ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಾಂಪಿಯನ್ಸ್ ಲೀಗ್ ಫೈನಲ್‌ ಆತಿಥ್ಯ: ಅಂತಿಮ ರೇಸ್‌ನಲ್ಲಿ ಜರ್ಮನಿ, ಪೋರ್ಚುಗಲ್

Germany, Portugal contenders to host Champions League final

ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಫೈನಲ್ ಇಸ್ತಾಂಬುಲ್‌ನಿಂದ ಸ್ಥಳಾಂತರವಾಗುತ್ತಿದೆ. ಹೀಗಾಗಿ ಫೈನಲ್ ಪಂದ್ಯದ ಆತಿಥ್ಯಕ್ಕಾಗಿ ಎರಡು ದೇಶಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜರ್ಮನಿ ಹಾಗೂ ಪೋರ್ಚುಗಲ್ ಚಾಂಪಿಯನ್ಸ್ ಲೀಗ್‌ನ ಫೈನಲ್ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಳ್ಳಲು ಸ್ಪರ್ಧೆಗಿಳಿದಿದೆ.

ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಲೀಗ್ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು. ಕಳೆದ ಶನಿವಾರ ಇಸ್ತಾಂಬುಲ್‌ನ ಅಟತುರ್ಕ್ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯ ನಡೆಯಬೇಕಾಗಿತ್ತು. ಫೈನಲ್ ಪಂದ್ಯವನ್ನು ಇಸ್ತಾಂಬುಲ್‌ನಿಂದ ಸ್ಥಳಾಂತರಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆ

ಆಗಸ್ಟ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಫೈನಲ್‌ಗೆ ಜೂನ್‌17ರಂದು ಯುಇಎಫ್ಎ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಹೊಸ ತಾಣದ ನಿರ್ಧಾರವಾಗಲಿದೆ. ಫೈನಲ್ ಪಂದ್ಯ ಆಯೋಜಿಸುವ ದೇಶವೇ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯ ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳ ಮಾಹಿತಿಯ ಆಧರಿಸಿ ಎಪಿ ವರದಿ ಮಾಡಿದೆ.

ಚಾಂಪಿಯನ್ಸ್ ಲೀಗ್ ಫೈನಲ್‌ಗೆ ಪೋರ್ಚುಗಲ್‌ನ ರಾಜಧಾನಿ ಲಿಸ್ಬೆನ್‌ನ್ನು ಆಯ್ಕೆ ಆಯ್ಕೆ ಮಾಡಿದರೆ ಎರಡು ಸ್ಟೇಡಿಯಮ್‌ಗಳನ್ನು ಲಿಸ್ಬೆನ್ ಸಜ್ಜುಗೊಳಿಸಿದೆ. ಬೆನ್‌ಫಿಕಾ ಸ್ಟೇಡಿಯಮ್‌ನಲ್ಲಿ ಫೈನಲ್ ಪಂದ್ಯವನ್ನು ಆಯೋಜನೆ ಮಾಡಲು ಸಿದ್ದಗೊಳಿಸಿಡಲಾಗಿದೆ. ಜೊತೆಗೆ ಸ್ಪೋರ್ಟಿಂಗ್ ಲಿಸ್ಬನ್ ತಾಣವನ್ನು ಕೂಡ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಜರ್ಮನಿಯಲ್ಲಿ ಆಯೋಜಿಸಲ್ಪಟ್ಟರೆ ಫ್ರಾಂಕ್‌ಪರ್ಟ್ ಫೈನಲ್‌ಗೆ ಸಂಭಾವ್ಯ ತಾಣವಾಗಿದೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಪ್ರೇಕ್ಷಕರಿಲ್ಲದೆ ಟೂರ್ನಿ ಮುಂದುವರಿಯಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಕ್ತವಾಗಿರುವ ತಾಣಗಳನ್ನು ಆಯ್ಕೆ ಮಾಡುವುದು ಆದ್ಯತೆಯಾಗಿದೆ.

Story first published: Friday, August 21, 2020, 16:21 [IST]
Other articles published on Aug 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X