ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೋಲ್ಕತ್ತಾಗೆ ಫುಟ್ಬಾಲ್ ದಂತಕತೆ ಪೀಲೆ ಬರ್ತಾರೆ: ಗಂಗೂಲಿ

By Mahesh

ಕೋಲ್ಕತ್ತಾ, ಸೆ. 08: ಫುಟ್ಬಾಲ್ ಲೋಕದ ಜೀವಂತ ದಂತಕತೆ ಬ್ರೆಜಿಲ್ಲಿನ ಪೀಲೆ ಅವರು ಸುಮಾರು 38 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿದ್ದಾರೆ. ಕೋಲ್ಕತ್ತಾದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಅವರು ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ 56ನೇ ಸುಬ್ರತೊ ಕಪ್ ಶಾಲಾ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಗೆ ಸಾಕ್ಷಿಯಾಗಲು ಪೀಲೆ ಉತ್ಸುಕವಾಗಿದ್ದಾರೆ. ಇದರ ಜೊತೆಗೆ ಅಕ್ಟೋಬರ್ 13ರಂದು ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲಿದ್ದಾರೆ.

ISL: Pele to watch Kolkata-Kerala game at Salt Lake Stadium


ಆ ದಿನದಂದು ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಒಡೆತನದ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಹಾಗೂ ಸೌರವ್ ಗಂಗೂಲಿ ಸಹ ಮಾಲೀಕತ್ವದ ಅಟ್ಲೆಂಟಿಕೋ ಡಿ ಕೋಲ್ಕತ್ತಾ ನಡುವಿನ ಪಂದ್ಯ ನೋಡಲಿದ್ದಾರೆ.

ಈ ಸಂದರ್ಭದಲ್ಲಿ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅವರನ್ನು ಪೀಲೆ ಭೇಟಿ ಮಾಡಲಿದ್ದಾರೆ. ಅಕ್ಟೋಬರ್ 11 ರಿಂದ 17ರ ತನಕ ಪೀಲೆ ಅವರು ಕೋಲ್ಕತ್ತಾ ಪ್ರವಾಸದಲ್ಲಿರುತ್ತಾರೆ. ಭಾರತ ವಿಶೇಷವಾದ ದೇಶ, ಉತ್ತಮ ನೆನಪುಗಳನ್ನು ಹೊಂದಿದ್ದೇನೆ, ಭಾರತದಲ್ಲೂ ಫುಟ್ಬಾಲ್ ಆಟ ಬೆಳವಣಿಗೆಗೆ ಉಜ್ವಲ ಅವಕಾಶವಿದೆ ಎಂದು ಪೀಲೆ ಪ್ರತಿಕ್ರಿಯಿಸಿದ್ದಾರೆ.

ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎನ್ಎಸ್ಎಂಎಚ್ ನಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. 1977ರಲ್ಲಿ ಕೋಲ್ಕತ್ತಾಗೆ ಬಂದಿದ್ದ ಪೀಲೆ ಅವರು ಈಡೆನ್ ಗಾರ್ಡನ್ಸ್ ನಲ್ಲಿ ಪ್ರದರ್ಶನ ಪಂದ್ಯದಲ್ಲಿ ಸೆ. 24ರಂದು ಮೋಹನ್ ಬಗಾನ್ ತಂಡ ವಿರುದ್ಧ ಆಡಿದ್ದರು. ಬಗಾನ್ ತಂಡ ಕಾಸ್ಮಸ್ ತಂಡದ ವಿರುದ್ದಹ 2-2 ಡ್ರಾ ಸಾಧಿಸಿದ್ದು ವಿಶೇಷವಾಗಿತ್ತು.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X