ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA 2022: ಅರ್ಜೆಂಟೀನಾ ಸೋಲಿಸಿದ ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ನೀಡಲಿರುವ ಪ್ರಿನ್ಸ್

FIFA World Cup 2022: Saudi Arabia Football Players To Get Rolls Royce For Beat Argentina

ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ಸೌದಿ ಅರೇಬಿಯಾ ತಂಡವು ಎರಡು ಬಾರಿಯ ಫಿಫಾ ಫುಟ್ಬಾಲ್ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳಿಂದ ಐತಿಹಾಸಿಕ ಜಯ ಗಳಿಸಿದೆ.

ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾದ ಗೆಲುವು ಈ ವರ್ಷದ ಅತಿದೊಡ್ಡ ಅಚ್ಚರಿಗಳಲ್ಲಿ ಒಂದಾಗಿದೆ. ಅನೇಕರು ಅರ್ಜೆಂಟೀನಾ ಸೋಲನ್ನು ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಸೋಲು ಎಂದು ಕರೆದಿದ್ದಾರೆ.

ಬಲಿಷ್ಠ ಅರ್ಜೆಂಟೀನಾಗೆ ಸೋಲು:ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಕಂಡಂತಹ ಅಚ್ಚರಿಯ ಫಲಿತಾಂಶಗಳುಬಲಿಷ್ಠ ಅರ್ಜೆಂಟೀನಾಗೆ ಸೋಲು:ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಕಂಡಂತಹ ಅಚ್ಚರಿಯ ಫಲಿತಾಂಶಗಳು

ವಿಶ್ವ ಶ್ರೇಯಾಂಕದಲ್ಲಿ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ 48 ಸ್ಥಾನಗಳ ಅಂತರವಿದೆ. ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಸೌದಿ ಅರೇಬಿಯಾವನ್ನು ಸುಲಭವಾಗಿ ಸೋಲಿಸುತ್ತದೆ ಎಂದು ಅನೇಕರು ನಿರೀಕ್ಷಿಸಿದ್ದರು.

ಅರ್ಜೆಂಟೀನಾ ತಂಡ ಮೂರು ವರ್ಷಗಳಿಂದ ಅಜೇಯವಾಗಿತ್ತು ಮತ್ತು 2022ರ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು. ಆದರೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸೌದಿ ಅರೇಬಿಯಾದ ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾ ವಿರುದ್ಧದ ಜಯವನ್ನು ಕಣ್ತುಂಬಿಕೊಂಡರು.

FIFA World Cup 2022: Saudi Arabia Football Players To Get Rolls Royce For Beat Argentina

ಯುಕೆ ಮೂಲದ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಸೌದಿ ಅರೇಬಿಯಾದ ಫುಟ್ಬಾಲ್ ಆಟಗಾರರಿಗೆ ದೇಶದ ರಾಜಮನೆತನವು ಅದ್ಭುತ ಗೆಲುವಿನ ನಂತರ ಪ್ರತಿಯೊಬ್ಬರಿಗೂ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಲಿದೆ.

ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ಕತಾರ್‌ನಿಂದ ಹಿಂದಿರುಗಿದಾಗ ಪ್ರತಿಯೊಬ್ಬ ಫುಟ್ಬಾಲ್ ಆಟಗಾರರಿಗೂ RM6 ಮಿಲಿಯನ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ ಎಂದು ಹೇಳಲಾಗುತ್ತದೆ.

ಅಚ್ಚರಿಯ ವಿಜಯದ ನಂತರ ಸಂತೋಷಗೊಂಡಿರುವ ಸೌದಿ ಪ್ರಜೆಗಳು ಸ್ವಯಂಪ್ರೇರಿತವಾಗಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದರು. ರಿಯಾದ್‌ನಲ್ಲಿ ಚಲಿಸುವ ಆಟೋಮೊಬೈಲ್‌ಗಳ ಕಿಟಕಿಗಳಿಂದ ಕತ್ತಿ ವಿನ್ಯಾಸವನ್ನು ಒಳಗೊಂಡಿರುವ ತಮ್ಮ ದೇಶದ ಧ್ವಜವನ್ನು ಬೀಸಿದರು.

FIFA World Cup 2022: ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಬಿಗ್ ಶಾಕ್, 2-1 ಅಂತರದಲ್ಲಿ ಗೆದ್ದ ಸೌದಿ ಅರೇಬಿಯಾFIFA World Cup 2022: ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಬಿಗ್ ಶಾಕ್, 2-1 ಅಂತರದಲ್ಲಿ ಗೆದ್ದ ಸೌದಿ ಅರೇಬಿಯಾ

ಅರಬ್ ನ್ಯೂಸ್ ಪ್ರಕಾರ, ರಾಜಕುಮಾರ ನೀಡಿದ ಸಲಹೆಯ ನಂತರ ರಾಜನು ದೇಶದಾದ್ಯಂತ ಸಂಭ್ರಮದ ರಜೆ ಘೋಷಿಸಿದ್ದನು. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ರಜೆ ನೀಡಲಾಗುವುದು ಎಂದು ಸೌದಿ ಪ್ರೆಸ್ ಏಜೆನ್ಸಿಯನ್ನು ವರದಿ ಮಾಡಿದೆ.

ಅರ್ಜೆಂಟೀನಾ ವಿರುದ್ಧದ ಅಚ್ಚರಿಯ ವಿಜಯ ಸಾಧಿಸುವ ಮೊದಲು, ಸೌದಿ ಅರೇಬಿಯಾ ಈ ಹಿಂದೆ ಕೇವಲ ಮೂರು ವಿಶ್ವಕಪ್ ಪಂದ್ಯಗಳನ್ನು ಗೆದ್ದಿತ್ತು.

Story first published: Saturday, November 26, 2022, 10:37 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X