ಭಾರತದ ಮಾಜಿ ಫುಟ್ಬಾಲಿಗ ಮಣಿತಂಬಿ ಸಿಂಗ್ ಅಕಾಲಿಕ ನಿಧನ

ಕೋಲ್ಕತ್ತಾ, ಆಗಸ್ಟ್ 9: ಭಾರತ ಫುಟ್ಬಾಲ್ ತಂಡದ ಮಾಜಿ ಡಿಫೆಂಡರ್, ಮೋಹನ್ ಬಗಾನ್ ಎಫ್‌ಸಿಯ ನಾಯಕ ಮಣಿತಂಬಿ ಸಿಂಗ್ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಮಣಿಪುರದ ಇಂಪಾಲ ಸಮೀಪದ ಹಳ್ಳಿಯಲ್ಲಿ ಮಣಿತಂಬಿ ಕೊನೆಯುಸಿರೆಳೆದಿರುವುದಾಗಿ ಕ್ಲಬ್ ಮೂಲ ತಿಳಿಸಿದೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿತಂಬಿ ಭಾನುವಾರ ಮುಂಜಾನೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸಿಂಗ್‌ಗೆ 39 ವರ್ಷ ವಯಸ್ಸಾಗಿತ್ತು. ಮಣಿತಂಬಿ ತನ್ನ ಪತ್ನಿ ಮತ್ತು 8ರ ಹರೆಯದ ಪುತ್ರನನ್ನು ಅಗಲಿದ್ದಾರೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

'ಕ್ಲಬ್‌ನ ಮಾಜಿ ನಾಯಕ ಮಣಿತಂಬಿ ಸಿಂಗ್ ಅವರ ಅಕಾಲಿಕ ಮರಣಕ್ಕೆ ಮೋಹನ್ ಬಗಾನ್ ತೀವ್ರ ಸಂತಾಪ ಸೂಚಿಸುತ್ತಿದೆ. ಅವರ ಕುಟುಂಬಕ್ಕೆ ಇಂಥ ಸಂಕಷ್ಟದ ಸಂದರ್ಭದಲ್ಲಿ ದೇವರು ಧೈರ್ಯ ತುಂಬಲಿ ಎಂದು ನಾವು ಪ್ರಾರ್ಥಿಸುತ್ತೇವೆ,' ಎಂದು ಮೋಹನ್ ಬಗಾನ್ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾ

ಸ್ಟೀಫನ್ ಕಾನ್ಸ್ಟಂಟೈನ್ ತರಬೇತಿಯಲ್ಲಿದ್ದ ಭಾರತ ಅಂಡರ್-23 ತಂಡದಲ್ಲಿ ಮಣಿತಂಬಿ ಪ್ರಮುಖ ಆಟಗಾರರಾಗಿದ್ದರು. 2003ರಲ್ಲಿ ಭಾರತ-23 ತಂಡ ಹಾಲಿ ಚಾಂಪಿಯನ್ ವಿಯೆಟ್ನಾಂ ಅನ್ನು 3-2 ಸೋಲಿಸಿ ಎಲ್‌ಜಿ ಕಪ್ ಜಯಿಸಿತ್ತು. ಈ ಪಂದ್ಯ ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಲ್ಲಿ ನಡೆದಿತ್ತು.

For Quick Alerts
ALLOW NOTIFICATIONS
For Daily Alerts
Story first published: Sunday, August 9, 2020, 17:27 [IST]
Other articles published on Aug 9, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X