ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಚೆನ್ನೈಯಿನ್ ಎಫ್‌ಸಿಗೆ ಸೋಲಿನ ಆಘಾತ ನೀಡಿದ ಎಟಿಕೆ

By Isl Media
ISL 2018: ATK leave Chennaiyin on the brink

ಚೆನ್ನೈ, ಡಿಸೆಂಬರ್ 3: ಮಾನ್ವೆಲ್ ಲಾನ್ಜೆರೋಟ್ ಪೆನಾಲ್ಟಿ ಶೂಟ್ ಮೂಲಕ (44 ಹಾಗೂ 80ನೇ ನಿಮಿಷ ) ಹಾಗೂ 14ನೇ ನಿಮಿಷದಲ್ಲಿ ಜಯೇಶ್ ರಾಣೆ ಗಳಿಸಿದ ಗೋಲಿನಿಂದ ಎಟಿಕೆ ತಂಡ ಚೆನ್ನೈಯಿನ್ ಎಫ್ಸಿ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ತಂಡದ ಪ್ಲೇ ಆಫ್ ಹಂತದ ಹಾದಿ ಮತ್ತಷ್ಟು ಕಠಿಣವಾಯಿತು. ಚೆನ್ನೈ ತಂಡದ ಪರ 24ನೇ ನಿಮಿಷದಲ್ಲಿ ತೊಯೀ ಸಿಂಗ್ ಹಾಗೂ 88ನೇ ನಿಮಿಷದಲ್ಲಿ ಐಸಾಕ್ ವನಮಾಲ್ ಸ್ವಾಮ ಗಳಿಸಿದ ಗೋಲಿನಿಂದ ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡ

ಜಯೇಶ್ ರಾಣೆ 14ನೇ ನಿಮಿಷದಲ್ಲಿ ಹಾಗೂ ಪೆನಾಲ್ಟಿ ಶೂಟ್ ಮೂಲಕ ಮಾನ್ವೆಲ್ ಲಾನ್ಜೆರೋಟ್ 44ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಎಟಿಕೆ ತಂಡ ಪ್ರಥಮಾರ್ಧದಲ್ಲಿ 2-1 ಗೋಲಿನಿಂದ ಮುನ್ನಡೆ ಕಂಡಿತ್ತು. ಚೆನ್ನೈಯಿನ್ ಪರ ತೋಯಿ ಸಿಂಗ್ 24ನೇ ನಿಮಿಷದಲ್ಲಿ ಗೋಲು ಗಲಿಸಿದ್ದರು.

ಟೆನಿಸ್ ಟೂರ್ನಮೆಂಟ್ ಗೆದ್ದ ಮಾಜಿ ನಾಯಕ ಎಂಎಸ್ ಧೋನಿಟೆನಿಸ್ ಟೂರ್ನಮೆಂಟ್ ಗೆದ್ದ ಮಾಜಿ ನಾಯಕ ಎಂಎಸ್ ಧೋನಿ

44ನೇ ನಿಮಿಷದಲ್ಲಿ ಎಟಿಕೆ ತಂಡಕ್ಕೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಹಿತೇಶ್ ಶರ್ಮಾ ಅವರು ತುಳಿದ ಚೆಂಡಿಗೆ ಎಲಿ ಸಾಬಿಯಾ ಕೈ ಅಡ್ಡಗಟ್ಟಿದರು. ರೆರಿ ಕೂಡಲೇ ಇದನ್ನು ಗುರುತಿಸಿ ಎಟಿಕೆಗೆ ಪೆನಾಲ್ಟಿ ಅವಕಾಶ ನೀಡಿದರು. ಮ್ಯಾನ್ವೆಲ್ ಲಾನ್ಜೆರೋಟ್ ತಾಳ್ಮೆಯ ತುಳಿತದ ಲಯವನ್ನು ಅರಿಯಲಿಲ್ಲ. ಅವರಿಗೆ ವಿರುದ್ಧವಾದ ದಿಕ್ಕಿನಲ್ಲಿ ಚೆಂಡು ನೆಟ್ ಸೇರಿತು. ಎಟಿಕೆ ಪಾಳಯದಲ್ಲಿ ಸಂಭ್ರಮ. ಚೆನ್ನೈ ತಂಡಕ್ಕೆ ಆಂತಕ ಆವರಿಸಿತು.

ತೋಯಿ ಸಮಬಲ

ತೋಯಿ ಸಮಬಲ

ಎಟಿಕೆಯ ಮುನ್ನಡೆಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 24ನೇ ನಿಮಿಷದಲ್ಲಿ ತೋಯಿ ಸಿಂಗ್ ಗಳಿಸಿದ ಮಿಂಚಿನ ಗೋಲಿನಿಂದ ಪಂದ್ಯ ಸಮಬಲಗೊಂಡಿತು. ಇಲ್ಲಿ ಸೋತರೆ ಉಳಿಗಾಲವಿಲ್ಲವೆಂದು ಅರಿತ ಚೆನ್ನೈ ಎಟಿಕೆ ಮುನ್ನಡೆ ಕಂಡ ನಂತರ ಆಕ್ರಮಣಕಾರಿ ಆಟ ಆರಂಭಿಸಿತು. ಚೆಂಡು ಮೈಲ್ಸನ್ ಆಲ್ವೆಸ್ ಕಡೆಗೆ ಸಾಗಿತ್ತು. ಸಣ್ಣ ಸ್ಪರ್ಷದ ಮೂಲಕ ಅಲ್ವೆಸ್ ಚೆಂಡನ್ನು ಪೆನಾಲ್ಟಿ ವಲಯದತ್ತ ಕಳುಹಿಸಿದರು. ಚೆಂಡು ತೋಯಿ ಸಿಂಗ್ ಅವರ ನಿಯಂತ್ರಣಕ್ಕೆ ಸಿಲುಕಿತು. ತೋಯಿ ಸಿಂಗ್ ತುಳಿದ ಚೆಂಡು ಅತ್ಯಂತ ಕೆಳಭಾಗದಲ್ಲಿ ಸಾಗಿ ಬಂತು ಗೋಲ್‌ಕೀಪರ್‌ನನ್ನು ವಂಚಿಸಿತು ಪಂದ್ಯ 1-1ರಲ್ಲಿ ಸಮಬಲ.

ಉತ್ತಮ ರೀತಿಯ ಸ್ಪಂದನೆ

ಉತ್ತಮ ರೀತಿಯ ಸ್ಪಂದನೆ

14ನೇ ನಿಮಿಷದಲ್ಲಿ ಜಯೇಶ್ ರಾಣೆ ಗಳಿಸಿದ ಗೋಲಿನಿಂದ ಎಟಿಕೆ ಮುನ್ನಡೆ ಕಂಡಿತು. ಹೀತೇಶ್ ಶರ್ಮಾ ನೀಡಿದ ಪಾಸ್‌ಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಜಯೇಶ್ 15 ಅಂಡಿಗಳ ಅಂತರದಿಂದ ಚೆಂಡನ್ನು ತುಳಿದರು. ಅತ್ಯಂತ ಎತ್ತರದಲ್ಲಿ ಸಾಗಿದ ಚೆಂಡು ಬಲಭಾಗದ ಅಂಚಿನಿಂದ ಸಾಗಿ ನೆಟ್‌ಗೆ ಮುತ್ತಿಟ್ಟಿತು. ಸಂಜಿಬಾನ್ ಘೋಷ್ ಅಲ್ಲ ಆ ಸ್ಥಾನದಲ್ಲಿ ಯಾರೇ ಗೋಲ್‌ಕೀಪರ್ ಆಗಿದ್ದರೂ ಗೋಲಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ನೆಟ್‌ನ ಅಂಚಿಗೆ ತಗಲಿಕೊಂಡು ಚೆಂಡು ಸಾಗಿತ್ತು.

ಗೆಲ್ಲಬೇಕಿತ್ತು, ಗೆಲ್ಲಲಿಲ್ಲ

ಗೆಲ್ಲಬೇಕಿತ್ತು, ಗೆಲ್ಲಲಿಲ್ಲ

ಚೆನ್ನೈಯಿನ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ನಾಕೌಟ್ ಹಂತ ತಲುಪಬೇಕಾದರೆ ಮನೆಯಂಗಣದಲ್ಲಿ ಎಟಿಕೆ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲ್ಲಲೇಬೇಕಾಗಿತ್ತು. ಚಾಂಪಿಯನ್ ತಂಡ ಮನೆಯಂಗಣದಲ್ಲಿ ಈ ಬಾರಿ ಇದುವರೆಗೂ ಜಯ ಗಳಿಸಿಲ್ಲ.

ಸೋಲು ಖಚಿತವಾಗಿತ್ತು

ಸೋಲು ಖಚಿತವಾಗಿತ್ತು

ಒಂದು ವೇಳೆ ಎಟಿಕೆ ವಿರುದ್ಧ ಸೋಲನುಭವಿಸಿದರೆ ಚೆನ್ನೈ ಚಾಂಪಿಯನ್ ಪಟ್ಟ ಕೈ ಜಾರುವುದು ಸ್ಪಷ್ಟವಾಗಿತ್ತು. ಚೆನ್ನೈನ ಫಾರ್ವರ್ಡ್ ಆಟಗಾರರು ಇದುವರೆಗೂ ಗಳಿಸಿದ್ದು ಕೇವಲ ಒಂದು ಗೋಲು. ಎಟಿಕೆ ಮೂರು ಪಂದ್ಯಗಳಲ್ಲಿ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಅಟ್ಯಾಕ್ ವಿಭಾಗದಲ್ಲಿ ಎಟಿಕೆ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಳಿಸಿದ್ದು ಕೇವಲ ಏಳು ಗೋಲುಗಳು. ಫಾರ್ವರ್ಡ್ ವಿಭಾಗದಲ್ಲಿ ಬಲ್ವಂತ್ ಸಿಂಗ್ ಮಾತ್ರ ಗೋಲು ಗಳಿಸಿದ್ದಾರೆ.

Story first published: Monday, December 3, 2018, 15:11 [IST]
Other articles published on Dec 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X