ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫ್ಲ್ಯಾಶ್‌ಬ್ಯಾಕ್ 2021: ಫುಟ್ಬಾಲ್ ಲೋಕದ 4 ಸ್ಮರಣೀಯ ಕ್ಷಣಗಳು

Flashback 2021: Top 4 Memorable Moments of Football in 2021

2021 ಕ್ಯಾಲೆಂಡರ್ ವರ್ಷದ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಈ ವರ್ಷದಲ್ಲಿ ಕ್ರೀಡಾಲೋಕ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಅನೇಕ ಸಂಭ್ರಮದ ಕ್ಷಣಗಳು ಹಾಗೂ ಕೆಲ ಕಠಿಣ ಕ್ಷಣಗಳು ಕ್ರೀಡಾಲೋಕಕ್ಕೆ ಎದುರಾಗಿದೆ. ಸಾಕಷ್ಟು ದಾಖಲೆಗಳು ಸೃಷ್ಟಿಯಾಗಿದ್ದು, ಹಲವು ಭಾವನಾತ್ಮಕ ಕ್ಷಣಗಳು ಕೂಡ ಇದೆ. ಕೊರೊನಾವೈರಸ್‌ನಿಂದ ಭಾರೀ ಏಟು ತಿಂದಿದ್ದ ಕ್ರೀಡಾ ಜಗತ್ತು 2021ರಲ್ಲಿ ಇದರಿಂದ ಚೇತರಿಸಿಕೊಳ್ಳುವ ಪ್ರಯತ್ನಗಳನ್ನು ಕೂಡ ನಡೆಸಿದೆ.

ಈ ವರದಿಯಲ್ಲಿ ಫುಟ್ಬಾಲ್ ಲೋಕ ಕಂಡ ನಾಲ್ಕು ಸ್ಮರಣೀಯ ಘಟನೆಗಳು ಯಾವುದು ಎಂಬುದನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮುಂದೆ ಓದಿ..

ಕೋಪಾ ಅಮೆರಿಕಾ ಗೆದ್ದ ಅರ್ಜೆಂಟೀನಾ: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಈ ಬಾರಿಯ ಕೋಪಾ ಅಮೆರಿಕಾ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಅರ್ಜೆಂಟೀನಾ ತಂಡ ಕಳೆದ 28 ವರ್ಷಗಳಿಂದ ಅನುಭವಿಸುತ್ತಿದ್ದ ಮಹತ್ವದ ಪ್ರಶಸ್ತಿಯನ್ನು ಬರವನ್ನು ನೀಗಿಸಿಕೊಂಡಿದೆ. 1993ರ ಬಳಿಕ ಅರ್ಜೆಂಟೀನಾ ಗೆದ್ದ ಪ್ರಮುಖ ಟ್ರೋಫಿ ಇದಾಗಿದೆ. ಈ ಮೂಲಕ ವಿಶ್ವ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಪರವಾಗಿ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡರು. ಈ ಮೂಲಕ ತಮಗಿದ್ದ ಅಪವಾದದಿಂದ ಅವರು ಹೊರಬಂದಿದ್ದಾರೆ. ಅರ್ಜೆಂಟೀನಾ ಇದಕ್ಕೂ ಮುನ್ನ 1993ರಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿ ಕೊನೆಯ ಬಾರಿ ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ನಂತರ 4 ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲಲು ಸಫಲವಾಗಿರಲಿಲ್ಲ. 2004 ಮತ್ತು 2007ರಲ್ಲಿ ಬ್ರೆಜಿಲ್ ವಿರುದ್ಧ ಸೋಲು ಕಂಡರೆ 2015 ಮತ್ತು 2016ರಲ್ಲಿ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ ಸೋಲು ಅನುಭವಿಸಿತ್ತು.

ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಮರಳಿದ ರೊನಾಲ್ಡೋ: ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ವಾಪಸ್ಸಾಗಿದ್ದಾರೆ. ಮಂಗಳವಾರ (ಆಗಸ್ಟ್ 31) ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಒಪ್ಪಂದದ ಪ್ರಕ್ರಿಯೆಯಲ್ಲಿ ರೊನಾಲ್ಡೋ ಪಾಲ್ಗೊಂಡಿದ್ದಾರೆ. ಇಟಲಿ ಮೂಲದ ಯುವೆಂಟಸ್ ಕ್ಲಬ್‌ನಿಂದ ರೊನಾಲ್ಡೋ ಇಂಗ್ಲೆಂಡ್ ಕ್ಲಬ್ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ಸೇರಿಕೊಂಡಿದ್ದಾರೆ. ಐದು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ಕ್ರಿಸ್ಚಿಯಾನೊ ರೊನಾಲ್ಡೋ 6 ವರ್ಷಗಳ ಕಾಲ ಮ್ಯಾನ್ಚೆಸ್ಟರ್ ಯುನೈಟೆಡ್ ತಂಡದಲ್ಲೇ ಇದ್ದರು. 2003ರಿಂದ 2009ರ ವರೆಗೆ ಕ್ರಿಸ್ಚಿಯಾನೊ ಯುನೈಟೆಡ್‌ನಲ್ಲಿದ್ದು ಆ ಬಳಿಕ ರಿಯಲ್ ಮ್ಯಾಡ್ರಿಡ್ ತಂಡ ಸೇರಿಕೊಂಡಿದ್ದರು. 36ರ ಹರೆಯದ ರೊನಾಲ್ಡೋ ಯುನೈಟೆಡ್ ತಂಡದಲ್ಲಿ ಮೊದಲು ಇದ್ದಾಗ 292 ಪಂದ್ಯಗಳಲ್ಲಿ 118 ಗೋಲ್‌ಗಳನ್ನು ಬಾರಿಸಿದ್ದರು. ಅಲ್ಲದೆ ಇದೇ ವೇಳೆ ರೊನಾಲ್ಟೋ ತನ್ನ ಮೊದಲ ಬ್ಯಾಲನ್ ಡಿ'ಓರ್, ಚಾಂಪಿಯನ್ಸ್ ಲೀಗ್‌, ಮೂರು ಬಾರಿ ಪ್ರೀಮಿಯರ್ ಲೀಗ್, ಒಂದು ಎಫ್‌ಎ ಕಪ್, ಮೂರು ಲೀಗ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು.

ಬಾರ್ಸಿಲೋನಾ ತೊರೆದ ಮೆಸ್ಸಿ: ಫುಟ್ಬಾಲ್ ಲೋಕದ ಮತ್ತೊಂದು ಅತಿ ದೊಡ್ಡ ಟ್ರಾನ್ಸ್‌ಫರ್ ಕೂಡ ಈ ವರ್ಷ ನಡೆದಿದೆ. ಬಾರ್ಸಿಲೋನಾ ಕ್ಲಬ್‌ನ ಅವಿಭಾಜ್ಯ ಭಾಗದಂತಿದ್ದ ಮೆಸ್ಸಿ ತಮ್ಮ 21 ವರ್ಷಗಳ ಸಂಬಂಧವನ್ನು ಮುರಿದುಕೊಂಡಿದ್ದಾರೆ. ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಈಗ ಪ್ಯಾರಿಸ್‌ ಸೇಂಟ್‌-ಜರ್ಮೈನ್‌ ಕ್ಲಬ್‌ ಪರ ಆಡಲು ಎರಡು ವರ್ಷಗಳ ಗುತ್ತಿಗೆಗೆ ಸಹಿ ಮಾಡಿದ್ದಾರೆ.

ಯುರೋಕಪ್‌ಗೆ ಮುತ್ತಿಕ್ಕಿದ ಇಟೆಲಿ: ಈ ಬಾರಿಯ ಯೂರೋ ಕಪ್‌ನ ಚಾಂಪಿಯನ್ ತಂಡವಾಗಿ ಇಟೆಲಿ ತಂಡ ಹೊರಹೊಮ್ಮಿದೆ. ಇಂಗ್ಲೆಂಡ್ ಹಾಗು ಇಟೆಲಿ ಮಧ್ಯೆ ನಡೆದ ರೋಚಕ ಸೆಣೆಸಾಟದಲ್ಲಿ ಇಟಲಿ ತಂಡ 3-2 ಅಂತರದಿಂದ ಇಂಗ್ಲೆಂಡ್ ಅನ್ನು ಸೋಲಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ 1968ರ ಬಳಿಕ ಇಟಲಿ ಇದೇ ಮೊದಲ ಬಾರಿಗೆ ಯುರೋಪಿಯನ್ ಚಾಂಪಿಯನ್​ಷಿಪ್ ಕಿರೀಟ ಮುಡಿಗೇರಿಸಿಕೊಂಡಿದೆ.

Story first published: Tuesday, December 21, 2021, 23:45 [IST]
Other articles published on Dec 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X