ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಘೋಷಿಸಿದ ಜರ್ಮನಿಯ ಟೋನಿ ಕ್ರೂಸ್

Germany Footbal player Toni Kroos has announced his retirement from international football

ಮ್ಯೂನಿಚ್, ಜುಲೈ 2: ಯುರೋ 2020 ಟೂರ್ನಿಯಲ್ಲಿ ಜರ್ಮನಿ ಇಂಗ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಕಂಡು ಹೊರಬಿದ್ದ ಮೂರು ದಿನಗಳ ನಂತರ ಜರ್ಮನಿ ಆಟಗಾರ ಟೋನಿ ಕ್ರೂಸ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಘೋಷಿಸಿದ್ದಾರೆ. ಈ ಬಗ್ಗೆ ಜರ್ಮನಿಯ ಮಿಡ್‌ಫೀಲ್ಡರ್ ಆಗಿರುವ ಕ್ರೂಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.

"ಜರ್ಮನಿ ಪರವಾಗಿ ನಾನು 106 ಬಾರಿ ನಾನು ಆಡಲಿಳಿದಿದ್ದೇನೆ. ಭವಿಷ್ಯದಲ್ಲಿ ಮತ್ತೊಂದು ಬಾರಿ ಇರುವುದಿಲ್ಲ" ಎಂದು 31ರ ಹರೆಯದ ಟೋನಿ ಕ್ರೂಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಯುರೋ ಕಪ್ ಟೂರ್ನಿಯ ನಂತರ ತಾನು ನಿವೃತ್ತಿಯನ್ನು ಪಡೆಯುವ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

"ನಾನು ನಿವೃತ್ತಿಗೂ ಮುನ್ನ 109 ಪಂದ್ಯಗಳಲ್ಲಿ ಭಾಗವಹಿಸುವ ಬಗ್ಗೆ ಭರವಸೆಯನ್ನು ಹೊಂದಿದ್ದೆ. ಯುರೋಪಿಯನ್ ಚಾಂಪಿಯನ್‌ಶಿಪ್ ಪ್ರಶಸ್ತಿಯ ಕೊನೆಯ ವಿಜಯೋತ್ಸವದ ಭರವಸೆಯಲ್ಲಿ ನಾನು ಎಲ್ಲಾ ಪ್ರಯತ್ನವನ್ನು ಕೂಡ ನಡೆಸಿದ್ದೆ" ಎಂದಿದ್ದಾರೆ ಟೋನಿ ಕ್ರೂಸ್.

ಟೋನಿ ಕ್ರೀಸ್ 2010ರಲ್ಲಿ ಜರ್ಮನಿ ತಂಡದ ಪರವಾಗಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಆಡಲು ಇಳಿದಿದ್ದರು. ಟೋನಿ ಕ್ರೂಸ್ 7 ಮಹತ್ವದ ಟೂರ್ನಮೆಂಟ್‌ಗಳಲ್ಲಿಜರ್ಮನಿ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಒಂದು ಬಾರಿ ಫುಟ್ಬಾಲ್ ವಿಶ್ವಕಪ್ ಎತ್ತಿ ಹಿಡಿಯುವಲ್ಲಿಯೂ ಅವರು ಯಶಸ್ವಿಯಾಗಿದ್ದರು.

2014ರಲ್ಲಿ ಜರ್ಮನಿ ಫುಟ್ಬಾಲ್ ವಿಶ್ವಕಪ್‌ ಗೆಲುವು ಸಾಧಿಸಿದ್ದಾಗ ತಂಡದ ಪ್ರಮುಖ ಆಟಗಾರನಾಗಿದ್ದರು. ಸೆಮಿ ಫೈನಲ್‌ನಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಜರ್ಮನಿ 7-1 ಅಂತರದಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಕ್ರೀಸ್ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲ್‌ಗಳನ್ನು ಗಳಿಸಿದ್ದರು.

Story first published: Friday, July 2, 2021, 21:00 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X