ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಸಿಂಗಲ್‌ ಗೋಲ್‌ನಿಂದ ಎಟಿಕೆ ಮಣಿಸಿದ ಬೆಂಗಳೂರು

By Isl Media
ISL 2018-19: Bengaluru a goal too good for ATK

ಬೆಂಗಳೂರು, ಡಿಸೆಂಬರ್ 13: ಎರಿಕ್ ಪಾರ್ತಲು (37ನೇ ನಿಮಿಷ) ಗಳಿಸಿದ ಏಕೈಕ ಗೋಲಿನ ನೆರವಿನಿಂದ ಎಟಿಕೆ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಎಟಿಕೆ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶ ಒದಗಿತ್ತು. ಆದರೆ ಕೋಲ್ಕತಾದ ತಂಡಕ್ಕೆ ಗೆಲ್ಲುವ ಅದೃಷ್ಟ ಇಲ್ಲದಿರುವುದು ಸ್ಪಷ್ಟವಾಗಿತ್ತು.

ಹಾಕಿ ವಿಶ್ವಕಪ್ 2018: ಪ್ರಶಸ್ತಿ ಕನಸು ಭಗ್ನ, ಡಚ್ಚರ ಎದುರು ಸೋತ ಭಾರತ!ಹಾಕಿ ವಿಶ್ವಕಪ್ 2018: ಪ್ರಶಸ್ತಿ ಕನಸು ಭಗ್ನ, ಡಚ್ಚರ ಎದುರು ಸೋತ ಭಾರತ!

37ನೇ ನಿಮಿಷದಲ್ಲಿ ಎರಿಕ್ ಪಾರ್ತಲು ಗಳಿಸಿದ ಗೋಲಿನಿಂದ ಬೆಂಗಳೂರು ತಂಡ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಎರಿಕ್ ಪಾರ್ತಲು ಹೆಡರ್ ಮೂಲಕ ಗಳಿಸಿದ ಈ ಗೋಲು ಎಟಿಕೆ ತಂಡವನ್ನು ಸೋಲಿಸಲು ಹಾಕಿದ ತಳಪಾಯದಂತಿತ್ತು. ರಾಹುಲ್ ಭಿಕೆ ಎಡಭಾಗದಲ್ಲಿ ಚೆಂಡನ್ನು ಕೇನ್ ಲೂಯಿಸ್‌ಗೆ ನೀಡಿದರು. ಲೂಯಿಸ್ ಅತ್ಯಂತ ಉತ್ತಮವಾಗಿ ಚೆಂಡನ್ನು ಗೋಲ್ ಬಾಕ್ಸ್ ಕಡೆಗೆ ತಳ್ಳಿದರು. ಮೇಲಿಂದ ಸಾಗಿ ಬಂದ ಚೆಂಡಿಗೆ ಪಾರ್ತಲು ನಿಂತಲ್ಲೇ ಚಿಮ್ಮುವ ಮೂಲಕ ತಲೆಯನ್ನೊಡ್ಡಿದರು. ಅರಿಂದಂ ಭಟ್ಟಾಚಾರ್ಯ ಅವರಿಗೆ ಚೆಂಡನ್ನು ತಡೆಯಲು ಅವಕಾಶವೇ ಇರಲಿಲ್ಲ. ಇದರೊಂದಿಗೆ ಪ್ರಥಮಾರ್ಧದಲ್ಲಿ ಬೆಂಗಳೂರು 1-0 ಅಂತರದಲ್ಲಿ ಮೇಲುಗೈ ಸಾಧಿಸಿತು.

ಹೀರೋ ಇಂಡಿಯನ್ ಸೂಪರ್ ಲೀಗ್‌ನ 56ನೇ ಪಂದ್ಯದಲ್ಲಿ ಬೆಂಗಳೂರು ಹಾಗೂ ಎಟಿಕೆ ತಂಡಗಳು ಮುಖಾಮುಖಿಯಾದವು. ಚಳಿಗಾಲದ ಬಿಡುವಿಗೆ ಮುನ್ನ ಇತ್ತಂಡಗಳ ನಡುವಿನ ಕೊನೆಯ ಪಂದ್ಯ ಇದಾಗಿತ್ತು. ಆದ್ದರಿಂದ ಉತ್ತಮ ಲಿತಾಂಶ ಕಾಣಬೇಕೆಂಬ ಹಂಬಲದೊಂದಿಗೆ ಇತ್ತಂಡಗಲು ಅಂಗಣಕ್ಕಿಳಿದವು.

ಮೂರು ಅಂಕಗಳನು ಗಳಿಸಿದರೆ ಎಟಿಕೆ ತಂಡ ನಾಲ್ಕನೇ ಸ್ಥಾನದಲ್ಲಿರುವ ಜೆಮ್ಷೆಡ್ಪುರಕ್ಕೆ ಕೊಕ್ ನೀಡಲಿದೆ. ಬೆಂಗಳೂರು ಬಲಿಷ್ಠ ತಂಡವಾಗಿದ್ದ ಕಾರಣ ಎಟಿಕೆಯ ಗುರಿ ತಲಪುವುದ ಅಷ್ಟು ಸುಲಭವಾಗಿಲ್ಲ. ಬೆಂಗಳೂರು ಜಯ ಗಳಿಸಿದರೆ ಅಗ್ರ ತಂಡವಾಗಿ ಮುಂದುವರಿಯಲಿದೆ. ಇದುವರೆಗೂ ಇತ್ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಬ್ಲೂ ಪಡೆ ಮೂರಲ್ಲೂ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ.

ಋತುವಿನ ಆರಂಭದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ, ಕೋಮಲ್ ತತಾಲ್ ಎಟಿಕೆ ಪರ ಆರಂಭದಲ್ಲೇ ಗೋಲು ಗಳಿಸಿ ಅಚ್ಚರಿ ಮೂಡಿಸಿದ್ದರು. ಆದರೆ ಎರಿಕ್ ಪಾರ್ತಲು ಹಾಗೂ ಮಿಕು ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಎಟಿಕೆ ತಂಡ ಸೇರಿದ ನಂತರ ಬೆಂಗಳೂರಿನ ಮಾಜಿ ಆಟಗಾರ ಜಾನ್ ಜಾನ್ಸನ್ ಮೊದಲ ಬಾರಿಗೆ ಕಂಠೀರವ ಕ್ರೀಡಾಂಗಣದಲ್ಲಿ ಆಡಲು ಸಜ್ಜಾದರು. ಎಟಿಕೆ ತಂಡ ಇತ್ತೀಚಿಗೆ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಕ್ಲೀನ್ ಶೀಟ್ ಸಾಧನೆ ಮಾಡಿದೆ.

ಪ್ರೊ ಕಬಡ್ಡಿ 2018: ತೆಲುಗು ಟೈಟಾನ್ಸ್ ಗುದ್ದಿ ಕೆಡವಿದ ಬೆಂಗಳೂರು ಬುಲ್ಸ್!ಪ್ರೊ ಕಬಡ್ಡಿ 2018: ತೆಲುಗು ಟೈಟಾನ್ಸ್ ಗುದ್ದಿ ಕೆಡವಿದ ಬೆಂಗಳೂರು ಬುಲ್ಸ್!

ಹರ್ಮನ್ ಜೋತ್ ಕಬ್ರಾ ಅವರು ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಮಿಡ್‌ಫೀಲ್ಡ್ ವಿಭಾಗದಲ್ಲಿ ಎರಿಕ್ ಪಾರ್ತಲು ಅವರನ್ನು ಅಂಗಣಕ್ಕಿಳಿಸಲಾಯಿತು. ಗುವಾಹಟಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ನಡೆದ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾ ಸಾದಿಸಿದ ಎಟಿಕೆ ಬೆಂಗಳೂರಿಗೆ ಆಗಮಿಸಿದೆ. ಇತ್ತೀಚಿನ ನಾಲ್ಕು ಪಂದ್ಯಗಳಲ್ಲಿ ಎಟಿಕೆ ಮೂರು ಪಂದ್ಯಗಳಲ್ಲಿ ಗೋಲಿಲ್ಲದೆ ಡ್ರಾ ಕಂಡಿತ್ತು. ಗೋಲ್ ಕಡೆಗೆ ಗುರಿ ಇಟ್ಟಿರುವ ತಂಡಗಳಲ್ಲಿ ಎಟಿಕೆ ಎರಡನೇ ಸ್ಥಾನದಲ್ಲಿದೆ. ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ಎಟಿಕೆಗೆ ಪಂದ್ಯದ ಮೇಲೆ ಯಶಸ್ಸು ಕಾಣುವುದು ಕಷ್ಟ ಸಾಧ್ಯ.

Story first published: Thursday, December 13, 2018, 21:50 [IST]
Other articles published on Dec 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X