ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸೆಮಿಫೈನಲ್ ನಲ್ಲಿ ಫ್ರಾನ್ಸ್ ಎದುರು ಬೆಲ್ಜಿಯಂ ಎಡವಲು ಇವು ಕಾರಣಗಳು!

France vs Belgium: Five reasons why Les Bleus emerged winners

ಮಾಸ್ಕೋ, ಜುಲೈ 11: ಮಂಗಳವಾರ (ಜು. 10) ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಬೆಲ್ಜಿಯಂ 1-0 ಅಂತರದಿಂದ ಸೋತಿತ್ತು. ಬೆಲ್ಜಿಯಂ ಈ ಪಂದ್ಯ ಗೆಲ್ಲುವ ಬಲಿಷ್ಟ ತಂಡವೇ ಆಗಿತ್ತು. ಆದರೆ ಲುಕಾಕು ಬಳಗದ ಸಣ್ಣ ಯಡವಟ್ಟುಗಳು ಬೆಲ್ಜಿಯಂ ತಂಡವನ್ನು ಪ್ರಶಸ್ತಿ ಸುತ್ತಿನ ಪಂದ್ಯದಿಂದ ಹೊರಗಿಟ್ಟಿತು.

ಫೈನಲ್ ತಲುಪಿದ ಖುಷಿ, ಥಾಯ್ ಮಕ್ಕಳಿಗೆ ಅರ್ಪಣೆ : ಪೋಗ್ಬಾಫೈನಲ್ ತಲುಪಿದ ಖುಷಿ, ಥಾಯ್ ಮಕ್ಕಳಿಗೆ ಅರ್ಪಣೆ : ಪೋಗ್ಬಾ

ಈ ಫೀಫಾ ವಿಶ್ವಕಪ್ ಪಂದ್ಯಾಟದುದ್ದಕ್ಕೂ ಬೆಲ್ಜಿಯಂ ಉತ್ತಮ ಪ್ರದರ್ಶನವನ್ನೇ ನೀಡುತ್ತ ಬಂದಿತ್ತು. ಆದರೆ ಸೆಮಿಫೈನಲ್ ನಲ್ಲಿ ಯಾಕೋ ಬೆಲ್ಜಿಯಂ ಕೊಂಚ ನಿರ್ಲಕ್ಷ್ಯದಾಟ ತೋರಿತು. ಎದುರಾಳಿ ಫ್ರಾನ್ಸ್ ಬೆಲ್ಜಿಯಂ ದೌರ್ಬಲ್ಯದ ಲಾಭವನ್ನು ಪಡೆಯುತ್ತಾ ಸಾಗಿ ವಿಜಯವನ್ನು ಸಂಭ್ರಮಿಸಿತು. ಹಾಗಾದರೆ ಬೆಲ್ಜಿಯಂ ಎಡವಿದ್ದು ಎಲ್ಲೆಲ್ಲಿ?

1. ರಕ್ಷಣಾತ್ಮಕ ಆಟ

1. ರಕ್ಷಣಾತ್ಮಕ ಆಟ

ಜುಲೈ 10ರ ಪಂದ್ಯದಲ್ಲಿ ಫ್ರಾನ್ಸ್ ಅದ್ಭುತ ರಕ್ಷಣಾತ್ಮಕ ಆಟವಾಡಿತು. ಬೆಲ್ಜಿಯಂನಲ್ಲಿ ಘಟಾನುಘಟಿ ಆಟಗಾರರಿದ್ದರೂ ಅವರಿಂದ ಒಂದೂ ಗೋಲ್ ದಾಖಲಾಗದಂತೆ ರಕ್ಷಣೆ ಮಾಡಿಕೊಂಡಿತು. ಫ್ರಾನ್ಸ್ ತಂಡವನ್ನು ಹತ್ತಿಕ್ಕಬಹುದು ಎಂಬ ಬೆಲ್ಜಿಯಂ ಯೋಜನೆಯನ್ನು ಫ್ರಾನ್ಸ್ ಪಂದ್ಯದುದ್ದಕ್ಕೂ ಹಿಮ್ಮೆಟ್ಟಿಸುತ್ತಾ ಸಾಗಿತು. ಇದೇ ಕಾರಣಕ್ಕೆ ಫಲಿತಾಂಶ ಫ್ರಾನ್ ಪರ ವಾಲಿತು.

2. ಬೆಲ್ಜಿಯಂನ ತಟಸ್ಥ ಫಾರ್ವರ್ಡ್ ಲೈನ್

2. ಬೆಲ್ಜಿಯಂನ ತಟಸ್ಥ ಫಾರ್ವರ್ಡ್ ಲೈನ್

ಬೆಲ್ಜಿಯಂನಲ್ಲಿ ಲುಕಾಕು, ಕೆವಿನ್ ಡೆ ಬ್ರಯೋನ್, ಈಡನ್ ಹಜಾರ್ಡ್ ಅವರಂತ ಅದ್ಭುತ ಆಟಗಾರರಿದ್ದೂ ಬೆಲ್ಜಿಯಂಗೆ ಸೆಮಿಫೈನಲ್ ಗೆಲ್ಲಲಾಗಲಿಲ್ಲ. ಇದಕ್ಕೆ ಕಾರಣ ಬೆಲ್ಜಿಯಂ ಫಾರ್ವರ್ಡ್ ಆಟಗಾರರು ಚುರುಕಿನಾಟ ಪ್ರದರ್ಶಿಸದಿದ್ದುದು. ಮೇಲ್ನೋಟಕ್ಕೆ ಬೆಲ್ಜಿಯಂ ಉತ್ತಮ ಆಟ ಪ್ರದರ್ಶಿಸಿದಂತೆ ಕಂಡರೂ ತಂಡದ ಫಾರ್ವರ್ಡ್ ಲೈನ್ ಎಂದಿಗಿಂತ ವೀಕ್ ಇತ್ತು. ಇದನ್ನೆ ಫ್ರಾನ್ಸ್ ತನ್ನ ಶಕ್ತಿಯಾಗಿಸಿಕೊಂಡಿತು.

3. ಗೋಲ್ ಕೀಪರ್ ಕೈಚಳಕ

3. ಗೋಲ್ ಕೀಪರ್ ಕೈಚಳಕ

ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್ ತಂಡಕ್ಕೆ ಬಲವಾಗಿ ನಿಂತಿದ್ದು ಫ್ರಾನ್ಸ್ ಗೆಲುವಿಗೆ ಇನ್ನೊಂದು ಕಾರಣವಾಯ್ತು. ಉಳಿದ ಆಟಗಾರರ ಎಷ್ಟೇ ಚುರುಕು ಪ್ರದರ್ಶಿಸಿದರೂ ಆಟ ಗೋಲನ್ನು ಅವಲಂಭಿಸಿರುವುದರಿಂದ ಅಂತಿಮವಾಗಿ ಗೋಲ್ ಕೀಪರ್ ಪಾತ್ರ ಫುಟ್ಬಾಲ್ ನಲ್ಲಿ ಮುಖ್ಯವಾಗುತ್ತದೆ. ಎದುರಾಳಿ ತಂಡದಲ್ಲಿ ಎಷ್ಟೇ ಬಲಿಷ್ಟ ಆಟಗಾರರಿದ್ದರೂ ಗೋಲ್ ಕೀಪರ್ ಅವರ ಶ್ರಮವನ್ನು ವ್ಯರ್ಥಗೊಳಿಸಬಲ್ಲರು. ಮೊದಲ ಸೆಮಿಫೈನಲ್ ನಲ್ಲೂ ಫ್ರಾನ್ಸ್ ಗೋಲ್ ಕೀಪರ್ ಬೆಲ್ಜಿಯಂ ಗೋಲ್ ಪ್ರಯತ್ನವನ್ನು ವಿಫಲಗೊಳಿಸಿದ್ದು ಕಂಡು ಬಂದಿತ್ತು.

4. ಚತುರ ಮಿಡ್ ಫೀಲ್ಡಿಂಗ್

4. ಚತುರ ಮಿಡ್ ಫೀಲ್ಡಿಂಗ್

ಫುಟ್ಬಾಲ್ ನಲ್ಲಿ ಗೆಲ್ಲಬೇಕಾದರೆ ಫಾರ್ವರ್ಡ್ಸ್, ಮಿಡ್ ಫೀಲ್ಡಿಂಗ್, ಡಿಫೆನ್ಸ್ ಎಲ್ಲಾ ಸಾಲುಗಳು ಎಚ್ಚರದಿಂದ ಆಟವಾಡಬೇಕು. ಒಂದು ಸಾಲು ನಿರ್ಲಕ್ಷ್ಯ ತೋರಿಸಿದರೂ ಎದುರಾಳಿಗೆ ಅದು ವರದಾನವಾಗುತ್ತದೆ. ಫ್ರಾನ್ಸ್ ಮಿಡ್ ಫೀಲ್ಡಿಂಗ್ ಚೆನ್ನಾಗಿ ಆಟವಾಡಿದ್ದು ಬೆಲ್ಜಿಯಂ ಹಿನ್ನಡೆಗೆ ಕಾರಣವಾಯ್ತು.

5. ಡಿಡಿಯರ್ ಡೆಸ್ಚಾಂಪ್ಸ್ ಪಾತ್ರ

5. ಡಿಡಿಯರ್ ಡೆಸ್ಚಾಂಪ್ಸ್ ಪಾತ್ರ

ಫುಟ್ಬಾಲ್ ಪಂದ್ಯದ ವೇಳೆ ಕೋಚ್ ಪಾತ್ರವೂ ಮುಖ್ಯವಾಗುತ್ತದೆ. ಫ್ರಾನ್ಸ್ ಗೆಲ್ಲುವಲ್ಲಿ ಕೋಚ್ ಡಿಡಿಯರ್ ಡೆಸ್ಚಾಂಪ್ಸ್ ಪಾತ್ರವೂ ಉಲ್ಲೇಖಾರ್ಹ. ತಂಡವನ್ನು ಕಣಕ್ಕಿಳಿಸುವ ರೀತಿ, ಪಂದ್ಯದ ವೇಳೆ ನೀಡುವ ಮಾರ್ಗದರ್ಶನ, ಸಂದರ್ಭಕ್ಕೆ ತಕ್ಕಂತೆ ಬದಲಿ ಆಟಗಾರರ ಆಯ್ಕೆಗೊಳಿಸಿ ಮೈದಾನಕ್ಕಿಳಿಸುವಲ್ಲಿ ಡಿಡಿಯರ್ ಸಫಲರಾಗಿದ್ದು ಪಂದ್ಯದ ಫಲಿತಾಂಶವನ್ನು ತಂದಿತು.

Story first published: Wednesday, July 11, 2018, 21:21 [IST]
Other articles published on Jul 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X