ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜರ್ಮನ್ ನಂತೆ ಮುಖಭಂಗ ಅನುಭವಿಸಿದ ಪ್ರಮುಖ ತಂಡಗಳಿವು!

Fifa wprld cup2018: Biggest FIFA World Cup upsets

ಮಾಸ್ಕೋ, ಜೂ. 28: ಹಾಲಿಚಾಂಪಿಯನ್ ಜರ್ಮನಿ ನಿನ್ನೆಯ (ಬುಧವಾರ) ಫೀಫಾ ವಿಶ್ವಕಪ್ ಪಂದ್ಯದಲ್ಲಿ ಸೌತ್ ಕೊರಿಯಾ ಎದುರು 0-2ರ ಅಂತರದಿಂದ ಸೋತು ಪಂದ್ಯಾಟದಿಂದ ಹೊರ ನಡೆದಿದೆ. ಕಳೆದ ವರ್ಷದ ಚಾಂಪಿಯನ್ ತಂಡಕ್ಕೆ ಇದು ಬಹುದೊಡ್ಡ ಆಘಾತವೇ. ಆದರೆ ನಿರ್ಲಕ್ಷ್ಯದಾಟ ಆಡಿದ್ದಕ್ಕೆ ಸಂಕಟವನ್ನನುಭವಿಸದೆ ಜರ್ಮನಿಗೆ ಬೇರೆ ದಾರಿಯೇ ಇಲ್ಲ.

ಬಲಾಡ್ಯ ತಂಡವೊಂದು ಅಘಾತವನ್ನನುಭವಿಸಿ ಹೀಗೆ ಫೀಫಾ ವಿಶ್ವಕಪ್ ನಿಂದ ಹೊರ ನಡೆದ ಹಲವಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ಸಿಕ್ಕುತ್ತವೆ. ಫೀಫಾ ಫುಟ್ಬಾಲ್ ಗೆ ಆಯ್ಕೆಗೊಳ್ಳುವ ಪ್ರತಿ ತಂಡವೂ ಪಂದ್ಯದಾಂತ್ಯದವರೆಗೂ ಜೀವಂತವಾಗಿದ್ದು ಮಿಂಚುವ ಕನಸು ಕಾಣುತ್ತವೆ. ಹಿಂದಿನ ಬಾರಿಯ ಚಾಂಪಿಯನ್ ಬಹುಬೇಗನೆ ಪಂದ್ಯಾಟದಿಂದ ಹೊರ ನಡೆಯುವಂತಾದರೆ ಆ ತಂಡ, ದೇಶ ಅನುಭವಿಸುವ ಸಂಕಟ ಎಷ್ಟರಮಟ್ಟಿನಲ್ಲಿರಬಹುದು? ಆದರೆ ಅಂಥ ಸಾಕಷ್ಟು ಘಟನೆಗಳಾಗಿವೆ ಎನ್ನುವುದಕ್ಕೆ ಒಂದಿಷ್ಟು ಪುರಾವೆಗಳು ಇಲ್ಲಿವೆ.

ಬ್ರೆಜಿಲ್-1950

ಬ್ರೆಜಿಲ್-1950

1950ರಲ್ಲಿ ವಿಜೇತ ತಂಡವನ್ನು ಫೈನಲ್ ಬದಲು ಪಾಯಿಂಟ್ ಟೇಬಲ್ ನ ಒಟ್ಟು ಅಂಕಗಳ ಮೂಲಕ ನಿರ್ಧರಿಸಲಾಗುತ್ತಿತ್ತು. ಉರುಗ್ವೆ-ಬ್ರೆಜಿಲ್ ಮುಖಾಮುಖಿಯಲ್ಲಿ ಬ್ರೆಜಿಲ್ ಗೆಲ್ಲಲು ಉರುಗ್ವೆ ಎದುರು ಪಂದ್ಯ ಡ್ರಾ ಮಾಡಿಕೊಂಡಿದ್ದರೂ ಸಾಕಿತ್ತು. ಆದರೆ ಪಂದ್ಯ ಉಲ್ಟಾ ಹೊಡೆಯಿತು. ಬ್ರೆಜಿಲ್ 1-0ಯ ಆರಂಭಿಕ ಮುನ್ನಡೆ ಸಾಧಿಸಿದ್ದರೂ ಅಂತಿಮ 10 ನಿಮಿಷಗಳ ಅವಧಿಯಲ್ಲಿ ಉರುಗ್ವೆ ಎರಡು ಗೋಲ್ ಬಾರಿಸಿ ಚಾಂಪಿಯನ್ ಎನಿಸಿಕೊಂಡಿತು.

ಇಂಗ್ಲೆಂಡ್-1950

ಇಂಗ್ಲೆಂಡ್-1950

ಇಂಗ್ಲೆಂಡ್ ತಂಡದಲ್ಲಿ ಟಾಮ್ ಫಿನ್ನಿ, ಸ್ಟ್ಯಾನ್ ಮಾರ್ಟೆನ್ಸೆನ್, ಬಿಲ್ಲಿ ರೈಟ್ ಮತ್ತು ವಿಲ್ಫ್ ಮ್ಯಾನಿಯನ್ ನಂತ ಅನೇಕ ಪ್ರಮುಖ ಆಟಗಾರರಿದ್ದರು. ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕಿಳಿದಿದ್ದ ಅಮೆರಿಕಾ ತಂಡದಲ್ಲಿ ಅಂಥ ದೊಡ್ಡ ಆಟಗಾರರೇ ಇರಲಿಲ್ಲ. ಆದರೆ ಅಮೇರಿಕಾ ಒಂದು ಗೋಲ್ ಬಾರಿಸಿ ಬೀಗಿತ್ತು.

ಇಟಲಿ-1966

ಇಟಲಿ-1966

1966ರ ವೇಳೆ ಇಟಲಿ ಗೆಲ್ಲುವ ಪ್ರಮುಖ ತಂಡವಾಗಿತ್ತು. ತಂಡ ಗೆದ್ದೇ ಗೆಲ್ಲುತ್ತದೆ ಎನ್ನಲು ಇಟಲಿಯಲ್ಲಿ ಗಿಯಾನಿ ರಿವೆರಾ, ಸ್ಯಾಂಡ್ರೋ ಮಝೋಲಾ, ಜಿಯಾಸಿಂಟೊ ಫಚೆಟ್ಟಿ ಅವರಂಥ ಘಟಾನುಘಟಿಗಳಿದ್ದರು. ಆದರೆ ಅಂದು ನಾರ್ತ್ ಕೊರಿಯಾ ಎದುರು ಇಟಲಿ 0-1ರಿಂದ ಸೋತು ಮನೆಯ ದಾರಿ ಹಿಡಿದಿತ್ತು.

ವೆಸ್ಟ್ ಜರ್ಮನಿ-1982

ವೆಸ್ಟ್ ಜರ್ಮನಿ-1982

ಅಲ್ಜೀರಿಯಾ ಎದುರು 1982ರಲ್ಲಿ ವಸ್ಟ್ ಜರ್ಮನಿ ಸೋಲನ್ನಪ್ಪಿತ್ತು. ಅಲ್ಜೀರಿಯಾದ ರಬಾ ಮದ್ಜೆರ್ ಅವರು ಪಂದ್ಯದ ದ್ವಿತೀಯಾರ್ಧ ಆರಂಭವಾದ 9 ನಿಮಿಷಗಳಲ್ಲಿ ಗೋಲ್ ಬಾರಿಸಿ ತಂಡದ ಖಾತೆ ತೆರೆದರು. ಅಲ್ಜೀರಿಯಾದ ಲಖ್ದಾರ್ ಬೆಲ್ಲೌಮಿ ಅವರು ಪಂದ್ಯದ ಅಂತಿಮ ಕ್ಷಣದಲ್ಲಿ ಮತ್ತೊಂದು ಗೋಲ್ ಬಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು.

ಅರ್ಜೆಂಟೀನಾ-1990

ಅರ್ಜೆಂಟೀನಾ-1990

1990ರಲ್ಲಿ ಅರ್ಜೆಂಟೀನಾವೂ ಇಂಥದ್ದೊಂದು ಮುಖಭಂಗಕ್ಕೀಡಾಗಿತ್ತು. ಹಾಲಿಚಾಂಪಿಯನ್ ಅರ್ಜೆಂಟೀನಾವನ್ನು ಕ್ಯಮರೂನ್ ತಂಡ 1-0ಯಿಂದ ಸೋಲಿಸಿ ಅಘಾತವನ್ನು ನೀಡಿತ್ತು. ಈ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ವರೆಗೂ ಮುನ್ನಡೆ ಸಾಧಿಸಿದ್ದ ಆಫ್ರಿಕನ್ ರಾಷ್ಟ್ರ, ಇಂಗ್ಲೆಂಡ್ ಎದುರು 3-2ರಿಂದ ಸೋಲನುಭವಿಸಿತ್ತು.

ಫ್ರಾನ್ಸ್-2002

ಫ್ರಾನ್ಸ್-2002

2002ರ ವಿಶ್ವಕಪ್ ವೇಳೆ ವಿಶ್ವ ಚಾಂಪಿಯನ್ ಮತ್ತು ಯುರೊಪಿಯನ್ ಚಾಂಪಿಯನ್ ಆಗಿದ್ದ ಫ್ರಾನ್ಸ್ ತಂಡ ಸೆನೆಗಲ್ ಎದುರು 0-1ರ ಸೋಲನುಭವಿಸಿತ್ತು. ಫ್ರಾನ್ಸ್ ನ ಸ್ಟಾರ್ ಆಟಗಾರರಾಗಿದ್ದ (ಈಗ ರಿಯಲ್ ಮ್ಯಾಡ್ರಿಡ್ ಈಗಿನ ಕೋಚ್) ಝಿನ್ಡಿನ್ ಜಿಡಾನೆ ಅವರು ತಂಡದಿಂದ ಹೊರಗುಳಿದಿದ್ದು ತಂಡಕ್ಕೆ ಹಿನ್ನಡೆಯಾಗಿ ಪ್ರಮುಖ ಪಂದ್ಯದಲ್ಲಿ ಸೋತಿತ್ತು.

Story first published: Thursday, June 28, 2018, 18:20 [IST]
Other articles published on Jun 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X