ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸಿಂಹಾವಲೋಕನ : ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ 2018

By Mahesh

ಬೆಂಗಳೂರು, ಜೂನ್ 10: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ, ಬ್ಯೂಟಿಫುಲ್ ಗೇಮ್ ಎಂದು ಕರೆಸಿಕೊಳ್ಳುವ ಫುಟ್ಬಾಲ್ ನ ಜಾಗತಿಕ ಹಬ್ಬಕ್ಕೆ ರಷ್ಯಾ ಈ ಬಾರಿ ವೇದಿಕೆ ಒದಗಿಸುತ್ತಿದೆ.

ಎಲ್ಲಾ ಸ್ತರದ ಜನರು ಮೆಚ್ಚಿ ಆಡುವ ಫುಟ್ಬಾಲ್ ಆಟದ ವಿಶ್ವಕಪ್- ಫೀಫಾ ವಿಶ್ವಕಪ್ ಆಗಿದ್ದು ಯಾವಾಗಿನಿಂದ? ಯಾವ ತಂಡ ಇಲ್ಲಿ ತನಕ ಹೆಚ್ಚು ಬಾರಿ ಗೆದ್ದಿದೆ? ಇಲ್ಲಿದೆ ಫೀಫಾ ವಿಶ್ವಕಪ್ ಟೂರ್ನಮೆಂಟ್ ನ ಸಿಂಹಾವಲೋಕನ...

ಫೀಫಾ 2018: ಎಲ್ಲ 32 ತಂಡಗಳ ಅಂತಿಮ ಪಟ್ಟಿಫೀಫಾ 2018: ಎಲ್ಲ 32 ತಂಡಗಳ ಅಂತಿಮ ಪಟ್ಟಿ

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.

ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ ವಿಜೇತರ ಪಟ್ಟಿಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ ವಿಜೇತರ ಪಟ್ಟಿ

ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಫೀಫಾ ವಿಶ್ವಕಪ್ 2018 : ಸಂಪೂರ್ಣ ವೇಳಾಪಟ್ಟಿ, ಪ್ರಸಾರ ಸಮಯಫೀಫಾ ವಿಶ್ವಕಪ್ 2018 : ಸಂಪೂರ್ಣ ವೇಳಾಪಟ್ಟಿ, ಪ್ರಸಾರ ಸಮಯ

ಜೂನ್ 14ರಂದು ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ವಿರುದ್ಧ ಮೊದಲ ಪಂದ್ಯ ನಡೆದರೆ, ಜುಲೈ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಈ ಬಾರಿಯ ಚಾಂಪಿಯನ್ ಯಾರು ತಿಳಿಯಲಿದೆ. ವಿಶ್ವಕಪ್ ಇತಿಹಾಸ, ವಿಶ್ವಕಪ್ ಅರ್ಹತೆ, ಪಂದ್ಯದ ಮಾದರಿ, ಟೂರ್ನಮೆಂಟ್ ನಂತರ ನೀಡಲಿರುವ ಪ್ರಶಸ್ತಿಗಳ ವಿವರ ಮುಂದಿದೆ...

88 ವರ್ಷಕ್ಕೂ ಅಧಿಕ ಇತಿಹಾಸ

88 ವರ್ಷಕ್ಕೂ ಅಧಿಕ ಇತಿಹಾಸ

1872ರಲ್ಲಿ ಗ್ಲಾಸ್ಗೋನಲ್ಲಿ ಸ್ಕಾಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯ ವಿಶ್ವದ ಮೊಟ್ಟಮೊದಲ ಅಂತಾರಾಷ್ಟ್ರೀಯ ಪಂದ್ಯ ಎನಿಸಿತು. ನಂತರ 1900, 1904 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಸೇರ್ಪಡೆಯಾದರೂ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯನ್ನು ಬೆಳೆಸಲು ಕ್ರಿಕೆಟ್ ಗೆ ಐಸಿಸಿ ಇರುವಂತೆ, ಜಾಗತಿಕ ಮಟ್ಟದಲ್ಲಿ ಫುಟ್ಬಾಲ್ ಕ್ರೀಡೆ ನಿಯಂತ್ರಣಕ್ಕೆ ಫೆಡರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್(ಫೀಫಾ) ಹುಟ್ಟಿಕೊಂಡಿತು.

* 1930 ರ ಮೊದಲ ಫುಟ್ಬಾಲ್ ವಿಶ್ವಕಪ್ ನಂತರದಿಂದ ಪ್ರತಿ ವಿಶ್ವಕಪ್ ಅನ್ನು ಫೀಫಾ ವಿಶ್ವಕಪ್ ಎಂದೇ ಸಂಬೋಧಿಸಲಾಗುತ್ತದೆ.
* 1942 ಹಾಗೂ 1946 ರಲ್ಲಿ ಎರಡನೇ ವಿಶ್ವ ಸಮರದ ಕಾರಣದಿಂದ ವಿಶ್ವಕಪ್ ಪಂದ್ಯಾವಳಿ ನಡೆಯಲಿಲ್ಲ.
* ಬ್ರೆಜಿಲ್ ತಂಡ ಎಲ್ಲಾ ಟೂರ್ನಿಮೆಂಟ್ ಗಳಲ್ಲಿ ಆಡಿದ ಕೀರ್ತಿ ಹೊಂದಿದೆ.
* ಬ್ರೆಜಿಲ್ 5, ಇಟಲಿ ಹಾಗೂ ಜರ್ಮನಿ 4, ಉರುಗ್ವೆ, ಅರ್ಜೆಂಟೈನಾ ತಲಾ ಎರಡು ಬಾರಿ ಹಾಗೂ ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದಿವೆ.

ವಿಶ್ವಕಪ್ ಗೆ ಅರ್ಹತೆ

ವಿಶ್ವಕಪ್ ಗೆ ಅರ್ಹತೆ

ಪ್ರತಿ ವಿಶ್ವಕಪ್ ಮುಗಿದ ಆರು ತಿಂಗಳೊಳಗೆ ಮುಂದಿನ ವಿಶ್ವಕಪ್ ಗೆ ತಯಾರಿ ಆರಂಭವಾಗುತ್ತದೆ ಎಂದರೆ ತಪ್ಪಾಗಲಾರದು. ವಿಶ್ವಕಪ್ ನ ಅರ್ಹತಾ ಸುತ್ತಿನ ಪಂದ್ಯಗಳು 1934 ರ ವಿಶ್ವಕಪ್ ನಂತರ ಶುರುವಾದ ಅರ್ಹತಾ ಸುತ್ತಿನ ಪಂದ್ಯಗಳ ಪರ್ವಕಾಲ. ಇಂದಿನವರೆಗೂ ಅದೇ ಮಾದರಿಯಲ್ಲಿ ಮುಂದುವರೆದಿದೆ.

ಅಫ್ರಿಕ, ಏಷ್ಯಾ, ಉತ್ತರ ಹಾಗೂ ಮಧ್ಯ ಅಮೆರಿಕ, ಕೆರೆಬಿಯನ್, ದಕ್ಷಿಣ ಅಮೆರಿಕ, ಓಷಾನಿಯ ಮತ್ತು ಯುರೋಪ್ ರಾಷ್ಟ್ರಗಳು ಹೀಗೆ ವಿವಿಧ ಗುಂಪಿನಡಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ. ಅರ್ಹತಾ ಸುತ್ತಿನ ಪಂದ್ಯಗಳು ಮುಗಿಯಲು ಕನಿಷ್ಠವೆಂದರೂ ಮೂರು ವರ್ಷಗಳು ಬೇಕಾಗುತ್ತದೆ. ಈ ಬಾರಿಯ ವಿಶ್ವಕಪ್ ಗೆ ಅರ್ಹತೆ ಪಡೆಯಲು ಸುಮಾರು 224 ದೇಶಗಳು ಸ್ಪರ್ಧಿಸಿದ್ದವು. ಅಂತಿಮವಾಗಿ 32 ದೇಶಗಳು ಒಂದು ತಿಂಗಳು ಕಪ್ ಗಾಗಿ ಕಾದಾಟ ನಡೆಸಲಿವೆ.

ಅತಿಥೇಯರಿಗೆ ಅರ್ಹತಾ ಸುತ್ತಿನ ರಗಳೆ ಇಲ್ಲ

ಅತಿಥೇಯರಿಗೆ ಅರ್ಹತಾ ಸುತ್ತಿನ ರಗಳೆ ಇಲ್ಲ

ವಿಶ್ವಕಪ್ ನಡೆಯುವ ದೇಶಕ್ಕೆ ಮಾತ್ರ ಅರ್ಹತಾ ಸುತ್ತಿನ ರಗಳೆ ಇರುವುದಿಲ್ಲ. ನೇರವಾಗಿ ತಮ್ಮ ಗುಂಪಿನ ಎದುರಾಳಿಗಳೊಡನೆ ಕಾದಾಡಬಹುದು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಈ ನಿಯಮ ವಿಶ್ವಕಪ್ ಆತಿಥ್ಯವಹಿಸುವ ತಂಡಕ್ಕೆ ಮಾತ್ರ ಮೀಸಲು. ಹಾಲಿ ವಿಶ್ವಕಪ್ ಚಾಂಪಿಯನ್ ತಂಡ ಕೂಡ ಅರ್ಹತಾ ಸುತ್ತಿನಲ್ಲಿ ಸೆಣಸಿ ಮುಂದಿನ ಹಂತ ತಲುಪಬೇಕು. ಹಾಲಿ ಚಾಂಪಿಯನ್ ಇಟಲಿ ಕೂಡ ಅರ್ಹತಾ ಸುತ್ತಿನಲ್ಲಿ ಪಾಸ್ ಆಗಿ ಮುಂದಿನ ಹಂತಕ್ಕೆ ಬಂದಿದೆ.

ಮೊದಲು ಗುಂಪಿನ ಸುತ್ತು ಆಮೇಲೆ ನಾಕೌಟ್ ಹಂತ ಇರುತ್ತದೆ. ನಾಕೌಟ್ ಹಂತದಲ್ಲಿ ತಂಡಗಳು ಸಮಬಲವಾದರೆ ಹೆಚ್ಚಿನ ಅವಧಿ ನೀಡಿಕೆ ಹಾಗೂ ಪೆನಾಲ್ಟಿ ಶೂಟೌಟ್ ನೀಡಿ ಪಂದ್ಯದ ನಿರ್ಣಯ ಪಡೆಯಲಾಗುತ್ತದೆ. ನಂತರ 16 ರ ಹಂತ ಇದರಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ, ವಿರುದ್ಧ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದ ವಿರುದ್ಧ ಸೆಣೆಸಲಿದೆ. ನಂತರ ಕ್ವಾಟರ್ ಫೈನಲ್ಸ್ , ಉಪಾಂತ್ಯ, ಮೂರನೇ ಸ್ಥಾನಕ್ಕಾಗಿ ಕಾದಾಟ, ಕೊನೆಯಲ್ಲಿ ಅಂತಿಮ ಹಣಾಹಣಿ ಇರುತ್ತದೆ.

ಟೂರ್ನಿಯ ನೀಡಲಾಗುವ ಪ್ರಶಸ್ತಿ, ಬಿರುದು

ಟೂರ್ನಿಯ ನೀಡಲಾಗುವ ಪ್ರಶಸ್ತಿ, ಬಿರುದು

* ದ ಗೋಲ್ಡನ್ ಬಾಲ್ : ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ) .

* ಇದೇ ರೀತಿ ಸಿಲ್ವರ್ ಹಾಗೂ ಬ್ರೌಂಜ್ ಬಾಲ್ ಕೂಡ ನೀಡಲಾಗುತ್ತದೆ.

* ದ ಗೋಲ್ಡನ್ ಬಾಲ್ : ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ).

* ಇದೇ ರೀತಿ ಸಿಲ್ವರ್ ಹಾಗೂ ಬ್ರೌಂಜ್ ಬಾಲ್ ಕೂಡ ನೀಡಲಾಗುತ್ತದೆ.

* ದ ಗೋಲ್ಡನ್ ಷೂ: ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಹೊಡೆದ ಪಟುವಿಗೆ ಚಿನ್ನದ ಬೂಟು ಲಭಿಸುತ್ತದೆ.

* ಶ್ರೇಷ್ಠ ಗೋಲ್ ಕೀಪರ್ ಗೆ ಯಾಷಿನ್ ಪ್ರಶಸ್ತಿ

* ಶ್ರೇಷ್ಠ ಯುವ ಫುಟ್ಬಾಲ್ ಪಟು :21 ವರ್ಷ ವಯಸ್ಸಿನೊಳಗಿನ ಯುವ ಆಟಗಾರಿಗೆ ಪ್ರಶಸ್ತಿ

* ಮೀಸಲು ಫೇರ್ ಪ್ಲೇ ಪ್ರಶಸ್ತಿ : ಜನ ಮೆಚ್ಚುಗೆ ಪಡೆವ ಸಭ್ಯ ತಂಡವನ್ನು ಆರಿಸಲಾಗುತ್ತದೆ. ಅತಿ ಮನರಂಜನಾಯುಕ್ತ ತಂಡ ಹಾಗೂ ಎಲ್ಲಾ ತಾರೆಗಳ ತಂಡ ಕೂಡ ಸೇರಿದೆ.

Story first published: Sunday, June 10, 2018, 18:39 [IST]
Other articles published on Jun 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X