ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018-19: ಕೊನೆಯಲ್ಲಿರುವವರ ಗತಿ ಮುಂದೇನು?

By Isl Media
ISL 2018-19: Whats next in the end?

ಮುಂಬೈ, ಜನವರಿ 29: ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರಸ್ಥಾನದ ಹೋರಾಟ ದಿನದಿಂದ ದಿನಕ್ಕೆ ಹೊಸ ತಿರುವನ್ನು ಕಾಣುತ್ತಿದೆ. ಭಾನುವಾರ ಬೆಂಗಳೂರು ಎಫ್ ಸಿ ತಂಡ ಮುಂಬೈ ಸಿಟಿ ವಿರುದ್ಧ ಸೋಲನುಭವಿಸುವ ಮೂಲಕ ಆರು ತಂಡಗಳಿಗೆ ಅಂತಿಮ ನಾಲ್ಕರ ಹಂತ ತಲುಪಲು ಹೋರಾಟ ನಡೆಸುವ ಅವಕಾಶ ಸಿಕ್ಕಂತಾಯಿತು.

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!

ಬೆಂಗಳೂರು, ನಾರ್ತ್ಈಸ್ಟ್, ಗೋವಾ , ಜೆಮ್ಷೆಡ್ಪುರ, ಹಾಗೂ ಎಟಿಕೆ ತಂಡಗಳು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿವೆ. ಹಾಗಾದರೆ ಉಳಿದ ತಂಡಗಳ ಪಾಡೇನು? ಉಳಿದಿರುವ ಪಂದ್ಯಗಳ ಮೂಲಕ ಕೆಳ ಕ್ರಮಾಂಕದ ತಂಡಗಳ ಸ್ಥಾನವೇನು?, ಅವರ ಹೋರಾಟ ಇಲ್ಲಿಗೇ ನಿಂತಿತೇ,? ಅಥವಾ ಗೌರವಕ್ಕಾಗಿ ಹೋರಾಡಲಿವೆಯೇ?

ಪುಣೆ, ಕೇರಳ, ಡೆಲ್ಲಿ ಹಾಗೂ ಹಾಲಿ ಚಾಂಪಿಯನ್ ಪುಣೆ ಚೆನ್ನೈಯಿನ್ ಎಫ್ ಸಿ ತಂಡಗಳು ಆಭದಿಂದಲೂ ಲಯ ಕಂಡಿಕೊಳ್ಳುವಲ್ಲಿ ವಿಫಲವಾಗಿವೆ. ಆದರೆ ಅಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿವೆ.

ಖಡ್ಕ ಬ್ಯಾಟಿಂಗ್ ಬಲ, ಯುಎಇ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ನೇಪಾಳ!ಖಡ್ಕ ಬ್ಯಾಟಿಂಗ್ ಬಲ, ಯುಎಇ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ನೇಪಾಳ!

"ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಲು ವಿಫಲವಾದಾಗ ತಂಡದ ಪ್ರಧಾನ ಕೋಚ್ ಆದ ನಾನು ಜವಾಬ್ದಾರಿ ಹೊರಬೇಕಾಗುತ್ತದೆ. ಇದೊಂದು ಅವಕಾಶ ವಂಚಿತರ ವೇದನೆ. ನಾವು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿಲ್ಲ. ಈ ಋತುವಿನ ಫಲಿತಾಂಶದ ಜವಾಬ್ದಾರಿಯನ್ನು ನಾನೇ ಹೊರಬೇಕು. " ಎಂದು ಚೆನ್ನೈಯಿನ್ ಎಫ್ ಸಿ ತಂಡದ ಕೋಚ್ ಜಾನ್ ಗ್ರಗೋರಿ ಹೇಳಿದ್ದಾರೆ.

ಚೆನ್ನೈಯಿನ್ ಈ ಬಾರಿ ವಿಭಿನ್ನ

ಚೆನ್ನೈಯಿನ್ ಈ ಬಾರಿ ವಿಭಿನ್ನ

ಕಳೆದ ವರ್ಷ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಸೋಲಿಸಿದ್ದ ಚೆನ್ನೈಯಿನ್ ಈ ಬಾರಿ ವಿಭಿನ್ನ ತಂಡವಾಗಿ ಕಂಡುಬಂತು. ಮೊದಲ ಪಂದ್ಯದಲ್ಲೇ ಸೋಲನುಭವಿಸುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವೈಫಲ್ಯದ ಹೆಜ್ಜೆ ಇಟ್ಟಿತು. ಮೊದಲ ಜಯ ಕಾಣಲು ಆರು ಪಂದ್ಯಗಳನ್ನಾಡಿದ ತಂಡ ಈಗ ಆರು ಪಂದ್ಯಗಳಲ್ಲೂ ಯಶಸ್ಸು ಕಾಣಲಿಲ್ಲ. ಇದರೊಂದಿಗೆ ಎಎಫ್ ಸಿ ಕಪ್ ಗಾಗಿ ಜಾನ್ ಗ್ರೆಗೊರಿ ನಿರಾಸೆಯೊಂದಿಗೆ ಹೆಜ್ಜೆ ಇಡಬೇಕಾಗಿದೆ.

ಒಂದು ಪಂದ್ಯದಲ್ಲಿ ಮಾತ್ರ ಜಯ

ಒಂದು ಪಂದ್ಯದಲ್ಲಿ ಮಾತ್ರ ಜಯ

ಕೇರಳ ಬ್ಲಾಸ್ಟರ್ಸ್ ಹಾಗೂ ಡೆಲ್ಲಿ ಡೈನಮೋಸ್ ಈ ಋತುವಿನಲ್ಲಿ ಇದುವರೆಗೂ ಒಂದು ಪಂದ್ಯದಲ್ಲಿ ಮಾತ್ರ ಜಯ ಗಳಿಸಿವೆ. ಪುಣೆ ಮೂರು ಪಂದ್ಯಗಳಲ್ಲಿ ಗೆದ್ದಿದೆ. ಈ ನಾಲ್ಕು ತಂಡಗಳಲ್ಲಿ ಪುಣೆ 11 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ಇದರಿಂದಾಗಿ ಈ ತಂಡಗಳು ಪ್ಲೇ ಆಫ್ ನಿಂದ ದೂರ ಉಳಿಯುವಂತಾಗಿದೆ. ಎಫ್ ಸಿ ಗೋವಾ 11 ಪಂದ್ಯಗಳಲ್ಲಿ 20 ಅಂಕ ಗಳಿಸಿ ಕೊನೆಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಅವಕಾಶ ಇದೆ

ಅವಕಾಶ ಇದೆ

ಈ ನಾಲ್ಕೂ ತಂಡಗಳ ಪ್ಲೇ ಆಫ್ ಅವಕಾಶ ದೂರವಾದರೂ ಗೌರವ ಕಾಯ್ದುಕೊಳ್ಳುವ ಅವಕಾಶ ಇದೆ. ಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪದಿರಲು ಈ ತಂಡಗಳು ಈಗ ಹೋರಾಟ ನಡೆಸಲಿವೆ. ಉಳಿದಿರುವ ಪಂದ್ಯಗಳಲ್ಲಿ ಯಶಸ್ಸು ಕಾಣಲು ತಂಡಗಳು ಹೋರಾಡಲಿವೆ.

ಉತ್ತಮವಾಗಿ ಆಡಿದ್ದೆವು

ಉತ್ತಮವಾಗಿ ಆಡಿದ್ದೆವು

"ಆರಂಭದಲ್ಲಿ ಕೆಲವು ಪಂದ್ಯಗಳನ್ನು ಗೆಲ್ಲುವ ಅವಕಾಶ ನಮಗಿದ್ದಿತು. ಫುಟ್ಬಾಲ್ ದೃಷ್ಟಿಯಲ್ಲಿ ಯೋಚಿಸಿದರೆ ನಾವು ಉತ್ತಮವಾಗಿ ಆಡಿದ್ದೆವು. " ಎಂದು ಡೆಲ್ಲಿ ಡೈನಮೋಸ್ ತಂಡದ ಕೋಚ್ ಜೊಸೆಫ್ ಗೊಂಬವ್ ಹೇಳಿದ್ದಾರೆ. ಈ ತಂಡ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿದ್ದರೂ, ಉತ್ತಮ ಆಟ ಪ್ರದರ್ಶಿಸಿತ್ತು.

Story first published: Tuesday, January 29, 2019, 19:33 [IST]
Other articles published on Jan 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X