ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022 : ಉರುಗ್ವೆ ವಿರುದ್ಧ ಗೆದ್ದ ಪೋರ್ಚುಗಲ್, 16ರ ಘಟ್ಟಕ್ಕೆ ಪ್ರವೇಶ

FIFA World Cup 2022, Portugal win against Uruguay by 2-0 seals spot in RO16

ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಎರಡನೇ ಪಂದ್ಯದಲ್ಲಿಯೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಉರುಗ್ವೆ ವಿರುದ್ಧ ನಡೆದ ಪಂದ್ಯದಲ್ಲಿ 2-0 ಅಂತರದಿಂದ ಗೆದ್ದು ಬೀಗಿದ ಪೋರ್ಚುಗಲ್ ಈ ಮೂಲಕ ಬ್ರೆಜಿಲ್ ಹಾಗೂ ಫ್ರಾನ್ಸ್ ಜೊತೆಗೆ ಅಂತಿಮ 16ರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಪ್ರಶಸ್ತಿ ಗೆಲ್ಲುವ ಕನಸಿನ ಮೊದಲ ಹೆಜ್ಜೆಯಲ್ಲಿ ಯಶಸ್ಸು ಗಳಿಸಿದಂತಾಗಿದೆ.

ಪೋರ್ಚುಗಲ್ ಆಟಗಾರ ಬ್ರೂನೋ ಫೆರ್ನಾಂಡೀಸ್ ಈ ಎರಡು ಗೋಲುಗಳನ್ನು ಕೂಡ ಬಾರಿಸುವ ಮೂಲಕ ಪೋರ್ಚುಗಲ್‌ಗೆ ಮೇಲುಗೈ ಒದಗಿಸಿದರು. ಈ ಎರಡು ಗೋಲುಗಳು ಕೂಡ ದ್ವಿತಿಯಾರ್ಧದಲ್ಲಿಯೇ ಬಂದಿದ್ದು ಉರುಗ್ವೆ ವಿರುದ್ಧ ಮೇಲುಗೈ ಸಾಧಿಸಲು ಕಾರಣವಾಯಿತು.

ಸಂಜು ಸ್ಯಾಮ್ಸನ್‌ಗೆ ಮತ್ತೆ ನಿರಾಸೆ: ಫಿಫಾ ವಿಶ್ವಕಪ್‌ನಿಂದಲೂ ಅಭಿಮಾನಿಗಳ ಬೆಂಬಲಸಂಜು ಸ್ಯಾಮ್ಸನ್‌ಗೆ ಮತ್ತೆ ನಿರಾಸೆ: ಫಿಫಾ ವಿಶ್ವಕಪ್‌ನಿಂದಲೂ ಅಭಿಮಾನಿಗಳ ಬೆಂಬಲ

ಪೋರ್ಚುಗಲ್ ಎರಡು ಪಂದ್ಯಗಳಲ್ಲಿ ಎರಡು ಗಲುವು ಸಾಧಿಸಿರುವುದು ಗ್ರೂಫ್ ಹೆಚ್‌ನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆದಂತಾಗಿದೆ. ಈ ಮೂಲಕ ಗ್ರೂಪ್ ಆಫ್ 16ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಸೋಲು ಅನುಭವಿಸಿರುವ ಉರುಗ್ವೆ ಈಗ ಮೂರನೇ ಸ್ಥಾನದಲ್ಲಿದ್ದು ಗ್ರೂಪ್ ಹಂತದ ಅಂತಿಮ ಪಂದ್ಯವಾದ ಘಾನಾ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ ಗ್ರೂಪ್ ಹಂತದಲ್ಲಿ ಎರಡು ಸುತ್ತಿನ ಪಂದ್ಯಗಳು ಈಗಾಗಲೇ ಅಂತ್ಯವಾಗಿದ್ದು ಈ ಸಂದರ್ಭದಲ್ಲಿ ಕೇವಲ ಮೂರು ತಂಡಗಳು ಮಾತ್ರವೇ ಗ್ರೂಫ್ ಆಫ್ 16ಗೇ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಗ್ರೂಪ್ ಹಂತದ ಅಂತಿಮ ಸುತ್ತು ಮಾತ್ರವೇ ಬಾಕಿಯಿದ್ದು ಈ ಸಂದರ್ಭದಲ್ಲಿ ಉಳಿದ 13 ತಂಡಗಳ ಸ್ಥಾನಗಳು ಸ್ಪಷ್ಟವಾಗಲಿದೆ.

ಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀ

ಪೋರ್ಚುಗಲ್ XI : ಡಿಯೊಗೊ ಕೋಸ್ಟಾ, ಜೊವೊ ಕ್ಯಾನ್ಸೆಲೊ, ಪೆಪೆ, ರುಬೆನ್ ಡಯಾಸ್, ನುನೊ ಮೆಂಡೆಸ್, ರುಬೆನ್ ನೆವೆಸ್, ಬರ್ನಾರ್ಡೊ ಸಿಲ್ವಾ, ಬ್ರೂನೋ ಫೆರ್ನಾಂಡಿಸ್, ವಿಲಿಯಂ ಕಾರ್ವಾಲ್ಹೋ, ಜೋವೊ ಫೆಲಿಕ್ಸ್, ಕ್ರಿಸ್ಟಿಯಾನೊ ರೊನಾಲ್ಡೊ;

ಉರುಗ್ವೆ XI: ಸೆರ್ಗಿಯೊ ರೋಚೆಟ್, ಸೆಬಾಸ್ಟಿಯನ್ ಕೋಟ್ಸ್, ಡಿಯಾಗೋ ಗಾಡಿನ್, ಜೋಸ್ ಮಾರಿಯಾ ಗಿಮೆನೆಜ್, ಗಿಲ್ಲೆರ್ಮೊ ವರೆಲಾ, ಮಥಿಯಾಸ್ ಒಲಿವೆರಾ, ರೊಡ್ರಿಗೊ ಬೆಂಟನ್ಕುರ್, ಮಟಿಯಾಸ್ ವೆಸಿನೊ, ಫೆಡೆರಿಕೊ ವಾಲ್ವರ್ಡೆ, ಎಡಿನ್ಸನ್ ಕವಾನಿ, ಡಾರ್ವಿನ್ ನುನೆಜ್.

Story first published: Tuesday, November 29, 2022, 8:56 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X