ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏನಾಶ್ಚರ್ಯ! ಭಾರತದ ಫುಟ್ಬಾಲ್ ಟೀಂ ಭರ್ಜರಿ ಜಿಗಿತ

By Mahesh

ನವದೆಹಲಿ, ಏ.10: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ ಫುಟ್‌ಬಾಲ್‌ನ ಮುಂದಿನ ವಿಶ್ವಕಪ್ 2018ರಲ್ಲಿ ನಡೆಯಲಿದೆ. ಇದಕ್ಕೆ ಮೂರು ವರ್ಷ ಮೊದಲೇ ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡಿದೆ. ಈ ಬಾರಿಯಾದರೂ ಉತ್ತಮ ಪ್ರದರ್ಶನ ನೀಡಿ ಅರ್ಹತೆ ಗಿಟ್ಟಿಸಿಕೊಳ್ಳಲು ಭಾರತ ಶತಪ್ರಯತ್ನ ಮಾಡುತ್ತಿದೆ. ಅಚ್ಚರಿ ಪ್ರದರ್ಶನ ಮೂಲಕ ಫೀಫಾ ಶ್ರೇಯಾಂಕದಲ್ಲಿ 26 ಸ್ಥಾನ ಮೇಲಕ್ಕೇರಿದೆ.

ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವು ಮತ್ತೆ ವಿಶ್ವದ ನಂ. 1 ಪಟ್ಟ ಅಲಂಕರಿಸಿದೆ. ಆದರೆ, ಜನವರಿಯಲ್ಲಿ 171ನೇ ಸ್ಥಾನದಲ್ಲಿದ್ದ ಭಾರತ ಈಗ 26 ಸ್ಥಾನ ಮೇಲಕ್ಕೆ ಜಿಗಿದು 147ನೇ ಸ್ಥಾನಕ್ಕೇರಿದೆ.

Football world rankings: India jump 26 places to be at 147th spot


2018ರ ವಿಶ್ವಕಪ್ ಟೂರ್ನಿಗಾಗಿ ನಡೆದಿರುವ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ತನ್ನ ಶ್ರೇಯಾಂಕವನ್ನು ಉತ್ತಮಗೊಳಿಸಿಕೊಂಡಿದೆ. [ಇರಿನಾ ನೀ ಮಾಡಿದ್ದು ಸರೀನಾ?: ಫುಟ್ಬಾಲರ್ ರೊನಾಲ್ಡೊ ]

ಮಾ.12 ಹಾಗೂ 17ರಂದು ನಡೆದ ಪಂದ್ಯದಲ್ಲಿ ನೇಪಾಳ ವಿರುದ್ಧ 0-2 ಮತ್ತು ೦-೦ ಡ್ರಾ ಸಾಧಿಸಿಕೊಂಡು ಭಾರತ 87 ಸರಾಸರಿ ಅಂಕ ಗಳಿಸಿದೆ. ಇದರಿಂದ 209 ರಾಷ್ಟ್ರಗಳ ಪೈಕಿ 171ಕ್ಕೆ ಕುಸಿದಿದ್ದ ಭಾರತ ಉತ್ತಮ ಶ್ರೇಯಾಂಕ ಪಡೆದುಕೊಂಡಿದೆ.

ಮೇ 2014ರಲ್ಲಿ 147ನೇ ಸ್ಥಾನ ಪಡೆದುಕೊಂಡಿದ್ದ ಭಾರತ ಮತ್ತೊಮ್ಮೆ ಅದೇ ಸ್ಥಾನಕ್ಕೆ ಬಂದಿದೆ. ಸ್ಯಾಫ್ ದೇಶಗಳ ಪೈಕಿ ಭಾರತಕ್ಕಿಂತ ಮುಂದೆ ಅಫ್ಘಾನಿಸ್ತಾನ(135) ಹಾಗೂ ಮಾಲ್ಡೀವ್ಸ್ (141) ಸ್ಥಾನದಲ್ಲಿವೆ. ಜರ್ಮನಿ ಟಾಪ್ ನಂ.1 ಸ್ಥಾನದಲ್ಲಿದ್ದರೆ ಅರ್ಜೆಂಟೀನಾ, ಬೆಲ್ಜಿಯಂ, ಕೊಲಂಬಿಯಾ ಹಾಗೂ ಬ್ರೆಜಿಲ್ ಮೊದಲ ಟಾಪ್ ಸ್ಥಾನದಲ್ಲಿವೆ.(ಪಿಟಿಐ)

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X