ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಫೀಫಾ ಅಂಡರ್-17 ವನಿತಾ ವಿಶ್ವಕಪ್ 2020'ಕ್ಕೆ ಭಾರತದ ಆತಿಥ್ಯ

India to host FIFA U-17 Women’s World Cup in 2020

ನವದೆಹಲಿ, ಮಾರ್ಚ್ 16: ಫೀಫಾ ಅಂಡರ್-17 ವನಿತಾ ವಿಶ್ವಕಪ್ 2020ರ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಈ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿ ಭಾರತದಲ್ಲೇ ನಡೆಯಲಿದೆ. ಇದನ್ನು ದ ಫೆಡರೇಶನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್ (ಫೀಫಾ) ಶುಕ್ರವಾರ (ಮಾರ್ಚ್ 16) ಖಾತರಿಪಡಿಸಿದೆ.

ವಿಶ್ವಕಪ್‌ಗೆ ಭಾರತದ 4ನೇ ಕ್ರಮಾಂಕದ ಬ್ಯಾಟ್ಸ್ಮನ್ ಆರಿಸಿದ ರಿಕಿ ಪಾಂಟಿಂಗ್!ವಿಶ್ವಕಪ್‌ಗೆ ಭಾರತದ 4ನೇ ಕ್ರಮಾಂಕದ ಬ್ಯಾಟ್ಸ್ಮನ್ ಆರಿಸಿದ ರಿಕಿ ಪಾಂಟಿಂಗ್!

ವಿಶ್ವ ಮಟ್ಟದಲ್ಲಿ ಮಿಂಚಲು, ಹೆಜ್ಜೆ ಗುರುತು ಮೂಡಿಸಲು ಭಾರತದ ವನಿತಾ ಫುಟ್ಬಾಲ್ ತಂಡಕ್ಕೆ ಇದೊಂದು ಅಪೂರ್ವ ಅವಕಾಶವಾಗಲಿದೆ. 2018ರಲ್ಲಿ ಉರುಗ್ವೆಯಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ತಂಡ ಚಾಂಪಿಯನ್ ಆಗಿತ್ತು. ಮೆಕ್ಸಿಕೋ, ನ್ಯೂಜಿಲ್ಯಾಂಡ್ ಮತ್ತು ಕೆನಡಾ ತಂಡಗಳು ಕ್ರಮವಾಗಿ 2ರಿಂದ 4ನೇ ಸ್ಥಾನ ಪಡೆದುಕೊಂಡಿದ್ದವು.

ಪುರುಷರ ವಿಭಾಗದ ಅಂಡರ್ -17 ವಿಶ್ವಕಪ್ ಟೂರ್ನಿಯ ನಿರ್ದೇಶಕರಾಗಿರುವ ಜೇವಿಯರ್ ಸೆಪ್ಪಿ ಅವರು ಟ್ವಿಟರ್ ಮೂಲಕ ಭಾರತವನ್ನು ಅಭಿನಂದಿಸಿದ್ದಾರೆ. 'ಭಾರತಕ್ಕೆ ಮತ್ತು ಮಹಿಳಾ ಫುಟ್ಬಾಲ್ ತಂಡಕ್ಕೆ ಇದು ಅಪೂರ್ವ ಸುದ್ದಿ' ಎಂದವರು ಬರೆದುಕೊಂಡಿದ್ದಾರೆ. 2017ರಲ್ಲಿ ಭಾರತವು ಪುರುಷರ ಅಂಡರ್ 17 ಫೀಫಾ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿತ್ತು.

Story first published: Saturday, March 16, 2019, 13:53 [IST]
Other articles published on Mar 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X