ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸ್ಟೀವ್ ಸ್ಮಿತ್ or ವಿರಾಟ್ ಕೊಹ್ಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಮಾರ್ನಸ್ ಲ್ಯಾಬುಶೈನ್ ಆಯ್ಕೆ ಯಾರು?

I will probably go with Steve in Test cricket: Marnus Labuschagne

ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಮಾರ್ನಸ್ ಲ್ಯಾಬುಶೈನ್ ಕ್ರಿಕೆಟ್‌ನಲ್ಲಿ ಸಾಕಷ್ಟು ಮಿಂಚುತ್ತಿದ್ದಾರೆ. ಅದರಲ್ಲೂ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಗೆ ಭವಿಷ್ಯದ ತಾರೆಯಾಗುವ ಎಲ್ಲಾ ಸಾಧ್ಯತೆಯನ್ನೂ ಲ್ಯಾಬುಶೈನ್ ತೆರೆದಿಟ್ಟಿದ್ದಾರೆ. ಕ್ರಿಕೆಟ್‌ನ ಪ್ರಸಕ್ತ ಕಾಲದ ದಿಗ್ಗಜರೆನಿಸಿರುವ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಆಟದ ವಿಚಾರವಾಗಿ ಮಾತನಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ ಶ್ರೇಯಾಂಕದಲ್ಲಿ ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿ ನಂತರದ ಮೂರನೇ ಸ್ಥಾನದಲ್ಲಿ ಬೆನ್ ಸ್ಟೋಕ್ಸ್ ಜೊತೆಗೆ ಸ್ಥಾನ ಹಂಚಿಕೊಂಡಿರುವ ಲ್ಯಾಬುಶೈನ್ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಬದಲು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟೀವ್ ಸ್ಮಿತ್‌ಗೆ ಯಾವುದೇ ಪರಿಸ್ಥಿತಿಯನ್ನು ನೀಡಿದರೂ ಅವರು ದಾರಿಯನ್ನು ಕಂಡುಕೊಳ್ಳುತ್ತಾರೆ. ಆದ ಕಾರಣವೇ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸ್ಟೀವ್ ಸ್ಮಿತ್ ಭಾರತದಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನೀಡಿದ್ದಾರೆ. ಇಂಗ್ಲೆಂಡ್‌ನಲ್ಲೂ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಂತೂ ಸತತವಾಗಿ ಶ್ರೇಷ್ಠ ಇನ್ನಿಂಗ್ಸ್ ಆಡುತ್ತಿದ್ದಾರೆ. ಹಾಗಾಗಿ ಸ್ಟೀವ್ ಸ್ಮಿತ್‌ಗೆ ಎಲ್ಲಿ ಆಡುತ್ತಿದ್ದಾರೆ, ಎಂತಾ ಪರಿಸ್ಥಿತಿ ಎಂಬುದು ಮುಖ್ಯವಲ್ಲ. ವಿರಾಟ್ ಕೊಹ್ಲಿ ಕೂಡ ಇದೇ ರೀತಿಯ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ನಾನು ಸ್ಟೀವ್ ಸ್ಮಿತ್ ಅವರನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

ವಿಂಡೀಸ್ ವಿರುದ್ಧದ ನಿರ್ಣಾಯಕ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಸೇರಿದ ಆರ್ಚರ್ವಿಂಡೀಸ್ ವಿರುದ್ಧದ ನಿರ್ಣಾಯಕ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಸೇರಿದ ಆರ್ಚರ್

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೋಹ್ಲಿ ಪ್ರದರ್ಶನ ಅಸಾಧಾರಣವಾಗಿದೆ. ಅವರು ಇನ್ನಿಂಗ್ಸ್ ಅಂತ್ಯಗೊಳಿಸುವ ರೀತಿ, ಪಂದ್ಯವನ್ನು ಮುಗಿಸುವ ರೀತಿ ಹಾಗೂ ರನ್ ಬೆನ್ನಟ್ಟುವ ರೀತಿ ಅಮೋಘವಾಗಿದೆ. ಅವರಿಂದ ವೈಯಕ್ತಿಕವಾಗಿ ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಮರ್ನಾಸ್ ಲ್ಯಾಬುಶೈನ್ ಹೇಳಿಕೆಯನ್ನು ನೀಡಿದ್ದಾರೆ.

Story first published: Wednesday, July 22, 2020, 16:09 [IST]
Other articles published on Jul 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X