ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಡಿಯನ್ ಸೂಪರ್ ಲೀಗ್: ಯುವ ಪರಂಪರೆಯಲ್ಲೇ ಬೆಳೆದುನಿಂತ ಎಟಿಕೆ

By Isl Media
Indian Super League: ATK building a legacy with focus on youth

ಕೋಲ್ಕತ್ತ, ಅಕ್ಟೋಬರ್ 17: ಈ ಋತುವಿನಲ್ಲಿ ಎಲ್ಲರ ದೃಷ್ಟಿ ಎಟಿಕೆ ತಂಡದ ಮೇಲಿರುತ್ತದೆ. ಖ್ಯಾತ ಆಟಗಾರರು ಮತ್ತು ಪಂದ್ಯಕ್ಕೆ ತಿರುವು ನೀಡಬಲ್ಲ ಪ್ರತಿಭಾವಂತ ಆಟಗಾರರಿಂದ ಕೂಡಿರುವ ಕ್ಲಬ್, ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸಾಕಷ್ಟು ಆಕರ್ಷಣೆಯ ತಂಡವಾಗಿದೆ. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ತಂಡ ಈಬಾರಿ ಮೂರನೇ ಪ್ರಶಸ್ತಿ ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡಲು ಸಜ್ಜಾಗಿದೆ. ಆದರೆ ಯುವ ಆಟಗಾರರ ಅಭಿವೃದ್ಧಿಯ ಬಗ್ಗೆ ಕ್ಲಬ್ ಕೈಗೊಂಡಿರುವ ಯೋಜನೆ ತಂಡಕ್ಕೆ ಮತ್ತಷ್ಟು ಖುಷಿ ನೀಡುವಂತ ಸಂಗತಿಯಾಗಿದೆ.

ಜಗತ್ತಿನ ಅಚ್ಚುಮೆಚ್ಚಿನ ಫುಟ್ಬಾಲ್ ತಂಡಗಳಲ್ಲಿ ಕೇರಳ ಬ್ಲಾಸ್ಟರ್ಸ್‌ಗೆ ಅಗ್ರ ಸ್ಥಾನ!ಜಗತ್ತಿನ ಅಚ್ಚುಮೆಚ್ಚಿನ ಫುಟ್ಬಾಲ್ ತಂಡಗಳಲ್ಲಿ ಕೇರಳ ಬ್ಲಾಸ್ಟರ್ಸ್‌ಗೆ ಅಗ್ರ ಸ್ಥಾನ!

ಈ ಖಂಡದಲ್ಲಿ ಅತ್ಯಂತ ಹಳೆಯ ಸ್ಪರ್ಧೆಯೆನಿಸಿರುವ ಕಲ್ಕತ್ತ ಫುಟ್ಬಾಲ್ ಲೀಗ್ ಹಾಗೂ ವೆಸ್ಟ್ ಬೆಂಗಾಲ್ ದ ವೃತ್ತಿಪರ ಲೀಗ್ ನ ಕಳೆದ ಋತುವಿನಲ್ಲಿ ಎಟಿಕೆ ಯುವ ತಂಡವೊಂದನ್ನು ಸ್ಪರ್ಧೆಗೆ ಇಳಿಸಿತ್ತು. ಯಶಸ್ಸಿಗೆ ಯಾವುದೇ ಒಳ ಮಾರ್ಗ ಇರುವುದಿಲ್ಲ, ಎಟಿಕೆ ಇಂಥ ಸ್ಪರ್ಧೆಗಳಲ್ಲಿ ಯುವ ಆಟಗಾರರಿಗೆ ಉತ್ತೇಜನ ನೀಡಲು ಬದ್ಧವಾಗಿರುತ್ತದೆ. ಕಲ್ಕತ್ತ ಪ್ರೀಮಿಯರ್ ಲೀಗ್ ನಲ್ಲಿ ನಾಲ್ಕನೇ ಹಂತದಲ್ಲಿ ಆರಂಭ ಕಂಡ ಎಟಿಕೆ ಯುವ ತಂಡ ತನ್ನ ನೈಜ ಸಾಮರ್ಥ್ಯದಿಂದ ಪ್ರೀಮಿಯರ್ ಡಿವಿಜನ್ 'ಎ'ನಲ್ಲಿ ಸ್ಥಾನ ಪಡೆಯಿತು.

ಎಟಿಕೆ ಯುವ ತಂಡ ಕಲ್ಕತ್ತ ಎರಡನೇ ಡಿವಿಜನ್ ನಲ್ಲಿ ಅಜೇಯವಾಗಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಈಗ ಒಂದನೇ ಡಿವಿಜನ್ ನ ಚಾಂಪಿಯನ್ ಪಟ್ಟ ಗೆಲ್ಲಲು ಹೋರಾಟ ನಡೆಸಿದೆ. ಆ ತಂಡ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದರೆ ಸದ್ಯದಲ್ಲೇ ಅವರು ಈ ವಲಯದ ಹಿರಿಯರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರಾಥಾಮಿಕ ಹಂತದಲ್ಲಿ ಎಟಿಕೆ ಲೀಗ್ ನಲ್ಲಿಯೇ ಅತಿ ಹೆಚ್ಚು ಎನಿಸಿರುವ 26 ಗೋಲುಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತ್ತು. 11 ಪಂದ್ಯಗಳಲ್ಲಿ ಕೇವಲ ಆರು ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿ, ಒಂಬತ್ತು ಪಂದ್ಯಗಳನ್ನು ಗೆದ್ದಿತ್ತು.

ಬದ್ಧತೆ ಹಾಗೂ ಕಠಿಣ ಪರಿಶ್ರಮಕ್ಕೆ ಯಾವಾಗಲೂ ಯಶಸ್ಸು ಇದ್ದೇ ಇರುತ್ತದೆ, ಎಟಿಕೆ ಯುವ ತಂಡದ ಎಲ್ಲವೂ ಸರಿಯಾಗಿದ್ದರೆ, ಅದು ಸಹಜವಾಗಿ ಮೇಲಕ್ಕೇರಿ, ಅಗ್ರ ಡಿವಿಜನ್ ತಲುಪಿ ಅಲ್ಲಿ ಬಲಷ್ಠ ತಂಡಗಳಾದ ಮೋಹನ್ ಬಾಗನ್, ಈಸ್ಟ್ ಬೆಂಗಾಲ್ ಮತ್ತು ಮೊಹಮ್ಮದನ್ ಸ್ಪೋರ್ಟಿಂಗ್ ವಿರುದ್ಧ ಆಡಲಿದೆ.

ಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿ

ಕೋಲ್ಕೊತಾ ಹಾಗೂ ಕಲ್ಕತ್ತಾ ಲೀಗ್ ನಲ್ಲಿ ಫುಟ್ಬಾಲ್ ನ ಅತಿ ದೊಡ್ಡ ಇತಿಹಾಸವೇ ಇದೆ. ಉದಾಹರಣೆಗೆ ಈಸ್ಟ್ ಬೆಂಗಾಲ್ 39 ಬಾರಿ ಸಿ ಎಫ್ ಎಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಇತ್ತೀಚಿಗೆ ಈ ಕ್ಲಬ್ ತನ್ನ ಶತಮಾನೋತ್ಸವವನ್ನು ಆಚರಿಸಿತ್ತು. ಅವರ ಬದ್ಧ ಎದುರಾಳಿ ತಂಡ ಮೋಹನ್ ಬಾಗನ್ 30 ಬಾರಿ ಮತ್ತು ಮೊಹಮ್ಮದನ್ ಸ್ಪೋರ್ಟಿಂಗ್ 11 ಬಾರಿ ಸ್ಮರಣೀಯ ಟ್ರೋಫಿ ಗೆದ್ದಿದೆ.

''ಎರಡು ಋತುಗಳ ಅವಧಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಆಡುವುದು ನಮ್ಮ ಗುರಿ, ಮುಂದಿನ ಋತುವಿನಲ್ಲಿ ನಾವು ಹ್ಯಾಟ್ರಿಕ್ ಭಡ್ತಿ ಪಡೆಯುವ ಗುರಿ ಹೊಂದಿದ್ದೇವೆ,'' ಎಂದು ತಂಡದ ಕಾಯ್ದಿರಿಸಿದ ಕೋಚ್ ಡೇಗ್ಗಿ ಕಾರ್ಡೋಝೋ ಹೇಳಿದ್ದಾರೆ.

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಫೈನಲ್ ಕನಸು ಕಸಿದುಕೊಂಡ ದಬಾಂಗ್ ಡೆಲ್ಲಿಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಫೈನಲ್ ಕನಸು ಕಸಿದುಕೊಂಡ ದಬಾಂಗ್ ಡೆಲ್ಲಿ

ಮನೆಯಂಗಣದ ಕ್ಲಬ್ ಎಫ್ ಸಿ ಗೋವಾದಿಂದ ಇದೇ ರೀತಿಯ ಕೊಡುಗೆ ಬಂದಿದ್ದರೂ ಅದನ್ನು ತಿರಸ್ಕರಿಸಿ ಸವಾಲನ್ನು ಸ್ವೀಕರಿಸಲು ಕೋಲ್ಕೊತಾಕ್ಕೆ ಬಂದರು. ''ನಾನು ನನಗೆ ಅನುಕೂಲ ಎನಿಸಿರುವ ವಾತಾವರಣವನ್ನು ತೊರೆದು, ಅದಕ್ಕಿಂತಲೂ ತೃಪಿ ಕೊಡುವಲ್ಲಿಗೆ ಬಂದಿರುವೆ. ಹಿರಿಯರ ತಂಡ ಸೇರಿಕೊಳ್ಳಲು ಯುವ ಆಟಗಾರರಿಗೆ ಅಗತ್ಯ ಇರುವ ಹಾದಿಯನ್ನು ಕಲ್ಪಿಸುವುದು ನನ್ನ ಉದ್ದೇಶ. ಈ ಋತುವಿನಲ್ಲಿ ಕೋಚ್ ಅಂಟೋನಿಯೋ ಲೋಪೆಜ್ ಹಬಾಸ್ ಕಾಯ್ದಿರಿಸಿದ ತಂಡದ ಮೂವರು ಆಟಗಾರರನ್ನು ಮೊದಲ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸುಮಿತ್ ರಾಥಿ, ಅನಿಲ್ ಚವಾಣ್ ಮತ್ತು ಲಾರಾ ಅವರು ಆಯ್ಕೆ ಆಗಿರುವುದು ಖುಷಿಕೊಟ್ಟಿದೆ. ಎಟಿಕೆ ಯಶಸ್ಸಿನಲ್ಲಿ ಅವರು ಯಾವ ರೀತಿಯಲ್ಲಿ ಕೊಡುಗೆ ನೀಡುವರು ಎಂಬ ನಿರೀಕ್ಷೆಯಲ್ಲಿದ್ದೇನೆ,''ಎಂದರು.

ಐದು ವರ್ಷಗಳ ಅನುಭವ ಹೊಂದಿರುವ ಎಟಿಕೆ ತನ್ನ ಪ್ರಯಾಣವನ್ನು ಸರಿಯಾದ ಟ್ರ್ಯಾಕ್ ನಲ್ಲಿ ಆರಂಭಿಸಿದೆ. ಫುಟ್ಬಾಲ್ ಆಟವನ್ನೇ ನೆಚ್ಚಿಕೊಂಡಿರುವ ಈ ವಲಯದಲ್ಲಿ ಕ್ಲಬ್ ಆಟದ ಬಗ್ಗೆ ಹೊಂದಿರುವ ಸ್ಪಂದನೆ ಹಾಗೂ ಬದ್ಧತೆಗೆ ನಿಜವಾಗಿಯೂ ಪ್ರತಿಫಲ ಪಡೆಯಲಿದೆ.

Story first published: Thursday, October 17, 2019, 19:11 [IST]
Other articles published on Oct 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X