ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏಷ್ಯಾನ್ ಬಂಗಾರ ಗೆದ್ದಿದ್ದ ಫುಟ್ಬಾಲ್ ದಂತಕತೆ ಪಿಕೆ ಬ್ಯಾನರ್ಜೀ ನಿಧನ

Indian football legend PK Banerjee dies aged 83

ನವದೆಹಲಿ, ಮಾರ್ಚ್ 20: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಫುಟ್ಬಾಲ್ ದಂತಕತೆ ಪಿಕೆ ಬ್ಯಾನರ್ಜೀ ಅವರು ಶುಕ್ರವಾರ (ಮಾರ್ಚ್ 20) ಸಾವನ್ನಪ್ಪಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಬ್ಯಾನರ್ಜೀ ತನ್ನ ಪುತ್ರಿಯರಾದ ಪೌಲಾ ಮತ್ತು ಪೂರ್ಣ, ಕಿರಿಯ ಸಹೋದರ ಪ್ರಸನ್ ಬ್ಯಾನರ್ಜೀ ಅವರನ್ನು ಅಗಲಿದ್ದಾರೆ.

ಕೊರೊನಾ: ಹೊಸ ಉತ್ಪಾದನೆ ಆರಂಭಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ಕೊರೊನಾ: ಹೊಸ ಉತ್ಪಾದನೆ ಆರಂಭಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್

1962ರ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ಪಿಕೆ ಬ್ಯಾನರ್ಜೀ, ಭಾರತದ ಫುಟ್ಬಾಲ್‌ ರಂಗದ ಬಂಗಾರದ ಯುಗ ಎನಿಸಿದ್ದ ಕಾಲದಲ್ಲಿ ಸ್ಟ್ರೈಕರ್ ಆಗಿ ತಂಡಕ್ಕೆ ಬಲು ತುಂಬಿದ್ದರು. ನ್ಯುಮೋನಿಯಾದಿಂದಾಗಿ ಬ್ಯಾನರ್ಜೀಗೆ ಉಸಿರಾಟದ ತೊಂದರೆಯಿತ್ತು.

ಬ್ಯಾನರ್ಜೀ ಅವರಿಗೆ ಪಾರ್ಕಿನ್ಸನ್ ಕಾಯಿಲೆ, ಬುದ್ಧಿಮಾಂದ್ಯತೆ ಮತ್ತು ಹೃದಯ ಸಮಸ್ಯೆಗಳೂ ಇದ್ದವು. ಮಾರ್ಚ್ 2ರಿಂದಲೂ ವೈದ್ಯಕೀಯ ಬೆಂಬಲದಿಂದ ಉಸಿರಾಡುತ್ತಿದ್ದ ಬ್ಯಾನರ್ಜೀ, ಶುಕ್ರವಾರ 12:40 pm ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!

23 ಜೂನ್ 1936ರಲ್ಲಿ ವೆಸ್ಟ್ ಬೆಂಗಾಲ್‌ನ ಮೇನಗುರಿಯಲ್ಲಿ ಜನಿಸಿದ ಪಿಕೆ ಬ್ಯಾನರ್ಜೀ, ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ಪರ ಒಟ್ಟು 84 ಪಂದ್ಯಗಳಲ್ಲಿ 65 ಗೋಲ್‌ಗಳ ದಾಖಲೆ ಹೊಂದಿದ್ದಾರೆ.

Story first published: Friday, March 20, 2020, 15:38 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X