳಿಸಿದರು.

Story first published: Saturday, December 3, 2022, 23:01 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X