ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: ಪೊಲೆಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆ

Fifa World cup: Argentina vs Poland, Argentina beat Poland 2-0 reach group of 16, Highlights

ಈ ಬಾರಿಯ ಫಿಫಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ಸೌದಿ ಅರೇಬಿಯಾ ವಿರುದ್ಧ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಅರ್ಜೆಂಟಿನಾ ತಂಡ ಬಳಿಕ ಗೆಲುವಿನ ಲಯಕ್ಕೆ ಬಂದಿದೆ. ಎರಡನೇ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದ್ದ ಅರ್ಜೆಂಟಿನಾ ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ ಸೆಣೆಸಾಡಿ ಗೆಲುವು ಸಾಧಿಸಿದೆ. ಈ ಮೂಲಕ ಅಂತಿಮ 16ರ ಘಟ್ಟದಲ್ಲಿ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಕತಾರ್‌ನ ಸ್ಟೇಡಿಯಂ 974ನಲ್ಲಿ ನಡೆದ ಪೋಲೆಂಡ್ ಹಾಗೂ ಅರ್ಜೆಂಟಿನಾ ವಿರುದ್ಧದ ಪಂದ್ಯದ ಮೇಲೆ ವಿಶ್ವದ ಫುಟ್ಬಾಲ್ ಅಭಿಮಾನಿಗಳ ಕಣ್ಣಿತ್ತು. ಇದಕ್ಕೆ ಕಾರಣ ಈ ಪಂದ್ಯ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡಕ್ಕೆ ಭಾರೀ ಮಹತ್ವದ್ದಾಗಿತ್ತು. ಈ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಅರ್ಜೆಂಟಿನಾ ತಂಡ ಮುಂದಿನ ಹಂತದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಮತ್ತು ಜೂಲಿಯನ್ ಅಲ್ವಾರೆಜ್ ಅವರು ಅರ್ಜೆಂಟಿನಾ ತಂಡಕ್ಕೆ ಎರಡು ಗೋಲುಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣವಾದರು. ಈ ಗೆಲುವಿನಿಂದಿಗೆ ಅರ್ಜೆಂಟಿನಾ ತಂಡ ತಮ್ಮ ಗ್ರೂಪ್‌ನ ಅಗ್ರತಂಡವಾಗಿ ಹೊರಹೊಮ್ಮುವ ಮೂಲಕ ಗ್ರೂಪ್ ಹಂತದ ಸೆಣೆಸಾಟವನ್ನು ಭರ್ಜರಿಯಾಗಿ ಅಂತ್ಯಗೊಳಿಸಿದೆ.

1
2277827

ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಆರಂಭದಿಂದಲೇ ಅಕ್ರಮಣಕಾರಿ ಪ್ರದರ್ಶನ ನೀಡುತ್ತಾ ಹಿಡಿತ ಸಾಧಿಸಿತ್ತು. ಈ ಮೂಲಕ ಕೆಲ ಅವಕಾಶಗಳನ್ನು ಕೂಡ ಅರ್ಜಂಟಿನಾ ತಂಡ ಸೃಷ್ಟಿಸಿಕೊಂಡಿತ್ತು. ಆದರೆ ಅವುಗಳನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿತ್ತು. ಮೊದಲಿಗೆ ಮೆಸ್ಸಿ ಪೆನಾಲ್ಟಿ ಅವಕಾಶ ಗಿಟ್ಟಿಸಿಕೊಂಡರಾದರೂ ಅದನ್ನು ಪೋಲಿಶ್ ಗೋಲ್ ಕೀಪರ್ ವೊಜ್ಸಿಕ್ ಸ್ಜೆಸ್ನಿ ಅದ್ಭುತವಾದ ತಡೆಯುವಲಿ ಯಶಸ್ವಿಯಾದರು. ಅದಾದ ಒಂದು ನಿಮಿಷದ ಅಂತರದಲ್ಲಿ ಮತ್ತೊಂದು ಅವಕಾಶ ಅರ್ಜೆಂಟಿನಾ ತಂಡಕ್ಕಿದ್ದರೂ ಅದನ್ನು ಕೂಡ ಪೊಲೆಂಡ್ ಗೋಲ್ ಕೀಪರ್ ಸುಲಭವಾಗಿ ತಡೆಯುವಲ್ಲಿ ಯಶಸ್ವಿಯಾದರು.

ಆರಂಭದಿಂದಲೇ ಅರ್ಜೆಂಟಿನಾ ತಂಡ ಈ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಪೊಲೆಂಡ್ ಪ್ರದೇಶದಲ್ಲಿಯೇ ಬಹುತೇಕ ಅವಧಿಯಲ್ಲಿ ಚೆಂಡು ಇರುವಂತೆ ನೋಡಿಕೊಳ್ಳುವಲ್ಲಿ ಮೆಸ್ಸಿ ಪಡೆ ಯಶಸ್ವಿಯಾಗಿತ್ತು. ಬಳಿಕ ಎರಡು ಗೋಲು ಕೂಡ ದಾಖಲಿಸಿದ ಅರ್ಜೆಂಟಿನ ತಂಡ ಅಗ್ರ ತಂಡವಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

ಗ್ರೂಫ್ ಆಫ್ 16 ಹಂತದಲ್ಲಿ ಅರ್ಜೆಂಟಿನಾ ತಂಡಕ್ಕೆ ಆಸ್ಟ್ರೇಲಿಯಾ ಎದುರಾಳಿಯಾಗಿದ್ದು ಈ ಕದನ ಈಗ ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯಾ ತಂಡ 2006ರ ಬಳಿಕ ಇದೇ ಮೊದಲ ಬಾರಿಗೆ 16ರ ಘಟ್ಟಕ್ಕೆ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಬುಧವಾರ ಡೆನ್ಮಾರ್ಕ್ ವಿರುದ್ದ ಗ್ರೂಪ್ 'ಡಿ'ಯ ಪಂದ್ಯದಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿತ್ತು.

ಅರ್ಜೆಂಟೀನಾ XI: ಮಾರ್ಟಿನೆಜ್, ಮೊಲಿನಾ, ರೊಮೆರೊ, ಒಟಮೆಂಡಿ, ಅಕುನಾ, ಡಿ ಪಾಲ್, ಎಂಜೊ ಫೆರ್ನಾಂಡಿಸ್, ಮ್ಯಾಕ್ ಅಲಿಸ್ಟರ್; ಮೆಸ್ಸಿ, ಅಲ್ವಾರೆಜ್, ಡಿ ಮರಿಯಾ

ಪೋಲೆಂಡ್ XI: ವೊಜ್ಸಿಕ್ ಸ್ಜೆಸ್ನಿ, ಬೆರೆಸ್ಸಿನ್ಸ್ಕಿ, ಗ್ಲಿಕ್, ಕಿವಿಯೋರ್, ಕ್ಯಾಶ್, ಫ್ರಾಂಕೋವ್ಸ್ಕಿ, ಬೈಲಿಕ್, ಕ್ರಿಚೋವಿಯಾಕ್, ಝಿಲಿನ್ಸ್ಕಿ, ಸ್ವಿಡರ್ಸ್ಕಿ, ಲೆವಾಂಡೋವ್ಸ್ಕಿ

Story first published: Thursday, December 1, 2022, 9:51 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X