ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೋಪಾ ಅಮೆರಿಕಾ: ಅರ್ಜೆಂಟಿನಾ ತಂಡದ ಲಾಕರ್ ರೂಮ್‌ನಲ್ಲಿ ಟ್ರೋಫಿ ಹಿಡಿದು ಮೆಸ್ಸಿ ಸಂಭ್ರಮ: ವಿಡಿಯೋ

In Argentinas locker room, Messi dances with the Copa America trophy

20 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅರ್ಜೆಂಟಿನಾ ತಂಡ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮಹತ್ವದ ಟ್ರೋಫಿಯನ್ನು ಗೆದ್ದಿದೆ. ಕೋಪಾ ಅಮೆರಿಕಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡದ ವಿರುದ್ಧ 1-0 ಅಂತರದಿಂದ ಗೆದ್ದು ಬೀಗಿದೆ. ಇನ್ನು ಅರ್ಜೆಂಟಿನಾ ತಂಡದ ನಾಯಕ ಮೆಸ್ಸಿಗೂ ಇದು ರಾಷ್ಟ್ರೀಯ ತಂಡದ ಪರವಾಗಿ ಗೆದ್ದ ಮಹತ್ವದ ಟ್ರೋಫಿಯಾಗಿದೆ. ಈವರೆಗೂ ಅರ್ಜೆಂಟಿನಾ ಪರವಾಗಿ ದಿಗ್ಗಜ ಮಹತ್ವದ ಟೂರ್ನಿಯ ಟ್ರೋಫಿಯ ಬರವನ್ನು ಅನುಭವಿಸಿದ್ದರು. ಕಡೆಗೂ ಕೋಪಾ ಅಮೆರಿಕಾ ಕಪ್ ಗೆಲ್ಲುವ ಮೂಲಕ ಅದನ್ನು ನೀಗಿಸಿದ್ದಾರೆ.

ಈ ಗೆಲುವಿನ ಬಳಿಕ ಲಿಯೋನೆಲ್ ಮೆಸ್ಸಿ ಭಾವುಕರಾಗಿ ಆನಂದಭಾಷ್ಪ ಹರಿಸಿದರು. ತಂಡದ ಇತರ ಸದಸ್ಯರೊಂದಿಗೆ ಗೆಲುವಿನ ವಿಜಯದ ಹಾಡು ಹಾಡುತ್ತಾ ಸಂಭ್ರಮಿಸಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆಯೇ ಲಿಯೋನೆಲ್ ಮೆಸ್ಸಿ ಅವರನ್ನು ತಂಡದ ಸದಸ್ಯರು ಮೈದಾನದಲ್ಲಿ ಎತ್ತಿ ಹಿಡಿದು ಮೇಲಕ್ಕೆ ಚಿಮ್ಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೋಪಾ ಅಮೆರಿಕಾ ಫೈನಲ್: ಬ್ರೆಜಿಲ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ

ಇನ್ನು ಈ ಸಂಬ್ರಮ ಸಹಜವಾಗಿಯೇ ಅರ್ಜಂಟಿನಾ ತಂಡದ ಲಾಕರ್ ರೂಮ್‌ನಲ್ಲಿಯೂ ಮುಂದುವರಿದಿತ್ತು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿ ಕೋಪಾ ಅಮೆರಿಕಾ ಟ್ರೋಫಿಯನ್ನು ಹಿಡಿದು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ಜರ್ಸಿಯನ್ನು ಬಿಚ್ಚಿ ಮೆಸ್ಸಿ ಬೃಹತ್ ಟ್ರೋಫಿಯನ್ನು ಅಪ್ಪಿಕೊಂಡು ವಿಜಯಗೀತೆಗೆ ಸಂಭ್ರಮದಿಂದ ಕುಣಿಯುತ್ತಿದ್ದಾರೆ. ಈ ಮೂಲಕ ತಮ್ಮ ಸುದೀರ್ಘ ಕಾಲದ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ.

ಕೋಪಾ ಅಮೆರಿಕಾ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ಬ್ರೆಜಿಲ್ ತಂಡದ ವಿರುದ್ಧ 1-0 ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಅರ್ಜೆಂಟಿನಾ ತಂಡದ ಏಂಜಲ್ ಡಿ ಮರಿಯಾ ಪಂದ್ಯ ಆರಂಭವಾದ 22ನೇ ನಿಮಿಷದಲ್ಲಿ ಈ ಗೆಲುವಿನ ಗೋಲು ಬಾರಿಸಿದ್ದರು.

Story first published: Sunday, July 11, 2021, 11:40 [IST]
Other articles published on Jul 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X