ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯುಇಎಫ್ಎ ಯುರೋ 2020 ಆರಂಭಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್

Google Doodle marks the start of UEFA Euro 2020

ಜನಪ್ರಿಯ ಯುಇಎಫ್ಎ ಯುರೋ 2020 ಪಂದ್ಯಾವಳಿ ಈ ವರ್ಷ ನಡೆಯಲಿದೆ. ಕಳೆದ ವರ್ಷ ನಡೆಯಬೇಕಿದ್ದ ಈ ಪಂದ್ಯಾವಳಿ ಕೊರೊನಾವೈರಸ್ ಕಾರಣದಿಂದ ಈ ವರ್ಷ ಕ್ಕೆ ಮುಂದೂಡಲ್ಪಟ್ಟಿದ್ದು ಜೂನ್ 11ರಂದು ಆರಂಭವಾಗುತ್ತಿದೆ. ಮೊದಲನೇ ಪಂದ್ಯದಲ್ಲಿ 'ಎ' ಗುಂಪಿನ ತಂಡಗಳಾದ ಇಟಲಿ ಮತ್ತು ಟರ್ಕಿ ರೋಮ್‌ನ ಸ್ಟೇಡಿಯೋ ಒಲಿಂಪಿಕೋದಲ್ಲಿ ಸೆಣಸಾಡಲಿವೆ.

WTC Final ಗೆಲ್ಲಬೇಕೆಂದರೆ ಆ ಸ್ಟಾರ್ ಬೌಲರ್‌ನ್ನು ತಂಡದಿಂದ ಕೈಬಿಟ್ಟು ಸಿರಾಜ್‌ಗೆ ಅವಕಾಶ ಕೊಡಿ: ಹರ್ಭಜನ್ ಸಿಂಗ್

1960ರಿಂದ ಫುಟ್‌ಬಾಲ್‌ ಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಈ ಪಂದ್ಯಾವಳಿಯಲ್ಲಿ ಈ ಬಾರಿ 51 ಪಂದ್ಯಗಳು ನಡೆಯಲಿದ್ದು ಯುರೋಪ್‌ನ 11 ನಗರಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಗೆ ಕೊರೊನಾವೈರಸ್ ಆತಂಕ ಕೂಡ ಇದ್ದು ಮುಂಜಾಗ್ರತಾ ಕ್ರಮವಾಗಿ ಪಂದ್ಯಗಳನ್ನು ನಿಯಮಿತ ವೀಕ್ಷಕರ ಉಪಸ್ಥಿತಿಯೊಂದಿಗೆ ನಡೆಸುವುದಾಗಿ ಯುಇಎಫ್ಎನ ಅಧ್ಯಕ್ಷರಾದ ಮಿಚೆಲ್ ಪ್ಲಾಟಿನಿ ತಿಳಿಸಿದ್ದಾರೆ.

euro 2020 google doodle

ಇಟಲಿ ಮತ್ತು ಟರ್ಕಿ ನಡುವೆ ರೋಮ್‌ನ ಸ್ಟೇಡಿಯೋ ಒಲಿಂಪಿಕೊದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೆ 16,000 ವೀಕ್ಷಕರಿಗೆ ಪಂದ್ಯವನ್ನು ವೀಕ್ಷಿಸಲು ಅನುಮತಿ ನೀಡಲಾಗಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್ ಪೋರ್ಚುಗಲ್‌ಗಿಂತ ವಿಶ್ವ ಚಾಂಪಿಯನ್ಸ್ ಫ್ರಾನ್ಸ್ ಗೆಲ್ಲುವ ತಂಡವೆನಿಸಿಕೊಂಡಿದೆ. ಶುಕ್ರವಾರ ಆರಂಭವಾಗುತ್ತಿರುವ ಈ ಟೂರ್ನಿಗೆ ಗೂಗಲ್ ಸಂಸ್ಥೆ ಕೂಡ ವಿಶೇಷ ಡೂಡಲ್ ತಯಾರಿಸಿದ್ದು ಟೂರ್ನಿ ಮೇಲಿನ ಕಾತುರತೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

Story first published: Friday, June 11, 2021, 11:53 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X