ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗೋವಾದ ವಿರುದ್ಧ ಮೊದಲ ಜಯದ ಹುಡುಕಾಟದಲ್ಲಿ ಡೆಲ್ಲಿ

Goa keen to bounce back as Delhi hunt for first win

ಗೋವಾ ನವೆಂಬರ್ 7: ಗುರುವಾರದಂದು ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಎಫ್ಸಿ ಗೋವಾ ತಂಡದ ಕೋಚ್ ಸರ್ಗಿಯೋ ಲೊಬೆರಾ ತಂಡದಿಂದ ಜಯವನ್ನು ನಿರೀಕ್ಷಿಸಿದ್ದಾರೆ.

ಋತುವಿನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಗೋವಾ ತಂಡ ಜೆಮ್ಷೆಡ್ಪುರ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 1-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ ನಂತರ ಕೋಚ್ ತಂಡದ ಜವಾಬ್ದಾರಿಯನ್ನು ನೆನಪಿಸಿದ್ದಾರೆ. ಪ್ರತಿಯೊಂದು ವಿಭಾಗದಲ್ಲೂ ಲೀಗ್‌ನಲ್ಲಿ ಉತ್ತಮ ಎರಡನೇ ತಂಡವೆನಿಸಿರುವ ಗೋವಾ ತಮ್ಮ ತರಬೇತಿಯಲ್ಲಿ ಇದೇ ಮೊದಲ ಬಾರಿಗೆ ಹೀನಾಯ ಸೋಲನುಭವಿಸಿದೆ ಎಂದು ಲೊಬೆರಾ ಹೇಳಿದ್ದಾರೆ.

ಐಎಸ್ಎಲ್ 2018 : ಪುಟಿದೆದ್ದ ಚೆನ್ನೈ ಗೆ ಶರಣಾದ ಪುಣೆ

'ನನ್ನ ತರಬೇತಿಯಲ್ಲಿ ಗೋವಾ ಅನು'ವಿಸಿದ ಅತ್ಯಂತ ಹೀನಾಯ ಸೋಲು ಅದಾಗಿದೆ. ನಾವು ಸುಧಾರಣೆ ಕಂಡುಕೊಳ್ಳಬೇಕಾದರೆ ಕಠಿಣಶ್ರಮವಹಿಸಬೇಕಾಗಿದೆ,' ಎಂದು ಸ್ಪೇನ್ ಮೂಲದ ಕೋಚ್ ಹೇಳಿದ್ದಾರೆ.

Goa keen to bounce back as Delhi hunt for first win

ಮನೆಯಂಗಣದಲ್ಲಿ ಗೋವಾ ತಂಡ ಶೇ. 100ರಷ್ಟು ಉತ್ತಮ ಪ್ರದರ್ಶನ ತೋರಿ ಯಶಸ್ಸು ಕಂಡಿದೆ. ಅದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿ ಮನೆಯಂಗಣದ ಪ್ರೇಕ್ಷಕರಿಗೆ ಸಂತಸ ನೀಡಬೇಕೆಂದು ಸ್ಪೇನ್‌ನ ಕೋಚ್ ಹೇಳಿದ್ದಾರೆ.

ಒಂದು ಪಂದ್ಯ ಅಮಾನುತುಗೊಂಡಿದ್ದ ಫೆರಾನ್ ಕೊರೊಮಿನಾಸ್ ಮತ್ತೆ ಆಡಲು ಲಭ್ಯವಾಗಿರುವುದು ಗೋವಾ ತಂಡದ ಶಕ್ತಿಯನ್ನು ಹೆಚ್ಚಿಸಿದೆ. 350 ನಿಮಿಷಗಳ ಕಾಲ ಆಡಿರುವ ಕೊರೊಮಿನಾಸ್ ಆರು ಗೋಲುಗಳನ್ನು ಗಳಿಸಿದ್ದು, ನಾಲ್ಕು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ.

ಲೊಬೆರಾ ಅವರು ಬ್ರೆಂಡಾನ್ ಫೆರ್ನಾಂಡೀಸ್ ಅವರನ್ನು ಬದಲಾಯಿಸುವ ಆಸಕ್ತಿ ವಹಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹಬ್ಬಿದೆ. ಗೋವಾದ ಆಟಗಾರ ರೊಮಿಯೊ ಫೆರ್ನಾಂಡೀಸ್ ಕೂಡ ತನ್ನ ಮಾಜಿ ಮನೆಯಂಗಣದ ಪಂದ್ಯಕ್ಕೆ ಸಜ್ಜಾಗಿದ್ದಾರೆ.ಜಿಕೊ ತರಬೇತಿಯಲ್ಲಿ ಉತ್ತಮ ಪ್ರದರ್ಶನತೋರಿದ್ದ ವಿಂಗರ್ ಕಳೆದ ಋತುವಿನಲ್ಲಿ ಡೆಲ್ಲಿ ತಂಡವನ್ನು ಸೇರಿದ್ದರು.

Goa keen to bounce back as Delhi hunt for first win

ಜೊಸೆಫ್ ಗೊಂಬವ್ ಅವರ ತಂಡ ಜೆಮ್ಷೆಡ್ಪುರ ತಂಡದ ವಿರುದ್ಧದ ದ್ವಿತಿಯಾರ್ಧದ 15 ನಿಮಿಷಗಳ ಆಟದಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಡೆಲ್ಲಿ ತಂಡ ಈ ಅವಧಿಯಲ್ಲಿ ಎರಡು ಗೋಲುಗಳನ್ನು ಗಳಿಸಿತ್ತು. ಅಲ್ಬಿನೋ ಗೊಮ್ಸ್ ಅವರನ್ನೇ ಹೆಚ್ಚು ನೆಚ್ಚಿಕೊಂಡಿರುವ ತಂಡ ಹೆಚ್ಚು ವಿದೇಶಿ ಆಟಗಾರರನ್ನು ಅಂಗಣಕ್ಕಿಳಿಸುವ ರಣತಂತ್ರವನ್ನು ಮುಂದುವರಿಸಲಿದೆ.

ಗೋವಾದ ವಿರುದ್ಧದ ಜಯಕ್ಕಾಗಿ ಗೊಂಬವ್‌ತಮ್ಮ ಹಿಂದಿನ ರಣತಂತ್ರವನ್ನೇ ಮುಂದುವರಿಸಲಿದ್ದಾರೆ. ಮುಂಬೈ ಸಿಟಿ ತಂಡ ಇದೇ ರೀತಿಯ ರಣತಂತ್ರವನ್ನು ರೂಪಿಸಿತ್ತು. ಆದರೆ ಡಿಫೆನ್ಸ್ ವಿಭಾಗದಲ್ಲಿ ಅಂತರ ಹೆಚ್ಚಾದ ಕಾರಣ ಗೋವಾ ತಂಡ ಐದು ಗೋಲುಗಳನ್ನು ಗಳಿಸಿ ಪಂದ್ಯ ಗೆದ್ದುಕೊಂಡಿತ್ತು.

Goa keen to bounce back as Delhi hunt for first win

ಆಡ್ರಿಯಾ ಕರ್ಮೋನಾ ಅವರ ಅತ್ಯಂತ ಉತ್ತಮ ಆಟಗಾರ. ಆದರೆ ಫಿಟ್ನೆಸ್ ಸಮಸ್ಯೆಯ ಕಾರಣ ಅವರು ಆಡಿದ್ದು ಕೇವಲ 171 ನಿಮಿಷಗಳ ಕಾಲ. 'ನಾವು ಉತ್ತಮ ಹೋರಾಟ ನೀಡಿ ಟಾಪ್ ನಾಲ್ಕರಲ್ಲಿ ಸ್ಥಾನ ಗಳಿಸಬೇಕಾಗಿದೆ. ಈಗ ನಮಗೆ ಆರು ಅಂಕಗಳ ಅಂತರವಿದೆ. ಅದಕ್ಕಾಗಿ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಅದಕ್ಕಾಗಿ ನಾವು ಜಯದೊಂದಿಗೆ ಮುಂದೆ ಸಾಗಬೇಕಾದರೆ ಕಠಿಣ ಶ್ರಮವಹಿಸಬೇಕಾಗಿದೆ,' ಎಂದು ಗೊಂಬವ್ ಹೇಳಿದರು.

ಋತುವಿನಲ್ಲಿ ಇದುವರೆಗೂ ಆಡಿರುವ ಏಳು ಪಂದ್ಯಗಳಲ್ಲಿ ಲಯನ್ಸ್ ತಂಡ ತಮ್ಮ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿದೆ. ಎಂಟನೇ ಪಂದ್ಯದಲ್ಲಿ ತಮ್ಮ ತಂಡ ಅದೃಷ್ಟದ ಹೆಜ್ಜೆ ಇಡಲಿದೆ ಎಂದು ಗೊಂಬವ್ ನಂಬಿದ್ದಾರೆ.

Story first published: Wednesday, November 7, 2018, 17:18 [IST]
Other articles published on Nov 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X