ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನನ್ನ ಹೀರೋ ಇನ್ನಿಲ್ಲ, ನಿಮಗಾಗಿ ಫುಟ್ಬಾಲ್ ನೋಡುತ್ತಿದೆ: ಗಂಗೂಲಿ

I watched football for you: Ganguly condoles Maradonas demise

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನಿಧನಕ್ಕೆ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 1986 ವಿಶ್ವಕಪ್ ವಿಜೇತ ಮರಡೋನಾ ಅವರು ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು (ನ.25) ಹೃದಯ ಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಮರಡೋನಾ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

''ನನ್ನ ಹೀರೋ ಇನ್ನಿಲ್ಲ, ನಾನು ಫುಟ್ಬಾಲ್ ನಿಮಗಾಗಿ ನೋಡುತ್ತಿದ್ದೆ'' ಎಂದು ಬರೆದುಕೊಂಡಿದ್ದಾರೆ.

I watched football for you: Ganguly condoles Maradonas demise

ಡಿಸೆಂಬರ್ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ್ದ ಮರಡೋನಾ ಮತ್ತೊಮ್ಮೆ 2017ರಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ಫ್ಯಾನ್ ಬಾಯ್ ನಂತೆ ಮರಡೋನಾ ಜೊತೆಯಲ್ಲಿ ಓಡಾಡಿದ್ದನ್ನು ಇಂದಿಗೂ ಸ್ಮರಿಸುತ್ತಾರೆ.

ಶ್ರೀಭೂಮಿ ಸ್ಫೋರ್ಟಿಂಗ್ ಕ್ಲಬ್ ಹಮ್ಮಿಕೊಂಡಿದ್ದ ದಾನ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಮರಡೋನಾ ನಾನೊಬ್ಬ ಸಾಮಾನ್ಯ ಆಟಗಾರ, ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಜೊತೆಗೆ ಫುಟ್ಬಾಲ್ ಜನಪ್ರಿಯತೆ ಗಳಿಸುತ್ತಿದೆ. ನಾನು ಹೊಸ ಅಭಿಮಾನಿಗಳನ್ನು ಗಳಿಸುತ್ತಿದ್ದೇನೆ ಎಂದಿದ್ದರು.

I watched football for you: Ganguly condoles Maradonas demise

ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ತಂಡ ಹಾಗೂ ಡಿಯಾಗೋ ಮರಡೋನಾ ತಂಡದ ನಡುವೆ ಮ್ಯಾಚ್ ಆಫ್ ಯೂನಿಟಿ ಹೆಸರಿನಲ್ಲಿ ಪ್ರದರ್ಶನ ಪಂದ್ಯ ನಡೆಸಲಾಯಿತು.

I watched football for you: Ganguly condoles Maradonas demise

ಕೋಲ್ಕತಾದ ರಾಜರ್ಹಾತ್ ನ್ಯೂಟೌನ್ ನಲ್ಲಿರುವ ಹೋಟೆಲ್ ನಲ್ಲಿರುವ ಮರಡೋನಾ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮರಡೋನಾ ಹಾಗೂ ಅವರ ಗೆಳತಿಯನ್ನು ಬೆಂಗಾಲಿ ಸಾಂಪ್ರದಾಯದಂತೆ ಸತ್ಕರಿಸಿ, ಸನ್ಮಾನಿಸಲಾಯಿತು, ಬಿಳಿ ಉತ್ತರೀಯ, ಚಿನ್ನದ ಬ್ರೇಸ್ ಲೆಟ್ ಉಡುಗೊರೆಯಾಗಿ ನೀಡಲಾಗಿತ್ತು.

ಕ್ಯಾನ್ಸರ್ ರೋಗಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಇಲ್ಲಿನ ಪಾರ್ಕೊಂದರಲ್ಲಿ 12 ಅಡಿ ಎತ್ತರದ 1986ರ ವಿಶ್ವಕಪ್ ಎತ್ತಿ ಹಿಡಿದಿರುವ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದರು. ನನ್ನ ಪ್ರತಿಮೆ ನೋಡಿ ಖುಷಿಯಾಗುತ್ತಿದೆ ಎಂದರು.

ಕ್ರಿಕೆಟ್ ಲೋಕ ಕೂಡಾ ಫುಟ್ಬಾಲ್ ದಿಗ್ಗಜನ ಅಂತ್ಯಕ್ಕೆ ಕಂಬನಿ ಮಿಡಿದಿದ್ದು, ಹರ್ಭಜನ್ ಸಿಂಗ್, ಕುಮಾರ ಸಂಗಕ್ಕಾರ ಮುಂತಾದವರು ಟ್ವೀಟ್ ಮಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಟ್ವೀಟ್ ಮಾಡಿ ನಿಮ್ಮ 10ನೇ ನಂಬರ್ ಜರ್ಸಿ ನನ್ನ ಫೇವರಿಟ್ ಆಗಿತ್ತು ಎಂದಿದ್ದಾರೆ.



ಶ್ರೀಲಂಕಾದ ಮಾಜಿ ಕ್ರಿಕೆಟರ್ ಮಹೇಲ ಜಯವರ್ಧನೆ:


ಮಾಜಿ ಕ್ರಿಕೆಟರ್ ಅಂಜುಂ ಛೋಪ್ರಾ:

ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್:


Story first published: Thursday, November 26, 2020, 10:06 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X