ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನನ್ನ ಆಟ ಬದಲಾಗಬೇಕಿದೆ; ವಿಡಿಯೋ ನೋಡಿ ಸುಧಾರಿಸಿಕೊಂಡೆ: ಮಂದಾರ್

By Isl Media
Had to change my whole game, watch videos online to improve: Mandar

ಗೋವಾ, ಅಕ್ಟೋಬರ್ 18: ಬದಲಾವಣೆ ಎಂಬುದು ಅಷ್ಟು ಸುಲಭ ಅಲ್ಲ, ಅದೂ ನೀವು 27ರ ಹರೆಯದಲ್ಲಿದ್ದರೆ ಖಂಡಿತವಾಗಿಯೂ ಸಾಧ್ಯವಿಲ್ಲ. ಕಳೆದ ಋತುವಿನಲ್ಲಿ ಎಫ್‌ಸಿ ಗೋವಾ ಕೋಚ್ ಸರ್ಗಿಯೋ ಲೊಬೆರಾ ಲೆಫ್ಟ್-ಬ್ಯಾಕ್ ನಲ್ಲಿ ಆದಿ ಎಂದು ಹೇಳಿದಾಗ ಮಂದಾರ್ ರಾವ್ ದೇಸಾಯಿಗೆ ಬಹುಶಃ ಬೇರೆ ಆಯ್ಕೆಯೇ ಇರಲಿಲ್ಲ. ಅಲ್ಲಿಂದ ಮಂದಾರ್ ತನ್ನ 'ಹೊಸ' ಸ್ಥಾನದಲ್ಲಿ ಮಿಂಚಿದರು. ಮಾತ್ರವಲ್ಲ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದರು. ತನ್ನ ಹೊಸ ಜವಾಬ್ದಾರಿಯ ಬಗ್ಗೆ ಅವರು ಐಎಸ್‌ಎಲ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಲೆಫ್ಟ್-ವಿಂಗರ್ ನಲ್ಲಿ ಆಡುತ್ತಿದ್ದ ನಿಮಗೆ ಲೆಫ್ಟ್-ಬ್ಯಾಕ್ ನಲ್ಲಿ ಆಡಲು ಹೇಳಿದಾಗ ಅದು ನಿಮಗೆ ಮೆಚ್ಚುಗೆ ಆಯಿತೇ?
ಕಳೆದ ವರ್ಷ ಋತುವಿನ ಆರಂಭಕ್ಕೆ ಸ್ಪೇನ್ ನಲ್ಲಿ ನಡೆದ ತರಬೇತಿಯ ವೇಳೆ ಕೋಚ್ ಸರ್ಗಿಯೋ ಲೊಬೆರಾ, ಮೊದಲ ಪಂದ್ಯಕ್ಕೆ ಮುನ್ನ ಈ ಸ್ಥಾನದಲ್ಲಿ ನೀವು ಚೆನ್ನಾಗಿ ಆಡಬಲ್ಲಿರಿ ಎಂದರು. ದಿನಗಳು ಸಾಗುತ್ತಿದ್ದಂತೆ ನಾನು ಡಿಫೆಂಡ್ ಮಾಡುವ ಕಲೆಯನ್ನು ಕಲಿತುಕೊಳ್ಳಲು ಯತ್ನಿಸಿದೆ. ಹಿಂದಿನ ಋತುವಿನಲ್ಲಿ ಅದು ನಾನು ಆಡಿದ ಸ್ಥಾನವಾಗಿರಲಿಲ್ಲ. ಈ ಸ್ಥಾನದಲ್ಲಿ ಉತ್ತಮವಾಗಿ ಆಡಿದರೆ, ನೀನು ರಾಷ್ಟ್ರ ತಂಡದಲ್ಲಿ ಪ್ರಮುಖ ಲೆಫ್ಟ್ ಬ್ಯಾಕ್ ಆಟಗಾರರಾಗಲಿದ್ದೀರಿ ಎಂದರು.

ಅವರ ಮಾತು ನಿಜವಾಯಿತು ನೀವು ಫುಲ್ ಬ್ಯಾಕ್ ಆಟಗಾರರಾಗಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದಿರಿ...
ಕತಾರ್ ವಿರುದ್ಧ ಪದಾರ್ಪಣೆ ಮಾಡಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಏಷ್ಯನ್ ಚಾಂಪಿಯನ್ ತಂಡವನ್ನು ಎದುರಿಸುವುದು ಕಠಿಣ ಸವಾಲು. ನಾವು ನಮ್ಮ ಉತ್ತಮವಾದ ಆಟವಾಡಿ, ಉತ್ತಮ ಲಯ ಕಾಯ್ದುಕೊಂಡೆವು. ಡಿಫೆಂಡರ್ಸ್ ಹಾಗೂ ಮಿಡ್ ಫೀಲ್ಡರ್ ನಡುವೆ ಸ್ಥಿರತೆಯನ್ನು ಕಾಯ್ದುಕೊಂಡೆವು. ಇದರಿಂದಾಗಿ ಅವರ ವಿರುದ್ಧ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಯಿತು.

ಈಗ ನಿಮಗೆ 27 ವಯಸ್ಸು, ಇದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಬದಲಾವಣೆಗೆ ಹೊಂದಿಕೊಳ್ಳಲು ನಿಮಗೆ ಎಷ್ಟು ಕಷ್ಟವಾಯಿತು?
ಅದು ಆಟಗಾರರಿಗೆ ಸಂಬಂಧಿಸಿದ್ದು, ಲೆಫ್ಟ್ ಬ್ಯಾಕ್ ನಲ್ಲಿ ಆಡುವುದು ನನ್ನ ಪಾಲಿಗೆ ಹೊಸ ಸವಾಲಾಗಿತ್ತು. ನನ್ನ ಸಂಪೂರ್ಣ ಆಟವನ್ನು ಬದಲಾಯಿಸಿಕೊಳ್ಳಬೇಕಾಗಿತ್ತು. ನನ್ನ ಆಟದಲ್ಲಿ ಸುಧಾರಣೆ ಕಂಡುಕೊಳ್ಳುವುದಕ್ಕಾಗಿ ಆನ್ಲೈನ್ ನಲ್ಲಿ ಹಲವಾರು ವೀಡಿಯೋ ಗಳನ್ನು ನೋಡಿದೆ.

Had to change my whole game, watch videos online to improve: Mandar

ಎಫ್ ಸಿ ಗೋವಾ ತಂಡದ ಸಹ ಮಾಲೀಕ ವಿರಾಟ್ ಕೊಹ್ಲಿ ಫುಟ್ಬಾಲ್ ಆಟಗಾರರು ಹೊಂದಿರಬೇಕಾದ ಫಿಟ್ನೆಸ್ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಒಬ್ಬ ಕ್ರೀಡಾ ಪಟುವೇ ನಿಮ್ಮ ಸಹ ಮಾಲೀಕರಾಗಿರುವುದು ಎಷ್ಟು ಸ್ಪೂರ್ತಿದಾಯಕ?
ಆಟಗಾರರ ಕುರಿತು ಮಾತನಾಡುವಾಗ ಅವರು ಸಾಕಷ್ಟು ಸ್ಪೂರ್ತಿದಾಯಕ ಮಾತುಗಳನ್ನಾಡುತ್ತಾರೆ.ಅವರು ಆಟಗಾರರು ಹಾಗೂ ಕ್ಲಬ್ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಎಫ್ ಸಿ ಗೋವಾ ಐಎಸ್ ಎಲ್ ನಲ್ಲಿ ಯಾವಾಗಲೂ ಉತ್ತಮವಾಗಿಯೇ ಪ್ರದರ್ಶನ ನೀಡಿದೆ. ಎಲ್ಲಾ ಸಂದರ್ಭಗಳಲ್ಲೂ ಕ್ಲಬ್ ಆಗ್ರಾ ನಾಲ್ಕರ ಸ್ಥಾನ ಕಾಯ್ದುಕೊಳ್ಳುವುದು ಸುಲಭವಲ್ಲ.ಆದರೆ ಗೋವಾ ಇದುವರೆಗೂ ಸ್ಥಿರತೆ ಕಾಯ್ದುಕೊಂಡಿದೆ. ವಿರಾಟ್ ಹೇಳಿರುವಂತೆ ಕ್ರಿಕೆಟಿಗರ ಫಿಟ್ನೆಸ್ ಮಟ್ಟ ಫುಟ್ಬಾಲಿಗರ ಫಿಟ್ನೆಸ್ ಮಟ್ಟ ಉನ್ನತವಾದುದು. ಇದು ನಿಜ. ಏಕೆಂದರೆ ಇಲ್ಲಿ ಆಟಗಾರ ನಿರಂತರವಾಗಿ ಓದುತ್ತಿರಬೇಕು. ವಿರಾಟ್ ಯಾವಾಗಲೂ ಫಿಟ್ ಆಗಿರುವ ಆಟಗಾರ. ಅಂತ ಉನ್ನತ ಫಿಟ್ನೆಸ್ ಹಂತವನ್ನು ತಲುಪಬೇಕಾದರೆ ಏನು ಮಾಡಬೇಕು ಎಂಬುದು ಕೂಡ ಅವರಿಗೆ ಗೊತ್ತು.

ನೀವು ಗೋವ ಎಫ್ ಸಿ ಸೇರಿದಾಗ ಯುವ ಆಟಗಾರರಾಗಿದ್ದೀರಿ, ಈಗ ನಾಯಕರಾಗಿದ್ದೀರಿ, ಕ್ಲಬ್ ನಲ್ಲಿ ನಿಮ್ಮ ಪಾತ್ರ ಹೇಗೆ ವಿಕಸನಗೊಂಡಿತು?
ಹಿರಿಯ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ಇದು ಗೋವಾ ತಂಡದಲ್ಲಿದ್ದಾಗ ಮಾತ್ರವಲ್ಲ, ಡೆಂಪೋ ಸ್ಪೋರ್ಟ್ ಕ್ಲಬ್ ನಲ್ಲಿ ಇದ್ದಾಗಲೂ ಈ ಕೆಲಸ ಮಾಡಿದ್ದೇನೆ. ಜಾಗತಿಕ ಕ್ರೀಡೆಯ ದಂತ ಕತೆ ಎನಿಸಿದ ಕೋಚ್ ಜೀಕೋ ಅವರಲ್ಲಿ ತರಬೇತಿ ಪಡೆದಿದ್ದೇನೆ. ಬೃಹತ್ ಸಂಖ್ಯೆಯ ಪ್ರೇಕ್ಷಕರ ಮುಂದೆ ಆಡುವಾಗ ಅವರಿಂದ ಪ್ರೋತ್ಸಾಹ ಸಿಗುವಾಗಲೂ ಸಾಕಷ್ಟು ಕಲಿಯಲು ಸಿಗುತ್ತೆ, ಅದು ರಾಷ್ಟ್ರೀಯ ತಂಡದಲ್ಲಿ ಆಡುವಾಗಲೂ ಕಲಿಕೆ ಸಹಜವಾಗಿರುತ್ತದೆ. ಎಫ್ ಸಿ ಗೋವಾದ ಮಾಜಿ ಕೋಚ್ ರಾಬರ್ಟ್ ಪೈರ್ಸ್ ಹಾಗೂ ಲುಸಿಯೋ ನನ್ನ ಆಟದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ಲಬ್ ನಲ್ಲಿರುವ ಯುವ ಆಟಗಾರರು ಇದೇ ರೀತಿಯ ಕೆಲಸ ಮಾಡುತ್ತಾರೆಂಬುದು ನನ್ನ ನಂಬಿಕೆ.

Story first published: Thursday, October 17, 2019, 20:15 [IST]
Other articles published on Oct 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X