ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ಗೆದ್ದವರಿಗೆ, ಸೋತವರಿಗೆ, ಆಡಿದವರಿಗೆಲ್ಲರೂ ಭರಪೂರ ಹಣ

By Mahesh
How much the winner, runners-up and other teams will win in prize money

ಬೆಂಗಳೂರು, ಜುಲೈ 16: ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ 2018 ಆಯೋಜನೆಯನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ರಷ್ಯಾ ಎಲ್ಲರ ಪ್ರಶಂಸೆಗೆ ಒಳಗಾಗಿದೆ. ಭಾರತದ ಪ್ರಧಾನಿ ಮೋದಿ ಅವರು ಕೂಡಾ ರಷ್ಯಾಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರತಿ ವರ್ಷದಂತೆ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಂತರ ಅನೇಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಹ್ಯಾರಿಕೇನ್ ಚಿನ್ನದ ಬೂಟು, ಲೂಕಾ ಮೊಡ್ರಿಚ್ ಚಿನ್ನದ ಚೆಂಡು ಹಾಗೂ ಕಿಲಿಯಾನ್ ಎಂಬಾಪೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಕೇನ್, ಮೊಡ್ರಿಚ್, ಎಂಬಾಪೆ ಸೇರಿದಂತೆ ವಿಶ್ವಕಪ್ ಪ್ರಶಸ್ತಿ ವಿಜೇತರ ಪಟ್ಟಿ ಕೇನ್, ಮೊಡ್ರಿಚ್, ಎಂಬಾಪೆ ಸೇರಿದಂತೆ ವಿಶ್ವಕಪ್ ಪ್ರಶಸ್ತಿ ವಿಜೇತರ ಪಟ್ಟಿ

ಬೆಲ್ಜಿಯಂಗೆ ಪ್ರಶಸ್ತಿ : ಇಂಗ್ಲೆಂಡ್ ತಂಡವನ್ನು ಸೋಲಿಸಿ ಮೂರನೇ ಸ್ಥಾನಕ್ಕೇರಿದ ಬೆಲ್ಜಿಯಂ ತಂಡಕ್ಕೆ 24 ಮಿಲಿಯನ್ ಡಾಲರ್ (1,643,920,800 ರು) ಲಭಿಸಲಿದೆ. 2014ರ ಫೀಫಾ ವಿಶ್ವಕಪ್ ಗೆ ಹೋಲಿಸಿದರೆ, ಮೂರನೇ ಸ್ಥಾನ ಗಳಿಸುವ ತಂಡಕ್ಕೆ ಸಿಗುವ ಮೊತ್ತವನ್ನು ಈ ಬಾರಿ 4 ಮಿಲಿಯನ್ ಡಾಲರ್ ಹೆಚ್ಚಿಸಲಾಗಿದೆ.

ಒಟ್ಟಾರೆ, 791 ಮಿಲಿಯನ್ ಡಾಲರ್ ಮೊತ್ತವನ್ನು ಪ್ರಶಸ್ತಿಗಾಗಿ ಫೀಫಾ ಮೀಸಲಿಟ್ಟಿತ್ತು. ಇದರಲ್ಲಿ 400 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತಕ್ಕೆ ವಿನಿಯೋಗಿಸಲಾಗಿದೆ.

ಫೀಫಾ ವರ್ಲ್ಡ್‌ ಕಪ್: ಕೆಲವು ಕುತೂಹಲಕಾರಿ ಅಂಕಿ-ಅಂಶಗಳು ಫೀಫಾ ವರ್ಲ್ಡ್‌ ಕಪ್: ಕೆಲವು ಕುತೂಹಲಕಾರಿ ಅಂಕಿ-ಅಂಶಗಳು

ಪ್ರಶಸ್ತಿ ಗೆದ್ದ ಫ್ರಾನ್ಸ್ ಗೆ 38 ಮಿಲಿಯನ್ ಡಾಲರ್ (2,602,874,600 ರು ) ಸಿಕ್ಕಿದೆ. ಫೈನಲ್ ತಲುಪಿ, ರನ್ನರ್ ಅಪ್ ಆದ ಕ್ರೋವೆಷಿಯಾಕ್ಕೆ 28 ಮಿಲಿಯನ್ ಡಾಲರ್ (1,917,907,600 ರು) ಸಿಕ್ಕಿದೆ.

ವಿಶ್ವಕಪ್ ವಿಜೇತರು: ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್ ವಿಶ್ವಕಪ್ ವಿಜೇತರು: ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್

ಒಟ್ಟಾರೆ, ಪ್ರಶಸ್ತಿ ಮೊತ್ತ ವಿಂಗಡಣೆ ಹೀಗಿದೆ:
* 2018ರಲ್ಲಿ ಒಟ್ಟಾರೆ ಪ್ರಶಸ್ತಿ ಮೊತ್ತ : 791 ಮಿಲಿಯನ್ ಡಾಲರ್
* ಫೀಫಾ ವಿಶ್ವಕಪ್ ಟ್ರೋಫಿ ಬೆಲೆ : 20 ಮಿಲಿಯನ್ ಡಾಲರ್
* ವಿಶ್ವಕಪ್ ವಿಜೇತ ತಂಡ: 38 ಮಿಲಿಯನ್ ಡಾಲರ್
* ರನ್ನರ್ ಅಪ್ : 28 ಮಿಲಿಯನ್ ಡಾಲರ್
* ಮೂರನೇ ಸ್ಥಾನ: 24 ಮಿಲಿಯನ್ ಡಾಲರ್
* ನಾಲ್ಕನೇ ಸ್ಥಾನ : 22 ಮಿಲಿಯನ್ ಡಾಲರ್
* ನಾಲ್ಕರಿಂದ -ಎಂಟನೇ ಸ್ಥಾನ: 16 ಮಿಲಿಯನ್ ಡಾಲರ್
* ಕ್ವಾರ್ಟರ್ ಫೈನಲಿಸ್ಟ್ 4 ತಂಡ : 12 ಮಿಲಿಯನ್ ಡಾಲರ್
* 16ರ ಘಟ್ಟದಲ್ಲಿ ನಿರ್ಗಮಿಸಿದ 8 ತಂಡಗಳು : 8 ಮಿಲಿಯನ್ ಡಾಲರ್
* ಎಲ್ಲಾ 32 ತಂಡಗಳಿಗೆ : 1.5 ಮಿಲಿಯನ್ ಡಾಲರ್

Story first published: Monday, July 16, 2018, 15:21 [IST]
Other articles published on Jul 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X