ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

2020 ಫ್ಯಾಶ್‌ಬ್ಯಾಕ್: ಬಾರ್ಸಿಲೋನಾಗೆ ಶಾಕ್ ಕೊಟ್ಟಿದ್ದ ಲಿಯೋನೆಲ್ ಮೆಸ್ಸಿ

Flashback 2020: Lionel Messi unexpected decision and barcelona

ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಕಳೆದ ಆಗಸ್ಟ್ ತಿಂಗಳಲ್ಲಿ ಬಾರ್ಸಿಲೋನಾ ತಂಡಕ್ಕೆ ಶಾಕ್‌ವೊಂದನ್ನು ನೀಡಿದ್ದರು. ಬಾರ್ಸಿಲೋನಾ ಜೊತೆಗಿನ ಸುದೀರ್ಘ ಕಾಲದ ಸಂಬಂಧವನ್ನು ಅಂತ್ಯಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದರು. ಈ ಬಗ್ಗೆ ಮೆಸ್ಸಿ ಕ್ಲಬ್‌ಗೆ ಪ್ತ್ರವನ್ನು ಬರೆದಿದ್ದಲ್ಲದೆ ಕ್ಲಬ್ ಕೂಡ ಈ ಸುದ್ದಿಯನ್ನು ಖಚಿತಪಡಿಸಿತ್ತು.

ಲಿಯೋನೆಸ್ ಮೆಸ್ಸಿ ತೆಗೆದುಕೊಂಡ ಈ ನಿರ್ಧಾರ ಕ್ಲಬ್‌ನ ಮಂಡಳಿಗೆ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದು ಈ ಬಗ್ಗೆ ಚರ್ಚೆಯನ್ನು ನಡೆಸಿತ್ತು. ಲಿಯೋನೆಲ್ ಮೆಸ್ಸಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ರಯತ್ನಪಟ್ಟಿತ್ತು. ಈ ಪ್ರಯತ್ನದಲ್ಲಿ ಬಾರ್ಸಿಲೋನಾ ಯಶಸ್ವಿಯೂ ಆಯಿತು. ಮೆಸ್ಸಿ ಸದ್ಯಕ್ಕೆ ತಮ್ಮ ನಿರ್ಧಾರವನ್ನು ಬದಲಿಸಿ ತಂಡದಲ್ಲೇ ಉಳಿದುಕೊಳ್ಳುವ ನಿರ್ಧಾರ ತೆಗೆದುಕೊಂಡರು.

ಐಎಸ್‌ಎಲ್: ಗೋವಾ ವಿರುದ್ಧ ಜಯದ ನಿರೀಕ್ಷೆಯಲ್ಲಿ ಎಟಿಕೆಎಂಬಿಐಎಸ್‌ಎಲ್: ಗೋವಾ ವಿರುದ್ಧ ಜಯದ ನಿರೀಕ್ಷೆಯಲ್ಲಿ ಎಟಿಕೆಎಂಬಿ

ಬಾರ್ಸಿಲೋನಾಕ್ಕೆ ಹೊಸ ಕೋಚ್‌ ಆಗಿ ರೊನಾಲ್ಡ್ ಕೋಮನ್ ಆಯ್ಕೆಯಾಗಿದ್ದರು. ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ಬಯೆರ್ನ್ ಮ್ಯೂನಿಚ್ ಎದುರು 2-8 ಅಂತರದಿಂದ ಹೀನಾಯ ಸೋಲನ್ನು ಕಂಡಿತ್ತು. ಕ್ಲಬ್ ಇತಿಹಾಸದಲ್ಲಿ ಹಾಗೂ ಫುಟ್ಬಾಲ್ ದಿಗ್ಗಜ ಮೆಸ್ಸಿ ವೃತ್ತಿ ಜೀವನದಲ್ಲಿ ಇದು ಅತ್ಯಂತ ಹೀನಾಯ ಸೋಲು ಎಂದು ವಿಶ್ಲೇಷಿಸಲಾಗಿತ್ತು. ಇದಾಗಿ ಕೆಲವೇ ಸಮಯಗಳಲ್ಲಿ ಲಿಯೋನೆಲ್ ಮೆಸ್ಸಿ ಈ ನಿರ್ಧಾರವನ್ನು ಕೈಗೊಂಡಿದ್ದರು. ಇದು ತಂಡ ಗೊಂದಲದ ಗೂಡಾಗಿರುವುದನ್ನು ಬಹಿರಂಗಪಡಿಸಿತ್ತು.

2020ರ ಫುಟ್ಬಾಲ್ ಋತು ಬಾರ್ಸಿಲೋನಾ ಕ್ಲಬ್ ತಂಡದ ಅತ್ಯಂತ ಕಠಿಣ ಋತುವಿದು ಎಂದು ಕರೆಯಲಾಗಿದೆ. 2007-08ರ ಬಳಿಕ ಇದೇ ಮೊದಲ ಬಾರಿಗೆ ಬಾರ್ಸಿಲೋನಾ ತಂಡ ಇಡೀ ವರ್ಷದಲ್ಲಿ ಯಾವ ಪ್ರಶಸ್ತಿಯನ್ನೂ ಗೆಲ್ಲಸು ಸಾದ್ಯವಾಗಲಿಲ್ಲ. ಇದು ತಂಡದಲ್ಲಿ ಆಂತರಿಕವಾಗಿಯೂ ಸಂಘರ್ಷಕ್ಕೆ ಕಾರಣವಾಗಿತ್ತು.

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲಿನ ಮಳೆಯಲ್ಲಿ ಗೆದ್ದ ಬೆಂಗಳೂರುಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲಿನ ಮಳೆಯಲ್ಲಿ ಗೆದ್ದ ಬೆಂಗಳೂರು

ಮಿಲನ್ ಸೋಲಿಸಿ 6ನೇ ಯುರೋಪಾ ಲೀಗ್ ಟ್ರೋಫಿಗೆ ಮುತ್ತಿಕ್ಕಿದ ಸೆವಿಲ್ಲಾ 33 ರ ಹರೆಯದ ಲಿಯೋನೆಲ್ ಮೆಸ್ಸಿ ತಮ್ಮ ಈವರೆಗಿನ ಸಂಪೂರ್ಣ ಲೀಗ್ ವೃತ್ತಿ ಜೀವನವನ್ನು ಬಾರ್ಸಿಲೋನಾ ತಂಡಕ್ಕಾಗಿ ಆಡಿದ್ದಾರೆ. ಬಾರ್ಸಿಲೋನಾ ಪರವಾಗಿ 600 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿರುವ ಮೆಸ್ಸಿ 6 ಬ್ಯಾಲನ್ ಡಿ'ಓರ್ಸ್, ನಾಲ್ಕು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳು ಮತ್ತು 10 ಲಾ ಲಿಗಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Story first published: Wednesday, December 16, 2020, 12:56 [IST]
Other articles published on Dec 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X