ಇಂಡಿಯನ್ ಸೂಪರ್ ಲೀಗ್ 2018-19: ಒಂದು ಸಿಂಹಾವಲೋಕನ

By Isl Media
Hero Hero Indian Super League-5: A Great Season

ಮುಂಬೈ, ಮಾರ್ಚ್ 19: ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ ಐದನೇ ಆವೃತ್ತಿ ಯಶಸ್ವಿಯಾಗಿ ಕೊನೆಗೊಂಡಿತು. ಲೀಗ್ ಸಾಗಿ ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಿದಾಗ ಅಲ್ಲಿ ಜಯದ ಸಂಭ್ರಮವಿದೆ, ಸೋಲಿನ ನಿರಾಸೆ ಇದೆ, ಸಮಬಲದ ಸಂತೃಪ್ತಿ ಇದೆ. ಬೆಂಗಳೂರು ಎಫ್ ಸಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಆದರೆ ಕಳೆದ ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ಆಘಾತಗಳ ಮೇಲೆ ಆಘಾತ ಅನುಭವಿಸಿ ಕೊನೆಯ ಸ್ಥಾನ ಗಳಿಸಿತು.

ದೂರು ನೀಡಿ ತಾನೇ ಬಿಸಿಸಿಐಗೆ ಪರಿಹಾರ ನೀಡಿದ ಪಾಕ್ ಕ್ರಿಕೆಟ್ ಬೋರ್ಡ್!

ಬೆಂಗಳೂರು ಎಫ್ಸಿ- ಚಾಂಪಿಯನ್ ತಂಡ

ಅಲ್ಬರ್ಟ್ ರೋಕಾ ಅವರು ತಂಡವನ್ನು ತೊರೆದು ಹೋದಾಗ ನೂತನ ಕೋಚ್ ಕಾರ್ಲಸ್ ಕ್ವಾಡಾರ್ಟ್ ಅವರಿಗೆ ಕಳೆದ ಋತುವಿಗಿಂತ ತಂಡವನ್ನು ಉತ್ತಪಡಿಸುವುದು ಹಾಗೂ ಪ್ರಶಸ್ತಿಯನ್ನು ಗೆಲ್ಲುವುದು ಗುರಿಯಾಗಿತ್ತು. ಅದೇ ರೀತಿ ಯೋಜನೆಗಳನ್ನು ಹಾಕಿಕೊಂಡ ಕ್ವಾಡ್ರಾಟ್ ಅಂಗಣದಲ್ಲಿ ಅವುಗಳನ್ನು ಜಾರಿಗೆ ತಂದರರು. ಸಂಘಟಿತ ಹೋರಾಟ ಹಾಗೂ ಗೆಲ್ಲುವ ಛಲ ಜತೆಯಲ್ಲಿ ಪ್ರತಿಭಾವಂತ ಆಟಗಾರರ ಪ್ರಯೋಗ ಇವು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು. ಇವೆಲ್ಲದುದರ ಪರಿಣಾಮ ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗೋವಾ ವಿರುದ್ಧ ಜಯ ಗಳಿಸಿದ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!

ಎಫ್‌ಸಿ ಗೋವಾ--ಫುಟ್ಬಾಲ್‌ನ ಸಂಭ್ರಮ ನೀಡಿದ ತಂಡ

ಗೋವಾದ ತಂಡಗಳು 'ಭಾರತೀಯ ಫುಟ್ಬಾಲ್‌ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಆದರೆ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಫ್ ಸಿ ಗೋವಾ ಕಳೆದ ಎರಡು ಋತುಗಳಲ್ಲಿ ಅದ್ಭುತ ಪ್ರದರ್ಶನ ತೋರಿತು. ಇದಕ್ಕೆ ಕಾರಣ ಸ್ಪೇನ್ ಕೋಚ್ ಸರ್ಗಿಯೊ ಲೊಬೆರಾ. ಕಳೆದ ಋತುವಿನ ಆಟಗಾರರನ್ನೇ ಉಳಿಸಿಕೊಂಡು, ಅವರಲ್ಲಿ ನಂಬಿಕೆ ಇರಿಸಿದ ಕೋಚ್, ಸ್ಪೇನ್ ಫುಟ್ಬಾಲ್ ತತ್ವಗಳನ್ನು ಗೋವಾದ ತಂಡದಲ್ಲಿ ಅಳವಡಿಸಿದರು. ಡಿಫೆನ್ಸ್ ವಿಭಾಗದಲ್ಲಿ ವೈಫಲ್ಯ ಹೊಂದುತ್ತಿದ್ದ ಗೋವಾ, ಮೌರ್ತದಾ ಫಾಲ್ ಹಾಗೂ ಕಾರ್ಲಸ್ ಪೆನಾ ಅವರನ್ನು ಡಿಫೆನ್ಸ್ ವಿ'ಭಾಗದಲ್ಲಿ ಆಡಿಸುವ ಮೂಲ ಉತ್ತಮ ತೀರ್ಮಾನದೊಂದಿಗೆ ತಂಡವನ್ನು ಬಲಿಷ್ಠಗೊಳಿಸಿದರು. ಲೆಫ್ಟ್ ಬ್ಯಾಕ್‌ನಲ್ಲಿ ಮಂದಾರ ರಾವ್ ದೇಸಾಯಿ, ಹ್ಯೂಗೋ ಬೌಮಾಸ್ ಅವರಿಂದ ತಂಡಕ್ಕೆ ಹೊಸ ರೂಪ ನೀಡಿದರು. ಗೋವಾ ತಂಡ ಫೈನಲ್‌ನಲ್ಲಿ ಸೋತಿರಬಹುದು, ಆದರೆ ಈ ಬಾರಿಯ ಐಎಸ್‌ಎಲ್‌ನಲ್ಲಿ ಪ್ರೇಕ್ಷಕರ ಫೇವರಿಟ್ ತಂಡವಾಗಿ ಚಿರಸ್ಥಾಯಿಯಾಯಿತು.

ICC Test ranking‌ನಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್, ಪೂಜಾರಗೆ 3ನೇ ಸ್ಥಾನ

ಮುಂಬೈ ಸಿಟಿ-ಅತ್ಯಂತ ಸಮತೋಲನದ ತಂಡ

ವಿದೇಶಿ ಆಟಗಾರರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪರಿಣಾಮ ಮುಂಬೈ ಸಿಟಿ ತಂಡ ಈ ಬಾರಿಯ ಐಎಸ್‌ಎಲ್‌ನಲ್ಲಿ ಪ್ಲೇ ಆಫ್ ಹಂತ ತಲುಪಿತು. ಉತ್ತಮ ಆರಂ' ಕಾಣುವಲ್ಲಿ ವಿಲವಾದ ತಂಡ ವಿರಾಮದ ನಂತರ ಯಶಸ್ಸಿನ ಹೆಜ್ಜೆ ಇಡಲಾರಂಭಿಸಿತು. ಗೋವಾ ವಿರುದ್ಧದ ಸೆಮಿೈನಲ್‌ನಲ್ಲಿ 5-1 ಗೋಲಿನಿಂದ ಸೋಲುವ ಮೂಲಕ ಮುಂಬೈ ಫೈನಲ್ ಆಸೆ ಕಮರಿತು. ಭವಿಷ್ಯದಲ್ಲಿ ಮುಂಬೈ ಬಲಿಷ್ಠ ತಂಡವಾಗಿ ರೂಪುಗೊಳ್ಳುವುದು ಸ್ಪಷ್ಟ.

ನಿದಹಾಸ್ ಫೈನಲ್‌ನಲ್ಲಿ ಭಾರತದ ರೋಚಕ ಗೆಲುವಿನ ಗುಟ್ಟು ಬಿಚ್ಚಿಟ್ಟ ಕಾರ್ತಿಕ್!

ನಾರ್ತ್ ಈಸ್ಟ್ ಯುನೈಟೆಡ್-ಫೆರಾರಿ ಪಡೆ

ಎಲ್ಕೋ ಷೆಟೋರಿ ಅವರ ನಾರ್ತ್ ಈಸ್ಟ್ ಯುನೈಟೆಡ್ ತಂಡ ಗಾಯದ ಸಮಸ್ಯೆ ಹಾಗೂ ಅಮಾನತು ಸಮಸ್ಯೆಗಳನ್ನು ಋತವಿನುದ್ದಕ್ಕೂ ಅನುಭವಿಸಿತ್ತು. ಡಿಫೆನ್ಸ್ ವಿಭಾಗದಲ್ಲೇ ತಂಡದ ಸಮಸ್ಯೆ ಹೆಚ್ಚಾಗಿತ್ತು. ಸ್ಫೂರ್ತಿ ಹಾಗೂ ಸಂಘಟಿತ ಹೋರಾಟ ತಂಡವನ್ನು ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಹಂತವನ್ನು ತಲಪುವಂತೆ ಮಾಡಿತು. ಮಿಸ್ಲಾವ್ ಕೊಮೊರ್‌ಸ್ಕಿ , 'ಭಾರ್ತಲೋಮ್ಯೊ ಒಗ್ಬಚೆ, ರೌಲಿನ್ ಬೋರ್ಜಸ್ ಮತ್ತು ಫೆಡೆರಿಕೊ ಗಲ್ಲೆಗೋ ನಿರ್ಣಾಯಕ ಹಂತದಲ್ಲಿ ಗಾಯಗೊಂಡಿರುವುದು ತಂಡದ ಫೈನಲ್ ಹಾದಿಗೆ ಅಡ್ಡಿಯನ್ನುಂಟು ಮಾಡಿತು. ಇದೇ ಆಟಗಾರರನ್ನು ಉಳಿಸಿಕೊಂಡಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳುವುದ ಸ್ಪಷ್ಟ.

ವಿರಾಟ್ ಕೊಹ್ಲಿಯ ಆರ್‌ಸಿಬಿ ನಾಯಕತ್ವವನ್ನು ಅಣಕಿಸಿದ ಗೌತಮ್ ಗಂಭೀರ್!

ಜೆಮ್ಷೆಡ್ಪುರ ಎಫ್‌ಸಿ-ಆರಕ್ಕೇರದ, ಮೂರಕ್ಕಿಳಿಯದ ತಂಡ

ಉತ್ತಮ ಆರಂಭ ಕಂಡು ನಿರಾಸೆಯ ಅಂತ್ಯ ಕಂಡ ತಂಡ ಜೆಮ್ಷೆಡ್ಪುರ ಎಫ್ ಸಿ. ಉತ್ತಮವಾಗಿ ಆಡಿದರೂ ಡ್ರಾ ಪಂದ್ಯಗಳೇ ಹೆಚ್ಚಾದ ಕಾರಣ ಟಾಟಾ ಪಡೆ ಪ್ಲೇ ಆಫ್ ಹಂತ ತಲಪುವಲ್ಲಿ ವಿಲವಾಯಿತು. ಪ್ರತಿಭಾವಂತ ಆಟಗಾರರಿಂದ ಕೂಡಿದ ಜೆಮ್ಷೆಡ್ಪುರ ತಂಡ ಪ್ಲೇ ಆಫ್ ಹಂತದಕ್ಕಾಗಿ ಕೊನೆಯವರೆಗೂ ಹೋರಾಟ ನೀಡಿತ್ತು. ತಂಡದ ಪರ ಮೈಕಲ್ ಸೂಸಾಯ್‌ರಾಜ್ ಹಾಗೂ ತಿರಿ ಉತ್ತಮ ರೀತಿಯಲ್ಲಿ ಆಟ ಪ್ರದರ್ಶಿಸಿದ್ದರು. ಟಿಮ್ ಕಾಹಿಲ್ ಹಾಗೂ ಸರ್ಗಿಯೋ ಸಿಡೋಂಚ ಅವರು ಗಾಯದ ಸಮಸ್ಯೆಯಿಂದ ಬೇಗನೆ ಲೀಗ್ ನಿಂದ ಹೊರ ನಡೆದರು. ಮಿಡ್‌ಫೀಲ್ಡ್‌ನಲ್ಲಿ ಮಾರಿಯೋ ಆರ್ಕ್ವೆಸ್ ಮತ್ತು ಮೆಮೋ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ಲೇ ಆಫ್ ಹಂತ ತಲಪುವಲ್ಲಿ ವಿಲವಾಗಿರುವ ಕಾರಣ ಸ್ಟೀಲ್ ಪಡೆಗೆ ನಿರಾಸೆಯಾಗಿರುವುದು ಸಹಜ.

ಎಟಿಕೆ-ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ

ಎಟಿಕೆ ತಂಡದ ಬಗ್ಗೆ ಈ ಬಾರಿ ಸಾಕಷ್ಟು ನಿರೀಕ್ಷೆ ಇದ್ದಿತ್ತು. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಹೆಚ್ಚಿನ ಪಂದ್ಯಗಳಲ್ಲಿ ಈ ಆಟಗಾರರು ಬೆಂಚ್ ಕಾಯಿಸಿದ್ದೇ ಹೆಚ್ಚು. ಸ್ಟಾರ್ ಆಟಗಾರರನ್ನು ಬೆಂಚ್‌ನಲ್ಲಿ ಕೂರಿಸಿ ಪಂದ್ಯವಾಡಿದ ತಂಡವೆಂದರೆ ಅದು ಎಟಿಕೆ. ಕಳೆದ ಋತುವಿನಿಂದಲೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದ ಕೋಲ್ಕೊತಾ ಮೂಲದ ತಂಡ ಈ ಬಾರಿ ಅದೇ ಸಮಸ್ಯೆಯಲ್ಲಿ ಮುಂದುವರಿಯಿತು. ಗೋಲು ಗಳಿಸುವ ಅವಕಾಶ ಸಿಕ್ಕರೂ ತಂಡದ ಸ್ಟಾರ್ ಆಟಗಾರರು ಗೋಲು ಗಳಿಸುವಲ್ಲಿ ವಿಲವಾಗುತ್ತಿದ್ದರು. ಆಂಡ್ರೆ ಬಿಕೇ ಹಾಗೂ ಜಾನ್ ಜಾನ್ಸನ್ ಕೋಚ್ ಅವರ ಗೌರವ ಕಾಯುವಲ್ಲಿ ಸಲರಾದರು. ಎಮಿಲಿಯಾನೊ ಅಲ್ಫಾರೋ, ಕಲು ಅಚೆ, ಅವರಂಥ ಾರ್ವರ್ಡ್ ಆಟಗಾರರು ಗಾಯಗೊಂಡಿದ್ದು ತಂಡದ ಯಶಸ್ಸಿಗೆ ಅಡ್ಡಿಯಾಯಿತು. ಎಡು ಗಾರ್ಸಿಯಾ ಹಾಗೂ ಮ್ಯಾನ್ವೆಲ್ ಲಾನ್ಜೆರೋಟ್ ಸ್ಥಿರ ಪ್ರದರ್ಶನ ತೋರುವಲ್ಲಿ ವಿಲರಾದರು. ಕೋಮಲ್ ಥಟಾಲ್ ಹಾಗೂ ಅಂಕಿತ್ ಮುಖರ್ಜಿ 'ನಾತ್ಮಕ ಶಕ್ತಿಯಾಗಿ ರೂಪುಗೊಂಡರು.

ಪುಣೆ ಸಿಟಿ-ಸರಿಯಾದ ಸಮಯಕ್ಕೆ ಚೇರಿಸಿಕೊಂಡಿಲ್ಲ

ಮೂರು ಪಂದ್ಯಗಳ ನಂತರ ಕೋಚ್ ಬದಲಾಯಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟ ಪುಣೆ ಸಿಟಿ ತಂಡ, ಆ ಬಳಿಕವೂ ಚೇತರಿಸಿಕೊಳ್ಳುವಲ್ಲಿ ವಿಫಲವಾಯಿತು. ಇದು ಋತುವಿನುದ್ದಕ್ಕೂ ತಂಡದ ಸಮಸ್ಯೆಯಾಗಿ ರೂಪುಗೊಂಡಿತು. ಪ್ರದ್ಯುಮ್ ರೆಡ್ಡಿ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡು ಒಂದು ಹಂತದವರೆಗೆ ಮುನ್ನಡೆಸಿದ್ದರು. ಆದರೆ ಫಿಲ್ ಬ್ರೌನ್ ಬರುವಾಗ ತಂಡ ಆಗಾಗಲೇ ತಾನೆಲ್ಲರಬೇಕೆಂಬುದನ್ನು ತೀರ್ಮಾನಿಸಿತ್ತು. ಎಂಟು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲನುಭವಿಸಿದ ಪುಣೆ ತಾನು ಪ್ಲೇ ಆಫ್ ತಲುಪಲು ಅರ್ಹವಿರುವ ತಂಡ ಎಂಬುದನ್ನು ಸಾಬೀತುಪಡಿಸಿತ್ತು. ಆದರೆ ಈ ಬಾರಿ ಆಗಲೇ ಕಾಲ ಮಿಂಚಿದ್ದರಿಂದ ಮುಂದಿನ ಋತುವಿನಲ್ಲಿ ಅದು ಸಾಧ್ಯವಾಗಬಹುದು.

ಡೆಲ್ಲಿ ಡೈನಮೋಸ್-ಯುವ ಪಡೆ, ಆದರೆ ಸ್ಥಿರ ಪ್ರದರ್ಶನವಿಲ್ಲ

ಡೆಲ್ಲಿ ತಂಡ ಈ ಬಾರಿಯ ಋತುವನ್ನು ಅತ್ಯಂತ ನಿದಾನಗತಿಯಲ್ಲಿ ಆರಂಭಿಸಿತು. ನೂತನ ಕೋಚ್ ಜೊಸೇಫ್ ಗೊಂಬೊವ್ ಅವರ ರಣತಂತ್ರವನ್ನು ಅರಿತುಕೊಳ್ಳಲು ಯುವ ಆಟಗಾರರಿಗೆ ಹೆಚ್ಚು ಕಾಲಾವಕಾಶ ಬೇಕಾಯಿತು. ಕೋಚ್ ಅವರು ಹೇಳಿದ್ದನ್ನು ಅರಿತುಕೊಂಡು ಪಂದ್ಯದಲ್ಲಿ ಅಳವಡಿಸಿ ಯಶಸ್ಸು ಕಾಣುವಷ್ಟರಲ್ಲಿ ತಂಡ ಅಂಕಪಟ್ಟಿಯಲ್ಲಿ ಹಿಂದೆ ಬಿದ್ದಿತ್ತು. ಆದರೆ ಯುವ ಆಟಗಾರರಿಂದ ಕೂಡಿದ ಪಡೆ ಅಂತಿಮ ಹಂತದಲ್ಲಿ ಎಲ್ಲ ತಂಡಗಳಿಗೂ ಎಚ್ಚರಿಕೆಯ ಕರೆಯನ್ನು ನೀಡಿತ್ತು. ಲೀಗ್‌ನ ವಿರಾಮದ ನಂತರ ಡೆಲ್ಲಿ ತಂಡ ಆಡಿದ ಹೆಚ್ಚಿನ ಪಂದ್ಯಗಳಲ್ಲಿ ಯಶಸ್ಸು ಕಂಡಿತ್ತು, ಯುವ ಆಟಗಾರರು 'ಾರತದ ುಟ್ಬಾಲ್‌ನಲ್ಲಿ ಭರವಸೆಯ ತಾರೆಗಳಾಗಿ ಮೂಡಿ ಬಂದರು. ಲಾಲಿಯಾನ್ಜುವಾಲಾ ಚಾಂಗ್ಟೆ, ನಂದಕಮಾರ್ ಶೇಕರ್ , ಡೇನಿಯಲ್ ಲಾಲ್‌ಲಿಂಪುಯಾ ಹಾಗೂ ವಿನೀತ್ ರಾಯ್ ಸೇರಿದಂತೆ ಡೆಲ್ಲಿ ತಂಡದ ಯುವ ಆಟಗಾರರು ಮುಂದಿನ ಲೀಗ್‌ಗೆ ಹೆಚ್ಚಿನ ಆಯ್ಕೆಯನ್ನು ಮಾಡಿಕೊಟ್ಟಿದ್ದಾರೆ. ಇದೊಂದು ಭವಿಷ್ಯದ ಉತ್ತಮ ತಂಡ ಎಂಬುದರಲ್ಲಿ ಎರಡು ಮಾತಿಲ್ಲ.

ಐಎಸ್‌ಎಲ್ 2018-19: ಬೆಂಗಳೂರು ಎಫ್‌ಸಿಯ ಗೆಲುವಿನ ರುವಾರಿಗಳು

ಕೇರಳ ಬ್ಲಾಸ್ಟರ್ಸ್ -ಮತ್ತೆ ಮತ್ತೆ ಆಘಾತ

ಕಳೆದ ಬಾರಿ ಪ್ಲೇ ಆ್ ಹಂತವನ್ನು ತಲಪುವಲ್ಲಿ ವಿಫಲವಾಗಿರುವ ಕೇರಳ ಬ್ಲಾಸ್ಟರ್ಸ್ ತಂಡ ಈ ಬಾರಿ ಆ ಹಂತ ತಲಪುವ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಮೊದಲ ಪಂದ್ಯದಲ್ಲಿ ಗೆದ್ದ ನಂತರ ಮತ್ತೊಂದು ಜಯ ಗಳಿಸುವಾಗ ಐಎಸ್‌ಎಲ್ ಬಹುತೇಕ ಕೊನೆಯ ಹಂತ ತಲುಪಿತ್ತು. ನಿರಂತರ 14 ಪಂದ್ಯಗಳಲ್ಲಿ ಜಯ ಕಾಣುವಲ್ಲಿ ತಂಡ ವಿಲವಾಗಿರುವುದು ಬೇಸರದ ಸಂಗತಿ. ಕೇವಲ ಎರಡು ಪಂದ್ಯಗಳಲ್ಲಿ ಜಯ ಕಂಡಿರುವ ತಂಡ ಅಂತಿಮವಾಗಿ ತಾನಿರಬೇಕಾದ ಸ್ಥಳದಲ್ಲೇ ಇದ್ದಿತ್ತು. ಒಂಬತ್ತನೇ ಸ್ಥಾನವನ್ನು ಗಳಿಸಿದ ತಂಡದ ಆಟಗಾರ ಸಹಾಲ್ ಅಬ್ದುಲ್ ಸಹಮ್ಮದ್ ಇಂಡಿಯನ್ ಸೂಪರ್ ಲೀಗ್‌ನ ಉದಯೋನ್ಮುಖ ಆಟಗಾರರ ಎಂಬ ಗೌರವಕ್ಕೆ ಪಾತ್ರವಾಗಿರುವುದು ನೆಮ್ಮದಿಯ ಸಂಗತಿ.

ಚೆನ್ನೈಯಿನ್ ಎಫ್ ಸಿ-ಹೊಂಡಕ್ಕೆ ಬಿದ್ದ ಚಾಂಪಿಯನ್ನರು

ಹಾಲಿ ಚಾಂಪಿಯನ್ ಆಗಿ ಅಂಗಣಕ್ಕಿಳಿದ ಚೆನ್ನೈಯಿನ್ ತಂಡ ಆರಂಭದಿಂದಲೂ ಸೋಲನುಭವಿಸುತ್ತ ಸಾಗಿತು. ಜಾನ್ ಗ್ರೆಗೋರಿ ಪಡೆಗೆ ಮತ್ತೆ ಚೇತರಿಸಿಕೊಳ್ಳಲಾಗಲಿಲ್ಲ. ಮರಿನಾ ಪಡೆ ಇಡೀ ಲೀಗ್‌ನಲ್ಲಿ ಗೆದ್ದಿರುವುದ ಕೇವಲ ಎರಡು ಪಂದ್ಯ. ಆರು ಪಂದ್ಯಗಳು ಮುಗಿದ ನಂತರ ಮೊದಲ ಜಯ ಗಳಿಸಿತ್ತು. ಮತ್ತೆ ಮೂರು ಪಂದ್ಯ ಬಾಕಿ ಉಳಿದಿರುವಾಗ ಎರಡನೇ ಜಯ ದಾಖಲಿಸಿತು. ಅಷ್ಟರಲ್ಲೇ ತಂಡ ಇರಬೇಕಾದ ಜಾಗ ತಲುಪಿತ್ತು. ಆಕ್ರಮಣಕಾರಿ ಆಟ ಇಲ್ಲದಿರುವುದು, ಆಟದಲ್ಲಿ ಬದ್ಧತೆಯ ಕೊರತೆ ಇರುವುದು ಚೆನ್ನೈಯಿನ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಹೆನ್ರಿಕ್ ಸೆರೆನೋ ನಿರ್ಗಮನ ಹಾಆಗೂ ಧನಪಾಲ್ ಗಣೇಶ್ ಗಾಯಗೊಂಡಿರುವುದು ತಂಡದ ಹಿನ್ನಡೆಗೆ ಮತ್ತೊಂದು ಕಾರಣವಾಯಿತು. ಜೆಜೆ ಲಾಲ್‌ಪೆಖ್ಲುವಾ ಗೋಲು ಗಳಿಸುವಲ್ಲಿ ವಿಲವಾಗಿರುವುದು ಬೇಸರದ ಸಂಗತಿ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

Story first published: Tuesday, March 19, 2019, 21:44 [IST]
Other articles published on Mar 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more