ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕ್ರೊವೇಷಿಯಾಕ್ಕೆ ಸೋಲು: ಫೀಫಾ ವಿಶ್ವಕಪ್ 2018ಕ್ಕೆ ಫ್ರಾನ್ಸ್ ಚಾಂಪಿಯನ್!

FIFA world cup 2018 : ಫ್ರಾನ್ಸ್ ಚಾಂಪಿಯನ್! | Oneindia Kannada
Fifa World Cup final: France 4 v Croatia 2 -Live Score

ಮಾಸ್ಕೋ, ಜುಲೈ 15: ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ 2018ರ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಕ್ರೊವೇಷಿಯಾವನ್ನು 4-2 ಅಂತರದಿಂದ ಸೋಲಿಸಿದ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪಂದ್ಯದ ಪ್ರಥಮಾರ್ಧದಲ್ಲಿ 2, ದ್ವಿತೀಯಾರ್ಧದಲ್ಲಿ 2 ಗೋಲ್ ಬಾರಿಸಿ ಫ್ರಾನ್ಸ್ ಪ್ರಶಸ್ತಿ ಬಾಚಿಕೊಂಡಿತು.

ಪಂದ್ಯದ ಸ್ಕೋರ್ ಕಾರ್ಡ್

ಪಂದ್ಯ ಆರಂಭವಾಗುತ್ತಲೇ ಫ್ರಾನ್ಸ್ ಪರ ಮಾರಿಯೋ ಮ್ಯಾಂಜುಕಿಕ್ ಗೋಲ್ ಖಾತೆ ತೆರೆದರು. 18ನೇ ನಿಮಿಷದಲ್ಲಿ ಮ್ಯಾಂಜುಕಿಕ್ ಸಿಡಿಸಿದ ಗೋಲ್ ಫ್ರಾನ್ಸ್ ಗೆ ಹುಮ್ಮಸ್ಸು ತುಂಬಿತು. ಆದರೆ 28ನೇ ನಿಮಿಷದಲ್ಲಿ ಕ್ರೊವೇಷಿಯಾ ಕೂಡ ಅಂಕವನ್ನು 1-1ಕ್ಕೆ ಸರಿದೂಗಿಸಿತು. ಇವಾನ್ ಪೆರಿಸಿಚ್ ಇತ್ತಂಡಗಳ ಅಂಕವನ್ನು ಸಮಗೊಳಿಸಿದರು.

ಪಂದ್ಯದ ಪ್ರಥಮಾರ್ಧದ ವೇಳೆಗೆ ಫ್ರಾನ್ಸ್ ಮುನ್ನಡೆ ಸಾಧಿಸಿತ್ತು. ಅಂಟಾಯ್ನ್ ಗ್ರೀಜ್ಮನ್ ಅವರು 48ನೇ ನಿಮಿಷದಲ್ಲಿ ಬಾರಿಸಿದ ಗೋಲ್ ಫ್ರಾನ್ಸ್ ಗೆಲುವಿನ ಮುನ್ಸೂಚನೆ ನೀಡಿತು. ಪ್ರಥಮಾರ್ಧದಲ್ಲಿ 3 (45+3) ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಕ್ರೊವೇಷಿಯಾ ಗೋಲ್ ದಾಖಲಿಸಲಿಲ್ಲ.

ವಿಶ್ವಕಪ್ ವಿಜೇತರು: ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್ವಿಶ್ವಕಪ್ ವಿಜೇತರು: ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್

ಪಂದ್ಯದ ದ್ವಿತೀಯಾರ್ಧದ ಆರಂಭದಿಂದಲೂ ಫ್ರಾನ್ಸ್ ಪಾರಮ್ಯ ಮೆರೆಯಿತು. ಪೌಲ್ ಪೋಗ್ಬಾ 59ನೇ ನಿಮಿಷದಲ್ಲಿ ಬಾರಿಸಿದ ಗೋಲ್ ಕ್ರೊವೇಷಿಯಾವನ್ನು ಒತ್ತಡಕ್ಕೀಡು ಮಾಡಿತು. ಅದಾಗಿ ಕಿಲಿಯನ್ ಎಂಬಪ್ಪೆ 65ನೇ ನಿಮಿಷದಲ್ಲಿ ದಾಖಲಿಸಿದ ಗೋಲ್ ಬಹುತೇಕ ಪಂದ್ಯದ ಫಲಿತಾಂಶವನ್ನು ಸಾರಿತ್ತು.

2018ರ ಫೀಫಾ ವಿಶ್ವಕಪ್ ಫೈನಲ್ ಒನ್ ಸೈಡ್ ಪಂದ್ಯ ಅಲ್ಲವೆನ್ನಲು ಕ್ರೊವೇಷಿಯಾದ ಮಾರಿಯೋ ಮ್ಯಾಂಜುಕಿಕ್ 69ನೇ ನಿಮಿಷದಲ್ಲಿ ಸಿಡಿಸಿದ ಗೋಲೇ ಸಾಕ್ಷಿ. ಫ್ರಾನ್ಸ್ ಮುನ್ನಡೆ ಸಾಧಿಸಿದಷ್ಟೂ ಕ್ರೊವೇಷಿಯಾ ಕೂಡ ಬೆನ್ನುಬಿದ್ದು ಉತ್ತಮ ಪೈಪೋಟಿಯನ್ನೇ ನೀಡಿತು. ಆದರೆ ಅಂತಿಮವಾಗಿ ಜಯ ಫ್ರಾನ್ಸ್ ಪರವಾಯಿತು.

Story first published: Monday, July 16, 2018, 0:06 [IST]
Other articles published on Jul 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X