ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತದ ಮಾಜಿ ಫುಟ್ಬಾಲ್ ಆಟಗಾರ ಸುರಜಿತ್ ಸೇನ್‌ಗುಪ್ತಾ ನಿಧನ

Indian Football Great Surajit Sengupta No more, West Bengal CM Mamata Banerjee Leads Tributes

ಭಾರತ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದ ಸುರಜೀತ್ ಸೇನ್‌ಗುಪ್ತಾ ಗುರುವಾರ ನಿಧನರಾಗಿದ್ದಾರೆ. 1970 ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ರಾಷ್ಟ್ರೀಯ ತಂಡದ ಭಾಗವಾಗಿದ್ದ ಅವರು ಭಾರತದ ಮಾಜಿ ಮಿಡ್‌ಫೀಲ್ಡರ್ ಮತ್ತು ಈಸ್ಟ್ ಬೆಂಗಾಲ್ ತಂಡದ ದಂತಕಥೆಯಾಗಿದ್ದರು. ಕೋವಿಡ್-19 ಜೊತೆಗಿನ ಸುದೀರ್ಘ ಹೋರಾಟದ ನಂತರ ಗುರುವಾರ ಕೋಲ್ಕತ್ತಾದ ನಗರದ ಆಸ್ಪತ್ರೆಯಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಾಜಿ ದಿಗ್ಗಜ ಫುಟ್ಬಾಲ್ ಆಟಗಾರನ ಅಗಲಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. "ಇಂದು ಹಿರಿಯ ಫುಟ್‌ಬಾಲ್ ದಿಗ್ಗಜ ಆಟಗಾರ ಸುರಜಿತ್ ಸೇನ್‌ಗುಪ್ತಾ ಅವರನ್ನು ಕಳೆದುಕೊಂಡಿದ್ದೇವೆ. ಫುಟ್‌ಬಾಲ್ ಅಭಿಮಾನಿಗಳ ಹೃದಯದಲ್ಲೊ ವಿಶೇಷ ಸ್ಥಾನ ಪಡೆದುಕೊಂಡಿರುವ ಸೇನ್‌ಗುಪ್ತಾ ಅವರು ರಾಷ್ಟ್ರಕಂಡ ಅತ್ಯುತ್ತಮ ಕ್ರೀಡಾಪಟು ಮತ್ತು ಪರಿಪೂರ್ಣ ವ್ಯಕ್ತಿತ್ವದ ಕ್ರೀಡಾಪಟುವಾಗಿದ್ದರು. ಅವರು ಎಂದಿಗೂ ನಮ್ಮ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅವರ ಅಗಲಿಕೆಗೆ ತೀವ್ರ ಸಂತಾಪಗಳು" ಎಂದು ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

ಉತ್ತಮ ಆಟವಾಡದಿದ್ದರೆ ಪೂಜಾರ, ರಹಾನೆ ರೀತಿ ತಂಡದಿಂದ ಔಟ್: ಭಾರತದ ಅನುಭವಿಗೆ ಆಯ್ಕೆಗಾರರಿಂದ ಖಡಕ್ ಎಚ್ಚರಿಕೆ!ಉತ್ತಮ ಆಟವಾಡದಿದ್ದರೆ ಪೂಜಾರ, ರಹಾನೆ ರೀತಿ ತಂಡದಿಂದ ಔಟ್: ಭಾರತದ ಅನುಭವಿಗೆ ಆಯ್ಕೆಗಾರರಿಂದ ಖಡಕ್ ಎಚ್ಚರಿಕೆ!

ಕೊರೊನಾವೈರಸ್‌ಗೆ ತುತ್ತಾಗಿದ್ದ ಸೇನ್‌ಗುಪ್ತಾ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದರು. "ಆರಂಭದಲ್ಲಿ ಸ್ಥಿರವಾಗಿದ್ದ ಆರೋಗ್ಯ ಕಳೆದ ಶುಕ್ರವಾರದಿಂದ ಹದಗೆಡಲು ಆರಂಭಿಸಿತ್ತು. ಸುರಜಿತ್ ಸೇನ್‌ಗುಪ್ತಾ ಅವರಿಗೆ ನಂತರ ಉಸಿರಾಟದ ಸಮಸ್ಯೆಗಳು ಕೂಡ ಕಾಣಿಸಿಕೊಂಡಿತ್ತು. ಆಮ್ಲಜನಕದ ಪ್ರಮಾಣ ಕೂಡ ತೀವ್ರವಾಗಿ ಕಡಿಮೆಯಾಗುತ್ತಾ ಸಾಗಿತ್ತು. ಕಳೆದ ಸೋಮವಾರದಿಂದ ಅವರು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು" ಎಂದು ಸೇನ್‌ಗುಪ್ತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಕೊಲ್ಕತ್ತಾದ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.

ಸುರಜಿತ್ ಸೇನ್‌ಗುಪ್ತಾ ಅವರು 1974 ಮತ್ತು 1978 ರಲ್ಲಿ ಏಷ್ಯನ್ ಗೇಮ್ಸ್, 1974 ರಲ್ಲಿ ಮೆರ್ಡೆಕಾ ಕಪ್, 1977 ರಲ್ಲಿ ಪ್ರೆಸಿಡೆಂಟ್ಸ್ ಕಪ್ ಮತ್ತು ಯುಎಇ ಮತ್ತು ಬಹ್ರೇನ್ (1979) ವಿರುದ್ಧದ ಅಂತರಾಷ್ಟ್ರೀಯ ಸೌಹಾರ್ದ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು.

Story first published: Friday, February 18, 2022, 9:42 [IST]
Other articles published on Feb 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X