ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬಾಲ್ ಬಾಯ್ ಆಗಿದ್ದ ಅನಿಕೇತ್ ಈಗ ಜೇಮ್ಶೆಡ್ಪುರ ಕ್ಲಬ್‌ನ ಪ್ರಮುಖ ಆಟಗಾರ

By Isl Media
From ball boy to Jamshedpur FC, Aniket lives the dream

ಜೇಮ್ಶೆಡ್ಪುರ, ಅಕ್ಟೋಬರ್ 24: ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಪ್ರೀತಮ್ ಕೊಟಾಲ್ ಹಾಗೂ ಲೆನ್ನಿ ರಾಡ್ರಿಗಸ್ ಅವರಿಗೆ ಚೆಂಡನ್ನು ತಂದು ಕೊಡುತ್ತಿದ್ದ 14 ವರ್ಷದ ಬಾಲಕ ಅನಿಕೇತ್, ಆರು ವರ್ಷಗಳ ನಂತರ ಆ ಬಾಲಕನ ಕನಸು ನನಸಾಯಿತು. ಅದೇ ಐಎಸ್ ಎಲ್ ನಲ್ಲಿ ಜೇಮ್ಶೆಡ್ಪುರ ತಂಡದ ಪರ ಆಡಲು ಸಜ್ಜಾಗಿರುವುದು ಅಚ್ಚರಿಯೇ ಸರಿ.

2017ರ ಫಿಫಾ 17ರ ವಯೋಮಿತಿಯ ವಿಶ್ವ ಕಪ್ ನಲ್ಲಿ ಭಾರತ ತಂಡದ ಪರ ಆಡಲು ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದ, ಕೊಲ್ಹಾಪುರ ಸಂಜಾತ ಯುವ ಆಟಗಾರ ಮಂಗಳವಾರ ಒಡಿಶಾ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಇಂಡಿಯನ್ ಸೂಪರ್ ಲೀಗ್ ಗೆ ಪದಾರ್ಪಣೆ ಮಾಡಿದರು.

ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!

''ಇಂಡಿಯನ್ ಸೂಪರ್ ಲೀಗ್ ನ ಜೇಮ್ಶೆಡ್ಪುರ ತಂಡದ ಪರ ಪದಾರ್ಪಣೆ ಮಾಡಿರುವುದು, ಅತೀವ ಸಂಭ್ರಮವನ್ನುಂಟು ಮಾಡಿದೆ. ಈ ಋತುವಿನುದ್ದಕ್ಕೂ ಉತ್ತಮ ಪ್ರದರ್ಶನ ತೋರಲು ಉತ್ಸುಕಃನಾಗಿದ್ದೇನೆ,'' ಎಂದು 19 ವರ್ಷದ ಆಟಗಾರ ಸಂತಸದಲ್ಲಿ ನುಡಿದರು. U-17 ವಿಶ್ವ ಕಪ್ ಬಳಿಕ ಅನಿಕೇತ್ ಐ-ಲೀಗ್ ನಲ್ಲಿ ಇಂಡಿಯನ್ ಏರೋಸ್ ಪರ ಆಡಿದ್ದರು.

From ball boy to Jamshedpur FC, Aniket lives the dream

ಜೇಮ್ಶೆಡ್ಪುರ ತಂಡವನ್ನೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಅನಿಕೇತ್, '' ನಾನು ಚಿಕ್ಕವನಿರುವಾಗ ಸುಬ್ರತಾ ಪಾಲ್ ಹಾಗೂ ಸ್ಟೀವನ್ ಡಯಾಸ್ (ಈಗ ಜೇಮ್ಶೆಡ್ಪುರದ ಸಹಾಯಕ ಕೋಚ್) ಅವರನ್ನು ಅನುಸರಿಸುತ್ತಿದ್ದೆ. ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳಿಗೆ ಬಾಲ್ ಬಾಯ್ ಆಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಜೇಮ್ಶೆಡ್ಪುರ ತಂಡಕ್ಕೆ ಸಹಿ ಮಾಡುವ ಮೊದಲು ಐದಾರು ಮಂದಿ ಹಿರಿಯ ಆಟಗಾರರೊಂದಿಗೆ ಚರ್ಚಿಸಿರುವೆ, ಎಲ್ಲರೂ ಸೌಲಭ್ಯ ಹಾಗೂ ತಂಡದ ಸಂಸ್ಕಾರದ ಬಗ್ಗೆ ಉತ್ತಮವಾಗಿಯೇ ಮಾತನಾಡಿದರು,'' ಎಂದು ಅನಿಕೇತ್ ಟಾಟಾ ತಂಡದ ಬಗ್ಗೆ ಇರುವ ಪ್ರೀತಿಯನ್ನು ಹಂಚಿಕೊಂಡರು.

ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!

ಅನಿಕೇತ್ ಮೂರು ತಿಂಗಳ ಕಾಲ ಇಂಗ್ಲಿಷ್ ಕ್ಲಬ್ ಬ್ಲಾಕ್ ಬರ್ನ್ ರೋವರ್ಸ್ ನಲ್ಲಿ ತರಬೇತಿ ಪಡೆದಿರುತ್ತಾರೆ. ಅಲ್ಲಿ ಪಡೆದಿರುವ ಅನುಭವವನ್ನು ಮುಂಬರುವ ಪಂದ್ಯಗಳಲ್ಲಿ ವಿನಿಯೋಗಿಸಿಕೊಳ್ಳುವುದಾಗಿ ಹೇಳಿದರು.
''ತರಬೇತಿ ಪಡೆಯಲು ಸಿಕ್ಕಿದ ಉತ್ತಮ ಅವಕಾಶ ಅದಾಗಿತ್ತು. ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಅಲ್ಲಿ ಬಹಳಷ್ಟು ಕಲಿತಿರುವೆ, ಬ್ಲಾಕ್ ಬರ್ನ್ ತಂಡದ ಕೋಚ್ ಹಾಗೂ ತರಬೇತುದಾರರಿಂದ ಸಾಕಷ್ಟು ಅನುಭವ ಸಿಕ್ಕಿತು. ನನ್ನ ಕೆಲಿಕೆಯ ಅಂಶಗಳನ್ನು ಇಂಡಿಯನ್ ಸೂಪರ್ ಲೀಗ್ ನಲ್ಲಿ ಬಳಸಿಕೊಳ್ಳಲು ಯತ್ನಿಸುವವೆ,'' ಎಂದು ಅನಿಕೇತ್ ಹೇಳಿದರು.

ತಂಡದ ಆಟಗಾರರ ಪಟ್ಟಿಯಲ್ಲಿ ಸಿಕೆ ವಿನೀತ್, ಹಾಗೂ ಫಾರೂಕ್ ಚೌಧರಿ ಅವರ ಸಮ್ಮುಖದಲ್ಲಿ ಆರಂಭದಲ್ಲಿ ಹೆಸರು ಕಾಣಿಸಿಕೊಳ್ಳುವುದು ಕಷ್ಟ ಎಂಬುದು ಅನಿಕೇತ್ ಗೆ ಚೆನ್ನಾಗಿ ಗೊತ್ತಿತ್ತು, ಆದರೆ ಅವರ ಕಠಿಣ ಪರಿಶ್ರಮ ಬೆಲೆ ಕೊಟ್ಟಿತು.

Story first published: Wednesday, October 23, 2019, 21:05 [IST]
Other articles published on Oct 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X