ಲೈಂಗಿಕ ದುರ್ನಡತೆ ಆರೋಪ: ಭಾರತೀಯ U-17 ಮಹಿಳಾ ಫುಟ್ಬಾಲ್ ತಂಡದ ಸಹಾಯಕ ಕೋಚ್ ವಜಾ

ಭಾರತೀಯ ಅಂಡರ್-17 ಮಹಿಳಾ ಫುಟ್ಬಾಲ್ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ನಂತರ ಭಾನುವಾರ ಅವರನ್ನು ವಜಾಗೊಳಿಸಲಾಗಿದೆ. ಈ ನಿರ್ಧಾರವನ್ನು ಡಾ. ಎಸ್‌ವೈ ಖುರೈಷಿ ಅವರು ಟ್ವಿಟ್ಟರ್‌ನಲ್ಲಿ ಭಾನುವಾರ ಪ್ರಕಟಿಸಿದ್ದಾರೆ.

ಡಾ. ಎಸ್‌ವೈ ಖುರೈಶಿ ಅವರು ಸರ್ವೋಚ್ಚ ನ್ಯಾಯಾಲಯದ ಮೇ 18ರ ತೀರ್ಪಿನಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯರಾಗಿದ್ದಾರೆ. ಡಿಸೆಂಬರ್ 2020ರಲ್ಲಿ ಅವರ ಅಧಿಕಾರಾವಧಿಯ ಮುಕ್ತಾಯದ ನಂತರ ಪ್ರಫುಲ್ ಪಟೇಲ್ ನೇತೃತ್ವದ ಕಾರ್ಯಕಾರಿ ಸಮಿತಿಯನ್ನು ವಜಾಗೊಳಿಸಲಾಗಿತ್ತು.

"ಭಾರತೀಯ U-17 ಮಹಿಳಾ ಫುಟ್ಬಾಲ್ ತಂಡದ ಸಹಾಯಕ ಮುಖ್ಯ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ದುರ್ವರ್ತನೆಗಾಗಿ ವಜಾಗೊಳಿಸಲಾಗಿದೆ. ಮುಂದಿನ ಕ್ರಮ ಪ್ರಕ್ರಿಯೆಯಲ್ಲಿದೆ," ಎಂದು ಡಾ. ಎಸ್‌ವೈ ಖುರೈಷಿ ಜುಲೈ 3, 2022ರಂದು ಟ್ವೀಟ್ ಮಾಡಿದ್ದಾರೆ.ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಗುರುವಾರ U-17 ಮಹಿಳಾ ತಂಡವು ದುರ್ವರ್ತನೆ ಆರೋಪದ ನಂತರ ಫುಟ್ಬಾಲ್ ತಂಡದ ಸಹಾಯಕ ಮುಖ್ಯ ಕೋಚ್ ಅವರನ್ನು ಅಮಾನತುಗೊಳಿಸಿದೆ.

ಆರಂಭಿಕ ಕ್ರಮವಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮುಂದಿನ ತನಿಖೆಗಾಗಿ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ತಂಡದೊಂದಿಗಿನ ಎಲ್ಲಾ ಸಂಪರ್ಕಗಳನ್ನು ನಿಲ್ಲಿಸಲು, ತಕ್ಷಣವೇ ಭಾರತಕ್ಕೆ ಹಿಂತಿರುಗಲು ಮತ್ತು ಅವರು ಆಗಮನದ ನಂತರ ಹೆಚ್ಚಿನ ತನಿಖೆಗಾಗಿ ದೈಹಿಕವಾಗಿ ಹಾಜರಾಗಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್, ಅಲೆಕ್ಸ್ ಆಂಬ್ರೋಸ್‌ಗೆ ಸೂಚಿಸಿದೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಹೇಳಿಕೆಯಲ್ಲಿ, "ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ತಂಡದಲ್ಲಿ ದುರ್ನಡತೆಯ ಘಟನೆ ವರದಿಯಾಗಿದೆ. ಎಐಎಫ್‌ಎಫ್ ಅಶಿಸ್ತಿನ ಬಗ್ಗೆ ಶೂನ್ಯ-ಸಹಿಷ್ಣು ನೀತಿಯನ್ನು ಅನುಸರಿಸುತ್ತದೆ," ಎಂದು ಹೇಳಿದೆ.

ಭಾರತ ಮಹಿಳಾ ತಂಡವು ಜೂನ್ 22 ರಿಂದ 26 ರವರೆಗೆ ಇಟಲಿಯಲ್ಲಿ ನಡೆದ 6ನೇ ಟೋರ್ನಿಯೊ ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿತು, ಅಲ್ಲಿ ಅವರು ಇಟಲಿ ಮತ್ತು ಚಿಲಿ ವಿರುದ್ಧ ಸೋತರು.

ಕೆ‌. ಎಲ್ ರಾಹುಲ್ ಗೆ ಅದೃಷ್ಟ ಕೈ ಹಿಡಿಯುತ್ತಾ..? | Oneindia Kannada

ಭಾರತ ಅಂಡರ್-17 ಮಹಿಳಾ ತಂಡವು ಮಹಿಳಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇಟಲಿ ವಿರುದ್ಧ 0-7 ಗೋಲುಗಳಿಂದ ಗ್ರ್ಯಾಂಡಿಸ್ಕೋ ಡಿ'ಲ್ಸೊಂಜೊ ಸೋಲನುಭವಿಸಿತು. ಬಳಿಕ ಚಿಲಿ ವಿರುದ್ಧದ ಪಂದ್ಯದಲ್ಲಿ ಭಾರತದ ವನಿತೆಯರು 1-3 ಅಂತರದಲ್ಲಿ ಸೋಲು ಕಂಡರು.

For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 15:36 [IST]
Other articles published on Jul 5, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X