FIFA World Cup 2022 : ಕೋಸ್ಟರಿಕಾ ವಿರುದ್ಧ ಗೆದ್ದರೂ ವಿಶ್ವಕಪ್‌ನಿಂದ ಹೊರಬಿದ್ದ ಜರ್ಮನಿ

ಫಿಫಾ ವಿಶ್ವಕಪ್‌ನ ಇ ಗುಂಪಿನ ರೋಚಕ ಹೋರಾಟದಲ್ಲಿ ಕೋಸ್ಟರಿಕಾ ವಿರುದ್ಧ ಜರ್ಮನಿ 4-2 ಗೋಲುಗಳ ಅಂತರದಿಂದ ಮಣಿಸಿದೆ. ಹಾಗಿದ್ದರು ಕೂಡ ಜರ್ಮನಿ ನಾಕೌಟ್ ಹಂತವನ್ನು ಪ್ರವೇಶಿಸಲು ಸಾಧ್ಯವಾಗದೆ ಗ್ರೂಪ್ ಹಂತದಿಂದ ಹೊರಬಿದ್ದಿದೆ. ಗ್ರೂಪ್ ಇ ವಿಭಾಗದಲ್ಲಿ ಜಪಾನ್ ಮತ್ತು ಸ್ಪೇನ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಿರ್ಣಾಯಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್ 6 ಅಂಕಗಳೊಂದಿಗೆ ಇ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಇತ್ತ ಈ ಪಂದ್ಯದಲ್ಲಿ ಸ್ಪೇನ್ ಸೋಲು ಅನುಭವಿಸಿದ್ದರು ಕೂಡ 9.3 ಗೋಲುಗಳ ಸರಾಸರಿಯೊಂದಿಗೆ ಪ್ರೀ ಕ್ವಾರ್ಟರ್ ಅರ್ಹತೆ ಸಂಪಾದಿಸಿದೆ. ಕೋಸ್ಟರಿಕಾವನ್ನು 4-2 ಗೋಲುಗಳಿಂದ ಸೋಲಿಸಿದ ಹೊರತಾಗಿಯೂ, ಜರ್ಮನಿಯು ಗೋಲು ಸರಾಸರಿಯಲ್ಲಿ ಸ್ಪೇನ್‌ಗಿಂತ ಹಿಂದೆ ಬಿದ್ದ ಕಾರಣ ಆಘಾತಕ್ಕೆ ಒಳಗಾಗಿದೆ.

ಫಿಫಾ ವಿಶ್ವಕಪ್: ಪೊಲಾಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆಫಿಫಾ ವಿಶ್ವಕಪ್: ಪೊಲಾಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆ

ಜಪಾನ್ ಹಾಗೂ ಸ್ಪೈನ್ ತಂಡಗಳ ನಡುವಿನ ಸೆಣೆಸಾಟ ಕೂಡ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಜಪಾನ್ ಪಡೆ 2010ರ ಚಾಂಪಿಯನ್ ಸ್ಪೈನ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಜಪಾನ್ ತಮ್ಮ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಈ ಫಲಿತಾಂಶ ಮುಂದಿನ ಹಂತಕ್ಕೇರುಇವ ಕನಸು ಕಾಣುತ್ತಿದ್ದ ಜರ್ಮನಿಗೆ ಆಘಾತ ನೀಡಿದೆ.

ಇನ್ನು ಜಪಾನ್ ತಂಡಕ್ಕೆ ಇದು ಅತ್ಯಂತ ವಿಶೇಷವಾದ ಸಾಧನೆಯಾಗಿದೆ. ಕಳೆದ ನಾಲ್ಕು ವಿಶ್ವಕಪ್‌ಗಳಲ್ಲಿ ಜಪಾನ್ ತಂಡ ಮೂರನೇ ಬಾರಿಗೆ ಗ್ರೂಫ್ ಆಫ್ 16ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲದ ಏಷ್ಯಾದ ದ್ವೀಪ ರಾಷ್ಟ್ರ ಫುಟ್ಬಾಲ್ ಲೋಕದಲ್ಲಿ ವಿಶೇಷ ಸಾಧನೆ ಮಾಡಿದೆ. ಈ ಹಿಂದೆ 2010 ಹಾಗೂ 2014ರಲ್ಲಿ ಈ ಹಂತಕ್ಕೆ ಜಪಾನ್ ಪ್ರವೇಶಿಸಿತ್ತು. ಇನ್ನು ಬಲಿಷ್ಠ ಜರ್ಮನಿ ತಂಡ ಸತತ ಎರಡನೇ ಬಾರಿಗೆ ಗ್ರೂಫ್ ಆಫ್ 16 ಹಂತಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, December 2, 2022, 10:49 [IST]
Other articles published on Dec 2, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X