ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಕಾಲು ಶತಮಾನದ ಬಳಿಕ ರಷ್ಯಾ-ಸೌದಿ ಮುಖಾಮುಖಿ

ಮಾಸ್ಕೊ, ಜೂನ್ 14: ಸುಮಾರು 25 ವರ್ಷದ ಹಿಂದೆ ಸ್ನೇಹಪೂರ್ವಕವಾದ ಪಂದ್ಯವಾಡಿದ್ದ ರಷ್ಯಾ ಮತ್ತು ಸೌದಿ ಅರೇಬಿಯಾಗಳು ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.

ಒಂದು ತಿಂಗಳ ಫುಟ್ಬಾಲ್ ಹಬ್ಬಕ್ಕೆ ಮುನ್ನುಡಿ ಬರೆಯಲಿರುವ ಆತಿಥೇಯ ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳ ನಡುವಣ ಪಂದ್ಯ ಕುತೂಹಲ ಮೂಡಿಸಿದೆ.

ಆತಿಥೇಯ ತಂಡಕ್ಕೆ ಆಘಾತ ನೀಡಲು ಒಸಾಮಾ ಹಸಾವಿ ನೇತೃತ್ವದ ಸೌದಿ ತಂಡ ತಯಾರಿ ನಡೆಸಿದೆ. ಉದ್ಘಾಟನಾ ಪಂದ್ಯವಾದ ಕಾರಣಕ್ಕೆ ಹೆಚ್ಚು ಕೌತುಕ ಮೂಡಿಸಿದೆ.

ಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯ

ಫೀಫಾ ವಿಶ್ವ Rankingನಲ್ಲಿ ಸೌದಿ ಅರೇಬಿಯಾ 67ನೇ ಸ್ಥಾನದಲ್ಲಿದ್ದರೆ, ಫೀಫಾ ವಿಶ್ವಕಪ್ ಆಡುತ್ತಿರುವ ದೇಶಗಳ ಪೈಕಿ ರಷ್ಯಾ ಅತಿ ಕಡಿಮೆ ಅಂದರೆ, 70ನೇ Ranking ಪಡೆದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ರಷ್ಯಾ ತಂಡ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಲು ವಿಫಲವಾಗುತ್ತಿದ್ದು, ಇಷ್ಟು ವರ್ಷದಲ್ಲಿಯೇ ಅತಿ ಕಡಿಮೆ Ranking ಪಡೆದುಕೊಂಡಿದೆ.

1
958022

ಹೀಗಾಗಿ ರಷ್ಯಾ ತಂಡದ ಸಾಮರ್ಥ್ಯ ವಿಶ್ವಕಪ್ ಆರಂಭಕ್ಕೂ ಮುನ್ನ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಮಾಜಿ ಗೋಲ್‌ಕೀಪರ್ ಸ್ಟಾನಿಸ್ಲಾವ್ ಚರ್ಚೆಸೊವ್ ಅವರು 2016ರ ಆಗಸ್ಟ್‌ನಲ್ಲಿ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ತಂಡದ ಪ್ರದರ್ಶನ ಸುಧಾರಿಸಿದೆ.

ಫುಟ್ಬಾಲ್ ಹಬ್ಬದ ನಡುವೆ ರಷ್ಯಾ-ಸೌದಿ ಅರೇಬಿಯಾ ತೈಲ ಮಾತುಕತೆ ಫುಟ್ಬಾಲ್ ಹಬ್ಬದ ನಡುವೆ ರಷ್ಯಾ-ಸೌದಿ ಅರೇಬಿಯಾ ತೈಲ ಮಾತುಕತೆ

ರಷ್ಯಾಗಿಂತ ಮೂರು ಸ್ಥಾನ ಮಾತ್ರ ಮೇಲಿರುವ ಸೌದಿ ಅರೇಬಿಯಾ, 2006ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ. ಆದರೆ, ತಂಡ ಈ ಅರ್ಹತೆ ಗಿಟ್ಟಿಸಿಕೊಳ್ಳಲು ನೆರವಾದ ಕೋಚ್, ನೆದರ್‌ಲ್ಯಾಂಡ್‌ನ ಬರ್ಟ್ ವಾನ್ ಮಾರ್ವಿಕ್ ಕಳೆದ ಸೆಪ್ಟೆಂಬರ್‌ನಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದರು. ಹೀಗಾಗಿ ಅವರ ಅನುಪಸ್ಥಿತಿ ತಂಡವನ್ನು ಕಾಡಬಹುದು.

ಪ್ರಮುಖ ಆಟಗಾರರಿವರು

ಪ್ರಮುಖ ಆಟಗಾರರಿವರು

ರಷ್ಯಾದ ಫೆಡರ್ ಸ್ಮೊಲೊವ್ ಮತ್ತು ಸೌದಿ ನಾಯಕ ಒಸಾಮಾ ಹಸಾವಿ ಈ ದಿನದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯಲಿರುವ ಆಟಗಾರರು.

ರಷ್ಯಾ ಗೋಲುಗಳ ಕೊರತೆ ಅನುವಿಸುತ್ತಿದೆ. ಕಳೆದ ಕೆಲವು ಪ್ರಮುಖ ಟೂರ್ನಿಗಳಲ್ಲಿನ ಆರು ಪಂದ್ಯಗಳಲ್ಲಿ ಸ್ಮೊಲೊವ್ ಹೊರತುಪಡಿಸಿ ಬೇರೆ ಯಾವ ಆಟಗಾರನೂ ಗೋಲ್ ಗಳಿಸಿಲ್ಲ. ಇದು ತಂಡಕ್ಕೆ ದೊಡ್ಡ ತಲೆನೋವಾಗಿದೆ.

ಸೌದಿಯ ಹಸಾವಿ ಪಂದ್ಯದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ವಿಶ್ವಕಪ್‌ನಲ್ಲಿ ಆಡಿದ ಅನುಭವ ಉಳ್ಳ ಯಾವ ಆಟಗಾರನೂ ಇಲ್ಲದ ತಂಡದಲ್ಲಿ 135 ಪಂದ್ಯಗಳನ್ನು ಆಡಿರುವ ಹಸಾವಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

ಪ್ರಮುಖ ಅಂಕಿ ಅಂಶ

ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳು ಈ ಹಿಂದೆ ಮುಖಾಮುಖಿಯಾಗಿದ್ದು ಒಮ್ಮೆ ಮಾತ್ರ. 1993ರ ಅಕ್ಟೋಬರ್‌ನಲ್ಲಿ ನಡೆದ ಸ್ನೇಹಪೂರ್ವಕ ಪಂದ್ಯದಲ್ಲಿ ಸೌದಿ ಅರೇಬಿಯಾ 4-2ರಿಂದ ಜಯಗಳಿಸಿತ್ತು.

1998ರ ವಿಶ್ವಕಪ್‌ನ ಆತಿಥ್ಯ ವಹಿಸಿದ್ದ ಫ್ರಾನ್ಸ್ ಟ್ರೋಫಿಯನ್ನು ಸಹ ಗೆದ್ದಿತ್ತು. ಅದರ ನಂತರ ಯಾವ ಆತಿಥೇಯ ತಂಡವೂ ಕಪ್ ಎತ್ತಿ ಹಿಡಿಯುವಲ್ಲಿ ಸಫಲವಾಗಿಲ್ಲ. ಆತಿಥ್ಯ ವಹಿಸಿಕೊಂಡ ತಂಡಗಳು ಸ್ಪರ್ಧೆಯ ಎರಡನೆಯ ಸುತ್ತನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು. ಆದರೆ, 2010ರಲ್ಲಿ ದಕ್ಷಿಣ ಆಫ್ರಿಕಾ ಗ್ರೂಪ್ ಹಂತದಲ್ಲಿಯೇ ಹೊರ ಹೋಗಿತ್ತು.

ಸತತ ಸೋಲುಗಳು

ಸತತ ಸೋಲುಗಳು

ವಿಶ್ವಕಪ್‌ನ ಕೊನೆಯ ಐದು ಪಂದ್ಯಗಳಲ್ಲಿ ರಷ್ಯಾ ಗೆಲುವನ್ನೇ ಕಂಡಿಲ್ಲ. ಸೋವಿಯತ್ ಒಕ್ಕೂಟ ಛಿದ್ರವಾದ ಬಳಿಕ ರಷ್ಯಾ ವಿಶ್ವಕಪ್‌ನಲ್ಲಿ ಗೆದ್ದಿರುವುದು ಎರಡು ಮಾರಿ ಮಾತ್ರ. 1994ರಲ್ಲಿ ಕ್ಯಾಮೆರಾನ್ ವಿರುದ್ಧ 6-1ರಲ್ಲಿ ಮತ್ತು ಟ್ಯನಿಷಿಯಾ ವಿರುದ್ಧ 2002ರಲ್ಲಿ 2-0 ಗೋಲುಗಳ ಅಂತರದಿಂದ ರಷ್ಯಾ ಜಯಿಸಿತ್ತು.

ಸೌದಿಯ ಪರಿಸ್ಥಿತಿಯೂ ಭಿನ್ನವಲ್ಲ

ಸೌದಿಯ ಪರಿಸ್ಥಿತಿಯೂ ಭಿನ್ನವಲ್ಲ

ಸೌದಿ ಅರೇಬಿಯಾದ ವಿಶ್ವಕಪ್ ಸಾಧನೆಯೂ ಅಷ್ಟೇನು ಗಮನಾರ್ಹವಾಗಿಲ್ಲ. ವಿಶ್ವಕಪ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ ಸೌದಿ ಗೆದ್ದಿರುವುದು ಒಂದರಲ್ಲಿ ಮಾತ್ರ. 1994ರ ವಿಶ್ವಕಪ್‌ನಲ್ಲಿ ಬೆಲ್ಜಿಯಂ ವಿರುದ್ಧ 1-0 ಗೋಲುಗಳಿಂದ ಸೌದಿ ಜಯಗಳಿಸಿತ್ತು. ಅಲ್ಲದೆ ಕಳೆದ ಒಂಬತ್ತು ಪಂದ್ಯಗಳ ಪೈಕಿ ಏಳರಲ್ಲಿ ಒಂದು ಗೋಲನ್ನೂ ಹೊಡೆಯುವಲ್ಲಿ ಸೌದಿ ಸಫಲವಾಗಿಲ್ಲ.

ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆಡುತ್ತಿರುವ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಸೌದಿ ಅರೇಬಿಯಾ ತಂಡ ಪಾತ್ರವಾಗಿದೆ.

ಪಂದ್ಯದ ಮಾಹಿತಿ

ಪಂದ್ಯ: ರಷ್ಯಾ Vs ಸೌದಿ ಅರೇಬಿಯಾ
ಸ್ಥಳ: ಮಾಸ್ಕೊದ ಲುಜ್ನಿಕಿ ಕ್ರೀಡಾಂಗಣ
ಸಮಯ: 8.30 (ಭಾರತೀಯ ಕಾಲಮಾನ)
ರೆಫರಿ: ನೆಸ್ಟರ್ ಪಿಟಾನ (ಅರ್ಜೆಟೀನಾ)
ನೇರಪ್ರಸಾರ: ಸೋನಿ ಟೆನ್ 2 ಮತ್ತು ಸೋನಿ ಟೆನ್ 2 ಎಚ್‌ಡಿ
ಲೈವ್ ಸ್ಟ್ರೀಮ್: ಸೋನಿ ಲೈವ್

Story first published: Friday, June 15, 2018, 13:21 [IST]
Other articles published on Jun 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X